ಮಂತ್ರಾಲಯದಲ್ಲಿ ರಾಘವೇಂದ್ರ ರಾಜಕುಮಾರ್‌ಗೆ ಫ್ಲೋರಿಡಾ ವಿವಿ ಗೌರವ ಡಾಕ್ಟರೇಟ್ ಪ್ರದಾನ: ಶ್ರೀಗಳಿಂದ ಸನ್ಮಾನ

ಮಂತ್ರಾಲಯದಲ್ಲಿ ರಾಘವೇಂದ್ರ ರಾಜಕುಮಾರ್‌ಗೆ ಫ್ಲೋರಿಡಾ ವಿವಿ ಗೌರವ ಡಾಕ್ಟರೇಟ್ ಪ್ರದಾನ: ಶ್ರೀಗಳಿಂದ ಸನ್ಮಾನ

ರಾಯಚೂರು: ಮಂತ್ರಾಲಯದಲ್ಲಿ ರಾಯರ ಗುರುವೈಭವೋತ್ಸವ ಸಂಭ್ರಮ ಮನೆಮಾಡಿದ್ದು, ಮಠದ ಕಾರ್ಯಕ್ರಮದಲ್ಲಿ ಅಮೆರಿಕದ ಫ್ಲೋರಿಡಾ ವಿವಿಯ ಗೌರವ ಡಾಕ್ಟರೇಟ್ ಪದವಿಗಳನ್ನ ಪ್ರದಾನ ಮಾಡಲಾಯಿತು. ಹಿರಿಯ ನಟ ರಾಘವೇಂದ್ರ ರಾಜಕುಮಾರ್ ಹಾಗೂ ಇತರ ಗಣ್ಯರಿಗೆ ವಿವಿಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ರಾಯರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಡಾಕ್ಟರೇಟ್ ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ನಟರಾದ ವಿನಯ್ ರಾಜಕುಮಾರ್, ಯುವರಾಜಕುಮಾರ್ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಹಿರಿಯ ನಟ ರಾಘವೇಂದ್ರ ರಾಜಕುಮಾರ್ ಅವರು, ನಮ್ಮ ತಂದೆ `ಮಂತ್ರಾಲಯ ಮಹಾತ್ಮೆ’ ಸಿನಿಮಾದಲ್ಲಿ ರಾಘವೇಂದ್ರ ಸ್ವಾಮಿಗಳ ಪಾತ್ರ ಮಾಡುತ್ತಿದ್ದರು. ಆಗ ನಾನು ಜನಿಸಿದ್ದರಿಂದ ನನಗೆ ರಾಘವೇಂದ್ರ ಅಂತ ಹೆಸರು ಇಡಲಾಯಿತು. ಈಗ ಅದು ರಾಘವೇಂದ್ರ ರಾಜಕುಮಾರ್‌ನಾಗಿ ಬೆಳೆದು ಬಂದಿದೆ ಎಂದರು.

ನನಗೆ ಸಿಕ್ಕ ಗೌರವ ಡಾಕ್ಟರೇಟ್‌ನ್ನ ರಾಘವೇಂದ್ರ ಸ್ವಾಮಿಗಳ ಪಾದಕ್ಕೆ ಅರ್ಪಿಸುತ್ತೇನೆ. ನಾನೇನು ಸಾಧನೆ ಮಾಡಿದ್ದೇನೆ ಎಂದು ಈ ಗೌರವ ಕೊಟ್ಟರೋ ಗೊತ್ತಿಲ್ಲ, ಆದರೆ ಈಗ ಜವಾಬ್ದಾರಿ ಮತ್ತು ಭಯ ಎರಡೂ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಜನರ ಮಧ್ಯೆ ಇದ್ದು ಸಮಾಜ ಸೇವೆ ಮಾಡುತ್ತೇನೆ. ಈ ಗೌರವವು ತಮ್ಮ ತಂದೆ-ತಾಯಿಯ ಆಶೀರ್ವಾದದಿಂದ ಲಭಿಸಿದೆ. ಇವತ್ತು ನನ್ನ ತಂದೆ ತಾಯಿ ತಮ್ಮನನ್ನ ಮಿಸ್ ಮಾಡಿಕೊಳ್ತಾಯಿದಿನಿ ಎಂದು ತಿಳಿಸಿದರು.

Tags :

raichur

Be the first to comment

Leave a Reply

Your email address will not be published. Required fields are marked *

ad image