ಕೊಪ್ಪಳದಲ್ಲಿ ಗಮನ ಸೆಳೆಯುತ್ತಿದೆ ಜಗತ್ತಿನ ದುಬಾರಿ ಅಣಬೆ – ಪ್ರತಿ ಕೆಜಿಗೆ 15 ಲಕ್ಷ ರೂ

ಕೊಪ್ಪಳ: ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆ ಆಯೋಜಿಸಿದ ಹಣ್ಣು ಮೇಳದಲ್ಲಿ ಅಣಬೆ ಗಮನ ಸೆಳೆಯುತ್ತಿದ್ದು, ಪ್ರತಿ ಕೆ.ಜಿಗೆ 15 ಲಕ್ಷ ರೂ.ಯಂತೆ ಮಾರಾಟಕ್ಕಿಡಲಾಗಿದೆ.

ಕೊಪ್ಪಳ ತೋಟಗಾರಿಕೆ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಹಣ್ಣು ಮೇಳದಲ್ಲಿ ಹಿಮಾಲಯದ ತಪ್ಪಲಲ್ಲಿ ಸಿಗುವ ಅಣಬೆ ಗಮನ ಸೆಳೆಯುತ್ತಿದೆ. ಇದನ್ನು ಯಾರ್ಸಗುಂಬಾ ಅಣಬೆ ಎಂದು ಗುರುತಿಸಲಾಗಿದ್ದು, ಪ್ರತಿ ಕೆ.ಜಿಗೆ 15 ಲಕ್ಷ ರೂ.ಯಂತೆ ಮಾರಾಟಕ್ಕಿಡಲಾಗಿದೆ. ಅದರ ಜೊತೆಗೆ ಹಲವು ಬಗೆಯ ಅಣಬೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ

ಈ ಯಾರ್ಸಗುಂಬಾ ಅಣಬೆಯು ಔಷಧಿ ಗುಣ ಹೊಂದಿದ್ದು, ನೇಪಾಳದಿಂದ ತಂದು ಪ್ರದರ್ಶನಕ್ಕೆ ಇಡಲಾಗಿದೆ. ಸುಮಾರು ಒಂದು ಲಕ್ಷ ರೂ. ಮೌಲ್ಯದ ಯಾರ್ಸಗುಂಬಾ ಅಣಬೆಯನ್ನು ತಂದಿಟ್ಟಿದ್ದಾರೆ. ಶಿವರಾತ್ರಿ ಅಂಗವಾಗಿ ತೋಟಗಾರಿಕೆ ಇಲಾಖೆಯಿಂದ ಇಂದಿನಿಂದ ಐದು ದಿನಗಳ ಕಾಲ ಹಣ್ಣು, ಅಣಬೆ, ಜೇನುಮೇಳ ನಡೆಯುತ್ತಿದೆ

 

Be the first to comment

Leave a Reply

Your email address will not be published. Required fields are marked *

ad image