
ಬೆಂಗಳೂರು: ನಟ ದರ್ಶನ್ ಜೊತೆ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಹಲವು ಸಿನಿಮಾ ಮಾಡಿದ್ದರು. ಈಗ ದರ್ಶನ್ (Darshan) ಜೈಲಿನಲ್ಲಿ ಇದ್ದಾರೆ. ಆದಷ್ಟು ಬೇಗ ಅವರು ರಿಲೀಸ್ ಆಗುತ್ತಾರೆ ಎಂದು ಓಂ ಪ್ರಕಾಶ್ ರಾವ್ ಅವರು ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜೂನ್, ಜುಲೈ ಒಳಗೆ ದರ್ಶನ್ ಅವರು ಜೈಲಿನಿಂದ ಹೊರಗೆ ಬರುತ್ತಾರೆ. 3-4 ತಿಂಗಳಲ್ಲಿ ಅವರು ಬರುವುದು ಪಕ್ಕಾ. ಆ ನಂಬಿಕೆ ನನಗೆ ಇದೆ. ಈ ರೀತಿ ನಾನು ಮೊದಲು ತುಂಬಾ ಸಿನಿಮಾಗಳಿಗೆ ಹೇಳಿದ್ದೆ. ಈ ಸಿನಿಮಾ ಓಡಲ್ಲ ಬಿಟ್ಟುಬಿಡಿ ಅಂತ ಹೇಳಿದ್ದೆ. ಅದು ಹಾಗೆಯೇ ಆಗಿದೆ. ದೊಡ್ಡ ಲೆವಲ್ನಲ್ಲಿ ಹಿಟ್ ಆಗುತ್ತೆ ಅಂತ ಕೂಡ ಹೇಳಿದ್ದೆ’ ಎಂದು ಓಂ ಪ್ರಕಾಶ್ ರಾವ್ ಹೇಳಿದ್ದಾರೆ.






Be the first to comment
Leave a Reply