ನೀವು ವಾಸಮಾಡುವ ಪ್ರದೇಶದಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದ್ಯಾ? ಹಾಗಿದ್ರೆ ನಿಮಗೂ ಬರಬಹುದು ಮರೆವಿನ ಕಾಯಿಲೆ

ನೀವು ವಾಸಮಾಡುವ ಪ್ರದೇಶದಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದ್ಯಾ? ಹಾಗಿದ್ರೆ ನಿಮಗೂ ಬರಬಹುದು ಮರೆವಿನ ಕಾಯಿಲೆ

 

ಮಾಲಿನ್ಯದಿಂದ ಆರೋಗ್ಯ ಹಾಳಾಗುತ್ತದೆ ಎಂಬುದು ತಿಳಿದ ವಿಚಾರ. ಇದರ ಪರಿಣಾಮ ಹೆಚ್ಚಾಗಿ ಶ್ವಾಸಕೋಶಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ನಾವೆಲ್ಲಾ ಅಂದುಕೊಂಡಿದ್ದೇವೆ ಆದರೆ ಇತ್ತೀಚಿಗೆ ನಡೆದ ಸಂಶೋಧನೆ ಮೆದುಳಿನ ಮೇಲೂ ಪರಿಣಾಮ ಬೀರುತ್ತದೆ ಎಂಬ ಆತಂಕಕಾರಿ ಮಾಹಿತಿಯನ್ನು ಬಹಿರಂಗಪಸಿದೆ. ಹಾಗಾದರೆ ಮಾಲಿನ್ಯ ಈ ಕಾಯಿಲೆಯ ಅಪಾಯವನ್ನು ಹೇಗೆ ಹೆಚ್ಚಿಸುತ್ತಿದೆ, ಅಧ್ಯಯನದಿಂದ ಸಿಕ್ಕ ಮತ್ತಷ್ಟು ಮಾಹಿತಿಗಳು ಹೇಳುವುದೇನು ಎಂಬುದನ್ನು ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಸ್ಟೋರಿಯಲ್ಲಿದೆ.

Air Polution

ವಾಯು ಮಾಲಿನ್ಯವು ವಿಶ್ವಾದ್ಯಂತ ಹೆಚ್ಚುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ. ಈ ಮಾಲಿನ್ಯವು ಶ್ವಾಸಕೋಶದ (Lungs) ಮೇಲೆ ಪರಿಣಾಮ ಬೀರುತ್ತದೆ ಎಂಬುದು ಸ್ಪಷ್ಟ, ಆದರೆ ಇತ್ತೀಚಿನ ಅಧ್ಯಯನವು ಇದು ಅಲ್ಝೈಮರ್ ( Alzheimer’s) ಕಾಯಿಲೆಯನ್ನು ಹೆಚ್ಚಿಸುತ್ತದೆ ಎಂಬುದನ್ನು ಬಹಿರಂಗಪಡಿಸಿದೆ. ನಿಮಗೆ ತಿಳಿದಿರುವಂತೆ ಇದೊಂದು ಮರೆವಿನ ಕಾಯಿಲೆ ಇದರಲ್ಲಿ ವ್ಯಕ್ತಿಯ ಸ್ಮರಣಶಕ್ತಿ ತುಂಬಾ ದುರ್ಬಲಗೊಂಡು ತಮ್ಮ ದೈನಂದಿನ ಕೆಲಸಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಹಾಗಾದರೆ ಮಾಲಿನ್ಯ ಈ ಕಾಯಿಲೆಯ ಅಪಾಯವನ್ನು ಹೇಗೆ ಹೆಚ್ಚಿಸುತ್ತಿದೆ, ಅಧ್ಯಯನದಿಂದ ಸಿಕ್ಕ ಮತ್ತಷ್ಟು ಮಾಹಿತಿಗಳು ಹೇಳುವುದೇನು ಎಂಬುದನ್ನು ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಸ್ಟೋರಿಯಲ್ಲಿದೆ.

 

ವಾಯು ಮಾಲಿನ್ಯದಿಂದ ಅಲ್ಝೈಮರ್ ಹೇಗೆ ಉಂಟಾಗುತ್ತದೆ?

ಈ ಸಂಶೋಧನೆಯನ್ನು ಎಮೋರಿ ವಿಶ್ವವಿದ್ಯಾಲಯದ ತಂಡ ವೃದ್ಧರ ಮೇಲೆ ನಡೆಸಿದ್ದು ಅಧ್ಯಯನವು ಮಾಲಿನ್ಯದಲ್ಲಿರುವ ಅತ್ಯಂತ ಸಣ್ಣ ಕಣಗಳು ಉಸಿರಾಟದ ಮೂಲಕ ದೇಹವನ್ನು ಪ್ರವೇಶಿಸಿ ರಕ್ತಪ್ರವಾಹವನ್ನು ತಲುಪಬಹುದು ಇದೆ ಕಣಗಳು ಮುಂದೆ ಆಲ್ಝೈಮರ್ನ ಅಪಾಯವನ್ನು ಹೆಚ್ಚಿಸಬಹುದು ಎಂಬುದನ್ನು ಕಂಡುಹಿಡಿದಿದೆ. ಕಲುಷಿತ ಕಣಗಳು ಮೆದುಳನ್ನು ಪ್ರವೇಶಿಸಿ ಮೆದುಳಿನ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುವುದರಿಂದ ಈ ರೀತಿಯ ಅಪಾಯ ಹೆಚ್ಚಾಗುತ್ತದೆ. ಅದರಲ್ಲಿಯೂ ವಯಸ್ಸಾದವರಲ್ಲಿ ಇದು ಹೆಚ್ಚಾಗಿ ಕಂಡುಬರಬಹುದು. ಜೊತೆಗೆ ಈ ಹಿಂದೆ ಪಾರ್ಶ್ವವಾಯುವಿಗೆ ಒಳಗಾದವರಿಗೆ ಮಾಲಿನ್ಯದಿಂದಾಗಿ ಆಲ್ಝೈಮರ್ ಬರುವ ಅಪಾಯ ಹೆಚ್ಚಿದ್ದು ಅಧಿಕ ರಕ್ತದೊತ್ತಡ, ಪಾರ್ಶ್ವವಾಯು ಮತ್ತು ಖಿನ್ನತೆಗೆ ಕಾರಣವಾಗಬಹುದು.

ವಾಯು ಮಾಲಿನ್ಯದಿಂದ ದೇಹವನ್ನು ಸೇರುವ ಕಣಗಳು ಮೆದುಳಿನಲ್ಲಿ ಉರಿಯೂತವನ್ನು ಉಂಟುಮಾಡುತ್ತವೆ, ಇದರಿಂದ ನರ ಅಸ್ವಸ್ಥತೆಗಳ ಅಪಾಯ ಹೆಚ್ಚಾಗುತ್ತದೆ, ಮೆದುಳಿನ ಕೋಶಗಳ (ನ್ಯೂರಾನ್‌ಗಳು) ನಡುವಿನ ಸಂವಹನವು ದುರ್ಬಲಗೊಳ್ಳುತ್ತದೆ. ಅಷ್ಟೇಅಲ್ಲ ಇದು ಮೆದುಳಿನಲ್ಲಿ ಟೌ ಪ್ರೋಟೀನ್ ಸಂಗ್ರಹಕ್ಕೂ ಕಾರಣವಾಗುತ್ತದೆ. ಇದು ಮೆದುಳಿನ ಸ್ಮರಣಶಕ್ತಿಗೆ ಸಂಬಂಧಿಸಿದ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ ಕ್ರಮೇಣ ಆಲ್ಝೈಮರ್‌ಗೆ ಕಾರಣವಾಗಬಹುದು. ಹಾಗಾಗಿ ಮಾಲಿನ್ಯ ಹೆಚ್ಚಿರುವ ಪ್ರದೇಶಗಳಲ್ಲಿ ವಾಸಿಸುವವರು ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ಸಂಶೋಧನೆ ಹೇಳುತ್ತದೆ. ಮಾಲಿನ್ಯವು ಶ್ವಾಸಕೋಶದ ಕ್ಯಾನ್ಸರ್ ಮತ್ತು ಆಸ್ತಮಾದಂತಹ ಶ್ವಾಸಕೋಶದ ಕಾಯಿಲೆಗಳನ್ನು ಉಂಟುಮಾಡುವುದಲ್ಲದೆ, ಮೆದುಳಿಗೆ ಹಾನಿ ಮಾಡುತ್ತಿದೆ. ಇದು ಆಲ್ಝೈಮರ್ ಅಪಾಯವನ್ನು ಹೆಚ್ಚಿಸುತ್ತದೆ.

Be the first to comment

Leave a Reply

Your email address will not be published. Required fields are marked *

ad image