ಬಿಗ್ ಬಾಸ್ ಶೋ ಮುಗಿದರೂ ರಂಪಾಟ ಇನ್ನೂ ಮುಗಿದಿಲ್ಲ: ಅಶ್ವಿನಿ – ಚೈತ್ರಾ – ಜಾಹ್ನವಿ ಮಧ್ಯೆ ಕಾಮೆಂಟ್ ವಾರ್!

ಬಿಗ್ ಬಾಸ್ ಶೋ ಮುಗಿದರೂ ರಂಪಾಟ ಇನ್ನೂ ಮುಗಿದಿಲ್ಲ: ಅಶ್ವಿನಿ – ಚೈತ್ರಾ – ಜಾಹ್ನವಿ ಮಧ್ಯೆ ಕಾಮೆಂಟ್ ವಾರ್!

‘ಬಿಗ್‌ ಬಾಸ್‌ ಕನ್ನಡ ಸೀಸನ್‌-12’ ಸಾಕಷ್ಟು ಸದ್ದು ಮಾಡಿದ ಆವೃತ್ತಿ. ಸೀಸನ್‌ ಮುಕ್ತಾಯವಾಗಿ ವಾರಗಳು ಉರುಳಿದರೂ, ಅಲ್ಲಿ ನಡೆದ ಘಟನೆಗಳ ಕುರಿತ ಬಿಸಿ ಬಿಸಿ ಚರ್ಚೆಗಳು ಮುಂದುವರೆದಿವೆ. ಆಟದ ಭರದಲ್ಲಿ ಹೊತ್ತಿದ ಕಿಡಿ ಈಗ ಸೋಶಿಯಲ್‌ ಮೀಡಿಯಾದ ಕಾಮೆಂಟ್ ಬಾಕ್ಸ್‌ನಲ್ಲಿ ಧಗಧಗಿಸುತ್ತಿದೆ. ಅಶ್ವಿನಿ ಗೌಡ ಬೆಂಬಲಿಗರು ವರ್ಸಸ್‌ ಚೈತ್ರಾ ಕುಂದಾಪುರ ನಡುವೆ ಕಾಮೆಂಟ್‌ ಸಮರ ಶುರುವಾಗಿದೆ.
ಬಿಗ್ ಬಾಸ್ ಶೋ ಮುಗಿದರೂ ರಂಪಾಟ ಇನ್ನೂ ಮುಗಿದಿಲ್ಲ: ಅಶ್ವಿನಿ - ಚೈತ್ರಾ - ಜಾಹ್ನವಿ ಮಧ್ಯೆ ಕಾಮೆಂಟ್ ವಾರ್!
ಹೈಲೈಟ್ಸ್‌:

  • ಬಿಗ್‌ ಬಾಸ್‌ ಮನೆಯಲ್ಲಿ ನಡೆದ ಅಶ್ವಿನಿ ಗೌಡ-ಚೈತ್ರಾ ಟಾಸ್ಕ್‌ ಗಲಾಟೆ, ಗಾಯ!
  • ಜಾಹ್ನವಿ-ಚೈತ್ರಾ ಕುಂದಾಪುರ ಕಾಮೆಂಟ್ ಸಮರ
  • ಖಾಸಗಿ ವಾಹಿನಿಯ ಆಂಕರ್ ಪೋಸ್ಟ್‌ನಲ್ಲಿ ಪರಸ್ಪರ ಕಿತ್ತಾಟ

    ‘ ಬಿಗ್‌ ಬಾಸ್‌ ಕನ್ನಡ ಸೀಸನ್‌-12’ ಯಶಸ್ವಿಯಾಗಿ ಮುಕ್ತಾಯವಾಗಿ ಅದಾಗಲೇ 3 ವಾರ ಕಳೆದಿವೆ. ಆಟದಲ್ಲಿ ನಡೆದ ಎಡವಟ್ಟುಗಳು, ಮಾತುಗಳಿಂದ ಆದ ಘಾಸಿ ಕುರಿತು ಸ್ಪರ್ಧಿಗಳು ಮಾತಾಡಿ ನಿರಾಳ ಆಗಿದ್ದಾರೆ. ವೀಕ್ಷಕರಿಗೂ ಅಷ್ಟೆ, ಹಿಂದೆ ನಡೆದ ಟಾಸ್ಕ್ ಘಟನೆಗಳ ಕುರಿತು ನೆನಪು ಮಾಸುವ ಹಂತದಲ್ಲಿದೆ. ಈ ನಡುವೆ ಸೋಶಿಯಲ್‌ ಮೀಡಿಯಾದಲ್ಲಿ ಅಶ್ವಿನಿ ಗೌಡ ಅವರ ಬೆಂಬಲಿಗರು, ಫ್ಯಾನ್ಸ್‌ ಹಾಗೂ ಚೈತ್ರಾ ಕುಂದಾಪುರ ನಡುವೆ ಜೋರು ಕಾಮೆಂಟ್‌ ಸಮರ ನಡೆಯುತ್ತಿದೆ. ಪರಸ್ಪರ ಟಾಂಗ್ ಕೊಡುತ್ತಿದ್ದಾರೆ. ಅಶ್ವಿನಿ ಗೌಡ ಅವರ ಪರ ಸಹ ಸ್ಪರ್ಧಿಯಾಗಿದ್ದ ಜಾಹ್ನವಿ ಅವರು ಬ್ಯಾಟ್‌ ಬೀಸಿದ್ದಾರೆ.

Be the first to comment

Leave a Reply

Your email address will not be published. Required fields are marked *

ad image