ಬೆಂಗಳೂರು,ಮಾ.1- ಇರಾನ್-ಇಸ್ರೇಲ್ ಸಂಘರ್ಷದ ಉದ್ವಿಗ್ನತೆಯಿಂದ ಜಾಗತಿಕ ಮಾರುಕಟ್ಟೆಯಲ್ಲಿ ಅಸ್ಥಿರತೆ ಹೆಚ್ಚಾಗಿದ್ದು, ಚಿನ್ನ ಮತ್ತು ಬೆಳ್ಳಿ ಬೆಲೆಗಳು ಭರ್ಜರಿ ಏರಿಕೆ ಕಂಡಿವೆ. ವಾರಾಂತ್ಯದಲ್ಲಿ ಚಿನ್ನದ ಬೆಲೆ ಗ್ರಾಮ್ಗೆ ಸುಮಾರು 653-714 ರೂಪಾಯಿ ಏರಿಕೆಯಾಗಿದ್ದು, ಆಭರಣ ಚಿನ್ನ (22 ಕ್ಯಾರಟ್) ಗ್ರಾಮ್ ಗೆ 15,463 ರೂಪಾಯಿ ಮತ್ತು ಅಪರಂಜಿ ಚಿನ್ನ (24 ಕ್ಯಾರಟ್) ಗ್ರಾಮ್ಗೆ 16,871 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯೂ ಗ್ರಾಮ್ಗೆ 10 ರೂಪಾಯಿ ಹೆಚ್ಚಾಗಿ ಬೆಂಗಳೂರಿನಲ್ಲಿ 295 ರೂಪಾಯಿ ಆಗಿದೆ

ಶುದ್ಧ ಚಿನ್ನ ಎಂದು ಕರೆಯಲ್ಪಡುವ 24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 7,140 ರೂ.ಗಳಷ್ಟು ಏರಿಕೆಯಾಗಿ 1,68,710 ರೂ.ಗಳಷ್ಟು ವಹಿವಾಟು ನಡೆಸುತ್ತಿದೆ. ಚಿನ್ನದ ಆಭರಣಗಳಲ್ಲಿ ವ್ಯಾಪಕವಾಗಿ ಬಳಸಲಾಗುವ 22 ಕ್ಯಾರೆಟ್ ಚಿನ್ನದ ಬೆಲೆ 6,550 ರೂ.ಗಳಷ್ಟು ಏರಿಕೆಯಾಗಿ 1,54,650 ರೂ.ಗಳಷ್ಟು ವಹಿವಾಟು ನಡೆಸುತ್ತಿದೆ. 18 ಕ್ಯಾರೆಟ್ ಚಿನ್ನದ ವಿಷಯಕ್ಕೆ ಬಂದ್ರೆ, 5,350 ರೂ.ಗಳಷ್ಟು ಏರಿಕೆಯಾಗಿ 1,26,530 ರೂ.ಗಳಷ್ಟು ವಹಿವಾಟು ನಡೆಸುತ್ತಿದೆ. ಬೆಳ್ಳಿ ಬೆಲೆಯೂ ಗಣನೀಯವಾಗಿ ಏರಿಕೆಯಾಗಿದೆ.
ಸದ್ಯ ಪ್ರತಿ ಕಿಲೋಗ್ರಾಂ ಬೆಳ್ಳಿಯ ಬೆಲೆ 295 ರೂ. ಯುದ್ಧ ಹೀಗೆ ಮುಂದುವರಿದ್ರೆ, ಸಾಮಾನ್ಯ ಜನರು ಚಿನ್ನ ಮತ್ತು ಬೆಳ್ಳಿ ಖರೀದಿಯ ಮೇಲಿನ ಭರವಸೆಯನ್ನ ತ್ಯಜಿಸಬೇಕಾಗುತ್ತದೆ. ಇದರರ್ಥ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
ಶನಿವಾರ ಮತ್ತು ಭಾನುವಾರ ಮಲ್ಟಿ ಕಮಾಡಿಟಿ ಎಕ್್ಸ ಚೇಂಜ್ ಮುಚ್ಚಿದ್ದರಿಂದ ಚಿನ್ನದ ಬೆಲೆ ಸ್ಥಿರವಾಗಿತ್ತು. ಸದ್ಯ ಎಂಸಿಎಕ್್ಸ ನಲ್ಲಿ ಏಪ್ರಿಲ್ ಫ್ಯೂಚರ್ಗಳ ಚಿನ್ನದ ಬೆಲೆ ಸುಮಾರು 1,61,971 ರೂ.ಗಳಷ್ಟಿದೆ. ಮಾರ್ಚ್ ಫ್ಯೂಚರ್ ಗಳ ಬೆಳ್ಳಿಯ ಬೆಲೆ 2,74,389 ರೂ.ಗಳಷ್ಟಿದೆ. ಆದರೆ ಸೋಮವಾರ ಭಾರಿ ಏರಿಕೆಯಾಗುವ ಸಾಧ್ಯತೆ ಹೆಚ್ಚು. ಏಕೆಂದರೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಪ್ರಸ್ತುತ 5,278 ರಷ್ಟಿದ್ದರೆ, ಒಂದು ಔನ್್ಸ ಬೆಳ್ಳಿಯ ಬೆಲೆ 93 ರಷ್ಟಿದೆ ಈಗ ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧವು ಚಿನ್ನ ಮತ್ತು ಬೆಳ್ಳಿಯ ಬೆಲೆಗಳ ಮೇಲೆ ಪರಿಣಾಮ ಬೀರಿದೆ.
ಸೋಮವಾರ ಭಾರತೀಯ ಷೇರು ಮಾರುಕಟ್ಟೆ ಹಾಗೂ ಪ್ರಪಂಚದಾದ್ಯಂತದ ಷೇರು ಮಾರುಕಟ್ಟೆಗಳು ಭಾರೀ ಕುಸಿತ ಕಾಣುವ ಸಾಧ್ಯತೆ ಹೆಚ್ಚಿದೆ. ಈ ಯುದ್ಧ ದೀರ್ಘಕಾಲದವರೆಗೆ ಮುಂದುವರಿದ್ರೆ, ಮಾರುಕಟ್ಟೆಗಳು ಮತ್ತು ಹೂಡಿಕೆದಾರರು ಸರಿಪಡಿಸಲಾಗದ ಹೊಡೆತವನ್ನು ಅನುಭವಿಸಬೇಕಾಗುತ್ತದೆ. ಇದಲ್ಲದೆ, ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ.






Be the first to comment
Leave a Reply