
ಶಿವಮೊಗ್ಗ: ಸೂಳೆಬೈಲು ಸರಕಾರಿ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಹಿನ್ನಲೆಯಲ್ಲಿ ವಿದ್ಯಾರ್ಥಿಗಳಿಗೆ ಸ್ಪೆಷಲ್ ಕ್ಲಾಸ್ ಇತ್ತು. ಇದೇ ಸೂಳೆಬೈಲು ಬಡಾವಣೆಯ ಸಂಕೇತ್ ಕ್ಲಾಸ್ ಮುಗಿಸಿಕೊಂಡು ವಾಪಸ್ ಮನೆಯತ್ತ ಹೋಗುವಾಗ ಸ್ನೇಹಿತ ಗಿರೀಶ್ ಮೇಲೆ ಅದೇ ಬಡಾವಣೆಯ ಐವರು ಬಾಲಕರು ಏಕಾಏಕಿ ಹಲ್ಲೆ ಮಾಡುತ್ತಿದ್ದರು. ಈ ನಡುವೆ ಗಿರೀಶ್ನ ಬಚಾವ್ ಮಾಡಲು ಅಲ್ಲಿಗೆ ಸಂಕೇತ್ ಹೋಗಿದ್ದಾನೆ. ಆ ಐವರು ಬಾಲಕರು ಸಂಕೇತ್ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ಸಂಕೇತ್ ಅಲ್ಲಿಯೇ ಕುಸಿದು ಬಿದ್ದಿದ್ದಾನೆ. ಗಿರೀಶ್ ತನ್ನ ಮನೆಯವರಿಗೆ ಮತ್ತು ಅಕ್ಕಪಕ್ಕದವರಿಗೆ ಗಲಾಟೆ ಬಗ್ಗೆ ಮಾಹಿತಿ ಕೊಟ್ಟಿದ್ದಾನೆ. ಇದರಿಂದ ಅಕ್ಕಪಕ್ಕದವರು ಅಲ್ಲಿಗೆ ಹೋಗಿ ನೋಡಿದಾಗ ಹಲ್ಲೆಗೊಳಗಾದ ಸಂಕೇತ್ ಸ್ಥಿತಿ ಗಂಭೀರವಾಗಿತ್ತು. ಕೂಡಲೇ ಆತನನ್ನು ಖಾಸಗಿ ಆಸ್ಪತ್ರೆಗೆ ಕೆರೆದುಕೊಂಡು ಹೋದರು. ಆದರೆ ಮಾರ್ಗ ಮಧ್ಯೆಯೇ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು.
ಗಿರೀಶ್ ಮತ್ತು ಮೃತ ಸಂಕೇತ್ ಅತ್ಯುತ್ತಮ ಸ್ನೇಹಿತರಾಗಿದ್ದರು. ಈ ಹಿನ್ನಲೆಯಲ್ಲಿ ಗಿರೀಶ್ ಮೇಲೆ ಅನ್ಯಕೋಮಿನ ಬಾಲಕರು ಹಲ್ಲೆ ಮಾಡುವ ಸಂದರ್ಭದಲ್ಲಿ ಸ್ನೇಹಿತನ ಬಚಾವ್ ಮಾಡಲು ಸಂಕೇತ್ ಎಂಟ್ರಿ ಕೊಟ್ಟಿದ್ದ. ಗಿರೀಶ್ನನ್ನು ಬಚಾವ್ ಮಾಡುವ ಸಂದರ್ಭದಲ್ಲಿ ಬಾಲಕರು ಗಿರೀಶ್ನನ್ನು ಬಿಟ್ಟು ಸಂಕೇತ್ ಮೇಲೆ ಹಲ್ಲೆ ಮಾಡಿದ್ದಾರೆ. ಎದೆ, ಮುಖ, ಹೊಟ್ಟೆ ಮೇಲೆ ಹೊಡೆದಿದ್ದಾರೆ. ಇದರಿಂದ ಸಂಕೇತ್ ಅಸ್ವಸ್ಥಗೊಂಡು ಅಲ್ಲಿಯೇ ಕುಸಿದು ಬಿದ್ದಿದ್ದಾನೆ. ಆಸ್ಪತ್ರೆಗೆ ದಾಖಲಿಸುವ ಮೊದಲೇ ಅಸುನೀಗಿದ್ದಾನೆ.
ಗಾಂಜಾ ನಶೆಯಲ್ಲಿದ್ದ ಅಪ್ರಾಪ್ತ ಬಾಲಕರು ಈ ಕೃತ್ಯ ಎಸಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದು, ಪಾಪ ಕಣ್ರೀ, ಆ ಹುಡುಗನನ್ನು ಸಾಯಿಸಿಬಿಟ್ರು ಎಂದು ಘಟನೆಯ ವಿವರವನ್ನು ಸ್ಥಳೀಯ ನಿವಾಸಿಯಾಗಿರುವ ಮುನ್ನಾ ವಿವರಿಸಿದ್ದಾರೆ. ಗಾಂಜಾ ಹೊಡೆದು ತಿರುಗುವ ಅಪ್ರಾಪ್ತ ಹುಡುಗರಿಂದಲೇ ಈ ಕೃತ್ಯ ನಡೆದಿದೆ ಎಂದು ಮುನ್ನಾ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಭಾಗದಲ್ಲಿ 14 ರಿಂದ 15 ವರ್ಷದ ಹುಡುಗರು ಗಾಂಜಾ ಸೇವಿಸುತ್ತಾರೆ. ಶಾಲೆಗೆ ಹೋಗ್ತೀವಿ ಅಂತಾರೆ ಆದರೆ ಯಾರು ಶಾಲೆಗೆ ಹೋಗಲ್ಲ . ಗಾಂಜಾ ಸೇವಿಸಿ ಆ ನಶೆಯಲ್ಲಿ ಏರಿಯಾದಲೆಲ್ಲಾ ದಾಂಧಲೆ ಮಾಡ್ತಾರೆ. ಬೇಕಾಬಿಟ್ಟಿ ಬೈಕ್ ಚಲಾಯಿಸುತ್ತಾರೆ ಕೇಳಿದರೆ ನಿಮ್ಮ ಅಪ್ಪಂದ ರಸ್ತೆ ಎಂದು ನಮ್ಮೆಲ್ಲರ ಜೊತೆ ಜಗಳಕ್ಕೆ ಬರ್ತಾರೆ. ಪಾಪ ಕಣ್ರೀ ಆ ಹುಡುಗನನ್ನ ಅನ್ಯಾಯವಾಗಿ ಸಾಯಿಸಿಬಿಟ್ಟ್ರು ಎಂದು ಹೇಳಿದರು.






Be the first to comment
Leave a Reply