ಟೆಹ್ರಾನ್: ಇಸ್ರೇಲ್-ಅಮೆರಿಕ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್ನ ಸವೋಚ್ಛ ನಾಯಕ ಆಯತೋಲ್ಲಾ ಖಮೇನಿಯನ್ನ ಹೊಡೆದುರುಳಿಸಲಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ಬೆನ್ನಲ್ಲಿಯೇ… ಇರಾನ್ ಕೂಡ ಖಮೇನಿ ಸಾವನ್ನ ಖಚಿತಪಡಿಸಿದೆ. ಇರಾನ್ನ ಮಾಧ್ಯಮಗಳು ಹಾಗೂ ಸರ್ಕಾರವೇ ಇದನ್ನ ಖಚಿತಪಡಿಸಿದ್ದು. ಇರಾನ್ನಲ್ಲಿ 40 ದಿನಗಳ ಕಾಲ ಶೋಕಾಚರಣೆ ಘೋಷಿಸಿದೆ.

ಜಂಟಿ ಮಿಸೈಲ್ ದಾಳಿಯಲ್ಲಿ (Missile Strike) ಖಮೇನಿ ಮಾತ್ರವಲ್ಲದೇ ಅವರ ಮಗಳು ಮತ್ತು ಮೊಮ್ಮಕ್ಕಳು ಕೂಡ ಸಾವನ್ನಪ್ಪಿರುವುದು ಖಚಿತವಾಗಿದೆ. ಈ ಬೆನ್ನಲ್ಲೇ ಖಮೇನಿ ಹತ್ಯೆಗೆ ಇಸ್ರೇಲ್ ಮತ್ತು ಅಮೆರಿಕ ರೂಪಿಸಿದ್ದ ರಣತಂತ್ರಗಳು ಹೇಗಿತ್ತು ಅನ್ನೋ ಸಂಗತಿ ಬೆಳಕಿಗೆ ಬಂದಿದೆ.
ಹೇಗಿತ್ತು ರಣತಂತ್ರ?
ಖಮೇನಿಯನ್ನ ಗುರಿಯಾಗಿಸಿ ಅಮೆರಿಕ – ಇಸ್ರೇಲ್ (US Israel Strike) ಮೊದಲ ದಾಳಿಯಲ್ಲಿ 7 ಮಿಸೈಲ್ಗಳನ್ನ ಉಡಾಯಿಸಿತ್ತು. ಆಗ ಟೆಹ್ರಾನ್ ಕಚೇರಿಯಿಂದ ಖಮೇನಿಯನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು. ಬಳಿಕ ನಿನ್ನೆ ಇರಾನ್ಗೆ ನುಗ್ಗಿದ ಇಸ್ರೇಲ್ ಯುದ್ಧ ವಿಮಾನ ಖಮೇನಿ ನಿವಾದ ಮೇಲೆ 30 ಬಾಂಬ್ಗಳಿಂದ ದಾಳಿ ಮಾಡಿತು. ಈ ವೇಳೆಗೆ ಉನ್ನತ ಸಹಾಯಕರಾದ ರಾಷ್ಟ್ರೀಯ ಭದ್ರತಾ ಮಂಡಳಿಯ ಮಾಜಿ ಕಾರ್ಯದರ್ಶಿ ಅಲಿ ಶಮ್ಖಾನಿ ಮತ್ತು ಐಆರ್ಜಿಸಿ ಕಮಾಂಡರ್ ಮೊಹಮ್ಮದ್ ಪಾಕ್ಪೂರ್ ಅವರೊಟ್ಟಿಗೆ ಸಭೆ ನಡೆಸುತ್ತಿದ್ದರು. ಇಸ್ರೇಲ್ ಅನಿರೀಕ್ಷಿತ ಬಾಂಬ್ ದಾಳಿಯಿಂದ ಖಮೇನಿ ಸ್ಥಳದಲ್ಲೇ ಹತ್ಯೆಗೀಡಾದರು. ಅನ್ನೋದು ವರದಿಗಳಿಂದ ತಿಳಿದುಬಂದಿದೆ
ರಾತ್ರಿ ನಡೆಸಬೇಕಿದ್ದ ದಾಳಿ ಬೆಳಗ್ಗೆ ಮಾಡಿದ್ದೇಕೆ ಇಸ್ರೇಲ್-ಅಮೆರಿಕ?
ಖಮೇನಿ ಹತ್ಯೆಗೆ ಇಸ್ರೇಲ್ ಮಾಡಿದ್ದ ಮಾಸ್ಟರ್ ಪ್ಲ್ಯಾನ್ ಅಂತಿಥದ್ದಲ್ಲ. ಸಾಕಷ್ಟು ಸಮಯದಿಂದ ಇಸ್ರೇಲ್ ಮತ್ತು ಅಮೆರಿಕ ರಣತಂತ್ರ ರೂಪಿಸಿದ್ದವು. ಹಲವು ತಿಂಗಳಿಂದ ಸಿಐಎ (ಕೇಂದ್ರೀಯ ಗುಪ್ತಚರ ಸಂಸ್ಥೆ – ಇದು ವಿದೇಶಿ ಗುಪ್ತಚರ ಸಂಸ್ಥೆ) ಖಮೇನಿಯನ್ನ ಟ್ರ್ಯಾಕ್ ಮಾಡಿತ್ತು. ನಿನ್ನೆ (ಫೆ.28) ಬೆಳಗ್ಗೆ ಖಮೇನಿ ಪ್ರಮುಖರೊಂದಿಗೆ ಸಭೆ ಸೇರುತ್ತಾರೆ ಎಂಬುದನ್ನು ತಿಳಿದಿದ್ದ ಸಿಐಎ, ಇಸ್ರೇಲ್ಗೆ ಮಾಹಿತಿ ರವಾನೆ ಮಾಡಿತ್ತು.
ಈ ಬೆನ್ನಲ್ಲೇ ಅಲರ್ಟ್ ಆದ ಇಸ್ರೇಲ್, ಅಮೆರಿಕ ಸಮಯ ನಿಗದಿಪಡಿಸಿ ಇರಾನ್ ಮೇಲೆ ಜಂಟಿಯಾಗಿ ವಾಯುದಾಳಿ ನಡೆಸಿದವು. ಇಸ್ರೇಲ್ನ ಜೆಟ್ ವಿಮಾನವು ಖಮೇನಿ ಮನೆಯ ಕಾಂಪೌಂಡ್ ಮೇಲೆ 30 ಬಾಂಬ್ಗಳ ಪ್ರಬಲ ದಾಳಿ ನಡೆಸಿತು. ಯುದ್ಧ ವಿಮಾನವು ಭಾರತೀಯ ಕಾಲಮಾನ ಬೆಳಗ್ಗೆ 9:30 ಕ್ಕೆ ಹೊರಟಿತ್ತು. ಅದು ಇಸ್ರೇಲ್ನಿಂದ ಹೊರಟ 2 ಗಂಟೆ 20 ನಿಮಿಷಕ್ಕೆ (ಮಧ್ಯಾಹ್ನ 12:10 ಗಂಟೆಗೆ) ಖಮೇನಿ ಕಾಂಪೌಂಡ್ ಅನ್ನು ಉಡೀಸ್ ಮಾಡಿತು. ಈ ವೇಳೆ ಸಭೆಯಲ್ಲಿದ್ದ ಇರಾನ್ ಪ್ರಮುಖ ನಾಯಕರು ಜಂಟಿ ಕಾರ್ಯಾಚರಣೆಯಲ್ಲಿ ಬಲಿಯಾಗಿದ್ದಾರೆ.
ಇಸ್ರೇಲ್ ದಾಳಿಯ ಉದ್ದೇಶವೇನು?
ಇಸ್ಲಾಂ ಮೂಲಭೂತವಾದದ ಕಟ್ಟಾ ಪ್ರತಿಪಾದಕನಾಗಿರುವ ಆಯಾತೊಲ್ಲ ಅಲಿ ಖಮೇನಿ ಹಲವು ವರ್ಷಗಳಿಂದ ರಾಜ್ಯಭಾರ ಮಾಡ್ತಿದ್ದರು. ಖಮೇನಿಯನ್ನ ಪದಚ್ಯುತಿಗೊಳಿಸಿ ಸರ್ವಾಧಿಕಾರ ಅಂತ್ಯಗೊಳಿಸಿ, ಇರಾನ್ ನಲ್ಲಿ ಹೊಸ ಸರ್ಕಾರ ರಚಿಸುವುದು ಇಸ್ರೇಲ್ ಪ್ರಧಾನಿಯ ಉದ್ದೇಶವಾಗಿತ್ತು. ಆಯಾತೋಲ್ಲ ಸ್ಥಾನದಲ್ಲಿ ಇರಾನ್ ಯುವರಾಜ ರೇಜಾ ಪೆಹಲ್ವಿಯನ್ನ ಕೂರಿಸಲು ಇಸ್ರೇಲ್ ನಿರ್ಧಾರ ಮಾಡಿತ್ತು.
ಏಕೆಂದ್ರೆ 1979 ರಲ್ಲಿ ಜರುಗಿದ ಆಡಳಿತ ಕ್ರಾಂತಿಯಲ್ಲಿ ಇರಾನ್ ರಾಜ ಮನೆತನದ ಹಿಡಿತವನ್ನ ಖಮೇನಿ ತಪ್ಪಿಸಿದ್ದರು. ಮತ್ತೆ ಇರಾನ್ನನ್ನು ರಾಜಮನೆತನದ ಸುಪರ್ಧಿಗೆ ಒಪ್ಪಿಸಲು ಇಸ್ರೇಲ್ ಪಣ ತೊಟ್ಟಿತ್ತು. ಇದಕ್ಕಾಗಿ ಇಸ್ರೇಲ್ – ಅಮೆರಿಕ ಜೊತೆಗೆ ಕೈಜೋಡಿಸಿ ರಣತಂತ್ರ ರೂಪಿಸಿತ್ತು.






Be the first to comment
Leave a Reply