ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹೀಗಾಗಿ ಅಲ್ಲು ಕುಟುಂಬ ಹಾಗೂ ಮೆಗಾಸ್ಟಾರ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಅಲ್ಲು ಅರ್ಜುನ್ ಇತ್ತೀಚೆಗೆ ಹೈದರಾಬಾದ್‌ನಲ್ಲಿ ತಮ್ಮ ಸಹೋದರ ಅಲ್ಲು ಸಿರೀಶ್ ಮತ್ತು ನಯನಿಕಾ ರೆಡ್ಡಿ ಅವರಿಗೆ ಕಾಕ್‌ಟೈಲ್ ಪಾರ್ಟಿಯನ್ನು ಆಯೋಜಿಸಿದ್ದರು. ಆ ಪಾರ್ಟಿಗೆ ರಾಮ್ ಚರಣ್ (Ram Charan) ಕೂಡ ಹೋಗಿದ್ದರು. ಈ ಪಾರ್ಟಿಗೆ ಹೋಗಿದ್ದಕ್ಕೆ ರಾಮ್ ಚರಣ್ ವಿರುದ್ಧ ನೆಟ್ಟಿಗರು ಅಸಮಾಧಾನ ಹೊರ ಹಾಕಿದ್ದಾರೆ. ಅಷ್ಟಕ್ಕೂ ಈ ಅಸಮಾಧಾನಕ್ಕೆ ಕಾರಣ ಏನು?

ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್ (Allu Sirish) ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹೀಗಾಗಿ ಅಲ್ಲು ಕುಟುಂಬ ಹಾಗೂ ಮೆಗಾಸ್ಟಾರ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಅಲ್ಲು ಅರ್ಜುನ್ (allu Arjun) ಇತ್ತೀಚೆಗೆ ಹೈದರಾಬಾದ್‌ನಲ್ಲಿ ತಮ್ಮ ಸಹೋದರ ಅಲ್ಲು ಸಿರೀಶ್ ಮತ್ತು ನಯನಿಕಾ ರೆಡ್ಡಿ ಅವರಿಗೆ ಕಾಕ್‌ಟೈಲ್ ಪಾರ್ಟಿಯನ್ನು ಆಯೋಜಿಸಿದ್ದರು. ಆ ಪಾರ್ಟಿಗೆ ರಾಮ್ ಚರಣ್ (Ram Charan) ಕೂಡ ಹೋಗಿದ್ದರು. ಈ ಪಾರ್ಟಿಗೆ ಹೋಗಿದ್ದಕ್ಕೆ ರಾಮ್ ಚರಣ್ ವಿರುದ್ಧ ನೆಟ್ಟಿಗರು ಅಸಮಾಧಾನ ಹೊರ ಹಾಕಿದ್ದಾರೆ. ಅಷ್ಟಕ್ಕೂ ಈ ಅಸಮಾಧಾನಕ್ಕೆ ಕಾರಣ ಏನು?
ಅಯ್ಯಪ್ಪ ಸ್ವಾಮಿ ಮಾಲೆ
ರಾಮ್ ಚರಣ್ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಪಾರ್ಟಿಗೆ ಹೋಗಿದ್ದಕ್ಕೆ ಗರಂ ಆಗಿದ್ದಾರೆ ನೆಟ್ಟಿಗರು. ರಾಮ್ ಚರಣ್ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಎಣ್ಣೆ, ಮಾಂಸ ಪದಾರ್ಥಗಳು ಇರುವ ಇಂತಹ ಪಾರ್ಟಿಗೆ ಯಾಕೆ ಹೋಗಬೇಕಿತ್ತು ಅಂತ ಕಮೆಂಟ್ ಮಾಡಿದ್ದಾರೆ. ಪಾರ್ಟಿಯಲ್ಲಿ ರಾಮ್ ಚರಣ್ ಭಾಗಿಯಾಗಿದ್ದರಿಂದ ಟ್ರೋಲ್‌ಗಳಿಗೆ ಗುರಿಯಾಗಿದ್ದರು.
ರಾಮ್ ಚರಣ್ ಪತ್ನಿ ಉಪಾಸನಾ ಅವರೊಂದಿಗೆ ಪಾರ್ಟಿಯಲ್ಲಿ ಭಾಗವಹಿಸುತ್ತಿರುವ ವಿಡಿಯೋ ಇಲ್ಲಿದೆ. ಪಾರ್ಟಿಯ ಚಿತ್ರಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಅಲ್ಲು ಸಿರೀಶ್, ತಮ್ಮ ಪೋಸ್ಟ್‌ನ ಕಾಮೆಂಟ್‌ಗಳ ವಿಭಾಗದಲ್ಲಿ ಟ್ರೋಲ್ ಮಾಡಿದ ಕಾಮೆಂಟ್‌ಗೆ ಪ್ರತ್ಯುತ್ತರಿಸಿದ್ದಾರೆ. ಒಬ್ಬ ನೆಟ್ಟಿಗರು ರಾಮ್ ಚರಣ್ ಅವರನ್ನು ಅಪಹಾಸ್ಯ ಮಾಡುತ್ತಾ “ಚರಣ್ ಸ್ವಾಮಿ” ಎಂದು ಬರೆದಿದ್ದಾರೆ.
ಅಲ್ಲು ಸಿರೀಶ್ ಕೊಟ್ಟ ಕ್ಲಾರಿಟಿ ಏನು?
ಇದಕ್ಕೆ ಅಲ್ಲು ಸಿರೀಶ್, “ಪಾರ್ಟಿ ಮಾಡುವ ಮೊದಲೇ ಸ್ವಾಮಿ ಬಂದು ಹೋದರು . ನಮಗೆ ವಿಶ್ ಮಾಡಿ ಹೊರಟುಹೋದರು. ಅಯ್ಯಪ್ಪ ಸ್ವಾಮಿಗೆ ಅವರ ಸಮರ್ಪಣೆ ತುಂಬಾ ಇಷ್ಟವಾಯಿತು!” ಎಂದು ಬರೆದಿದ್ದಾರೆ. ಈ ಬಗ್ಗೆ ರಾಮ್ ಚರಣ್ ಪ್ರತಿಕ್ರಿಯೆ ಇನ್ನೂ ನೀಡುವುದಕ್ಕೆ ಹೋಗಿಲ್ಲ.
ನಟ ಅಲ್ಲು ಸಿರೀಶ್ ತಮ್ಮ ಪ್ರೇಯಸಿ ನಯನಿಕಾ ರೆಡ್ಡಿ ಅವರನ್ನು ಮಾರ್ಚ್ 6 ರಂದು ವಿವಾಹವಾಗಲಿದ್ದಾರೆ.
ಕಳೆದ 20 ವರ್ಷಗಳಿಂದ, ರಾಮ್ ಚರಣ್ ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡುವ ಮೊದಲು ಭಕ್ತರು ಕೈಗೊಳ್ಳುವ ಅಯ್ಯಪ್ಪ ದೀಕ್ಷೆ (41 ದಿನಗಳ ಆಧ್ಯಾತ್ಮಿಕ ಅಭ್ಯಾಸ) ಯನ್ನು ಅನುಸರಿಸುತ್ತಿದ್ದಾರೆ.
ಈ ಅವಧಿಯಲ್ಲಿ ಭಕ್ತರು ಸರಳ ಮತ್ತು ಶಿಸ್ತಿನ ಜೀವನವನ್ನು ನಡೆಸುತ್ತಾರೆ. ಅವರು ಕಪ್ಪು ಬಟ್ಟೆಗಳನ್ನು ಧರಿಸುತ್ತಾರೆ, ಬರಿಗಾಲಿನಲ್ಲಿ ನಡೆಯುತ್ತಾರೆ, ನೆಲದ ಮೇಲೆ ಮಲಗುತ್ತಾರೆ ಮತ್ತು ಸಾತ್ವಿಕ ಸಸ್ಯಾಹಾರಿ ಆಹಾರವನ್ನು ಸೇವಿಸುತ್ತಾರೆ. ಈರುಳ್ಳಿ, ಬೆಳ್ಳುಳ್ಳಿ ಮತ್ತು ಮದ್ಯವನ್ನು ಸಂಪೂರ್ಣವಾಗಿ ತ್ಯಜಿಸಲಾಗುತ್ತದೆ. ನಿಯಮಿತ ಪೂಜೆ, ಧ್ಯಾನ ಮತ್ತು ಮನಸ್ಸಿನ ನಿಯಂತ್ರಣವು ಈ ಉಪವಾಸದ ಪ್ರಮುಖ ಅಂಶಗಳಾಗಿವೆ.
ಆರ್‌ಆರ್‌ಆರ್ ಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲೂ ರಾಮ್ ಚರಣ್ ಈ ಸಂಪ್ರದಾಯವನ್ನು ಅನುಸರಿಸಿದ್ದರು.






Be the first to comment
Leave a Reply