9 ತಿಂಗಳ ಗರ್ಭಿಣಿ ಪತ್ನಿಗೆ ಚಿತ್ರಹಿಂಸೆ.. ಹೆಂಡತಿ ಮೇಲೆ ಅದೆಂಥ ಅನುಮಾನದ ಭೂತ..?

9 ತಿಂಗಳ ಗರ್ಭಿಣಿ ಪತ್ನಿಗೆ ಚಿತ್ರಹಿಂಸೆ.. ಹೆಂಡತಿ ಮೇಲೆ ಅದೆಂಥ ಅನುಮಾನದ ಭೂತ..?

ಬೆಂಗಳೂರು: ಅನೈತಿಕ ಸಂಬಂಧ ಆರೋಪ ಮಾಡಿ ಗರ್ಭಿಣಿ ಪತ್ನಿಯ ಮೇಲೆ‌ ಹಲ್ಲೆ ಮಾಡಿದ ಕೇಸ್​ ದಕ್ಷಿಣ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಸುಮಾರು 8 ವರ್ಷಗಳ ಹಿಂದೆ ಜ್ಯೋತಿ ಹಾಗೂ ಅನುರಾಗ ಪಾಂಡೆ ಅನ್ನೋರು ಉತ್ತರ ಪ್ರದೇಶದಲ್ಲಿ ಮದುವೆಯಾಗಿದ್ದರು. ಅನುರಾಗ ಬೆಂಗಳೂರಲ್ಲಿ ಕೆಲಸ ಮಾಡ್ತಿದ್ದರಿಂದ ಜ್ಯೋತಿಯನ್ನ ಇಲ್ಲಿಗೆ ಕರೆದುಕೊಂಡು ಬಂದಿದ್ದ. ನಾಲ್ಕು ವರ್ಷಗಳ ಕಾಲ ಪತ್ನಿ ಜೊತೆ ಚೆನ್ನಾಗಿದ್ದ ಪತಿ ನಂತರ ಕಿರುಕುಳ ನೀಡಲು ಶುರಮಾಡಿದ್ದ ಎಂಬ ಆರೋಪ ಇದೆ.

ಮೊದಲು ಗರ್ಭಿಣಿ ಇದ್ದಾಗಲೂ ಹಿಂಸೆ

ಅನೈತಿಕ ಸಂಬಂಧ ಆರೋಪ ಮಾಡಿ ಪತ್ನಿ‌ಯ ಮೇಲೆ ಹಲ್ಲೆ ಮಾಡುತ್ತಿದ್ದ ಎಂಬ ಆರೋಪ ಇದೆ. ಮೊದಲು ಗರ್ಭ ಧರಿಸಿದ್ದಾಗಲೂ ಆಕೆಯನ್ನು ಅನುಮಾನದಿಂದ ಕಂಡು ಹಲ್ಲೆ ಮಾಡಿದ್ದ. ಬಳಿಕ ಗಂಡು ಮಗು ಹುಟ್ಟಿದ ಮೇಲೆ ಕೆಲ ವರ್ಷ ಸುಮ್ಮನಿದ್ದ. ಕೊನೆಗೆ ಮತ್ತೆ ಅನುಮಾನದಿಂದ ಕಿರುಕುಳ ನೀಡಲು ಶುರುಮಾಡಿದ್ದ. ಎರಡನೇ ಬಾರಿ ಗರ್ಭಿಣಿ ಆದ ಮೇಲೆ ಮತ್ತೆ ಅನುಮಾನ ಶುರುವಾಗಿತ್ತಂತೆ. ಇದೀಗ 9 ತಿಂಗಳ ಗರ್ಭಿಣಿಯಾದ ಮೇಲೆ ಅತ್ತೆ, ಮಾವ, ಪತಿಯಿಂದ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಇದರಿಂದ ಗಾಬರಿಯಾದ ಜ್ಯೋತಿ ತವರು ಮನೆಗೆ ಹೋಗಿದ್ದಳು. ಎರಡನೇ ಮಗು ಜನಿಸಿದ ಮೇಲೆ ಮತ್ತೆ ಬೆಂಗಳೂರಿಗೆ ಬಂದಿದ್ದಳು. ಈಗ ಮತ್ತೆ ಹೊಡೆದು ದೈಹಿಕ ಹಿಂಸೆ ನೀಡುತ್ತಿರೋದಾಗಿ ದೂರಿನಲ್ಲಿ ತಿಳಿಸಿದ್ದಾಳೆ. ಮಾವ ರಾಮಪ್ರಸಾದ್, ಅತ್ತೆ ರಾಣಿ, ಪತಿ ಅನುರಾಗ ಮೇಲೆ ಜ್ಯೋತಿ ದೂರು ನೀಡಿದ್ದಾಳೆ. ನನ್ನ ಮೇಲೆ ಹಲ್ಲೆ ಮಾಡಿ ಮನೆಯಿಂದ ಆಚೆ ಹಾಕಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ಕೊಟ್ಟಿದ್ದಾಳೆ.

Be the first to comment

Leave a Reply

Your email address will not be published. Required fields are marked *

ad image