ಚಿಕ್ಕಮಗಳೂರು,ಫೆ.26- ಆನ್ಲೈನ್ ಟ್ರೇಡಿಂಗ್ ಇನ್ವೆಸ್ಟ್‌ಮೆಂಟ್ ನಲ್ಲಿ ಅಧಿಕ ಲಾಭವಿದೆ ಎಂದು ನಂಬಿಸಿ ವೈದ್ಯರೊಬ್ಬರಿಗೆ 21.85 ಲಕ್ಷರು ಪಂಗನಾಮ ಹಾಕಿದ ಘಟನೆ ನಗರದಲ್ಲಿ ನಡೆದಿದೆ.
ಡಾ.ಆದರ್ಶ್ ಸುಂದರ್‌ರವರ ವಾಟ್ಸಪ್‌ನಲ್ಲಿ Axis steady Stocks Club-R 2 ಗ್ರೂಪ್‌ನಿಂದ ಟ್ರೇಡಿಂಗ್ ಮಾಡಲು ನಿಮಗೆ ಆಸಕ್ತಿ ಇದೆಯೇ? ಎಂದು ಮೆಸೇಜ್ ಬಂದಿದೆ.

ಟ್ರೇಡಿಂಗ್ ಬಗ್ಗೆ ಆಸಕ್ತಿ ಇದ್ದುದರಿಂದ ಟ್ರೇಡಿಂಗ್ ಮಾಡುವುದಾಗಿ ಇವರು ಮೆಸೇಜ್ ಮೂಲಕ ತಿಳಿಸಿದ ಬಳಿಕ ವಾಟ್ಸಪ್ ಗ್ರೂಪ್‌ನಲ್ಲಿ ಮೆಂಬರ್ ಆಗಿ ಸೇರಿಸಿದ್ದಾರೆ.ಗ್ರೂಪ್ ಅಡಿನ್ ನವೀನ್ ಕುಲಕರ್ಣಿ ಸುರಕ್ಷಾ ಟ್ರೇಡಿಂಗ್ ಬಗ್ಗೆ ಗೈಡ್ ಮಾಡಿ, ಐಎಂಇಸಿ ಬ್ಲಾಕ್ ಷೇರಿನಲ್ಲಿ ಹೆಚ್ಚು ಲಾಭ ಇದೇ ಎಂದು ನಂಬಿಸಿ ಹೂಡಿಕೆ ಮಾಡುವಂತೆ ತಿಳಿಸಿದ್ದಾರೆ.
ತನ್ನ ವರ್ಚುವಲ್ ಐಡಿಯಲ್ಲಿ ಹೆಚ್ಚು ಲಾಭವನ್ನು ತೋರಿಸಿದ್ದು ಅದನ್ನು ಬಿಡಿಸಿಕೊಳ್ಳಲು ಪ್ರಯತ್ನಿಸಿದಾಗ ನಿಮ ಖಾತೆ ಲಾಕ್ ಆಗಿದೆ ಇನ್ನು ಹೆಚ್ಚಿನ ಹೂಡಿಕೆ ಮಾಡಿ ಟ್ಯಾಕ್‌್ಸಕಟ್ಟಿದ ನಂತರ ಹಣವನ್ನು ಡ್ರಾ ಮಾಡಿಕೊಳ್ಳಬಹುದೆಂದು ಹೇಳಿದ್ದಾರೆ.
ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 21,85,000 ರೂ. ಹಣವನ್ನು ವರ್ಗಾವಣೆ ಮಾಡಿಸಿ ಮೋಸ ಮಾಡಿರುವುದು ಬೆಳಕಿಗೆ ಬಂದಿದ್ದು ಪ್ರಕರಣ ದಾಖಲಾಗಿದೆ.






Be the first to comment
Leave a Reply