ಡಿಕೆಶಿ ಬಣದ ಮೇಲೆ ಕಣ್ಣಿಡಲು ಗುಪ್ತಚರ ಇಲಾಖೆಗೆ ಸೂಚಿಸಿದ್ದಾರಾ ಸಿಎಂ..?

ಬೆಂಗಳೂರು,ಮಾ.3- ರಾಜ್ಯದ ಪ್ರತಿಯೊಂದು ಆಗುಹೋಗುಗಳು ಹಾಗೂ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡುವ ಗುಪ್ತಚರ ವಿಭಾಗ ದುರುಪಯೋಗವಾಗುತ್ತಿದೆಯೇ?! ಏಕೆಂದರೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ಮಾಡಿರುವ ಆರೋಪಕ್ಕೆ ಪುಷ್ಟಿ ನೀಡುವಂತಿದ್ದು, ಗುಪ್ತಚರ ವಿಭಾಗವು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಅವರ ಬಣದ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡಲು ಸಿಎಂ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.

ತಮ್ಮ ಎಕ್‌್ಸ ಖಾತೆಯಲ್ಲಿ ಆರ್‌.ಅಶೋಕ್‌ ಅವರು, ಗುಪ್ತಚರ ವಿಭಾಗವನ್ನು ಮುಖ್ಯಮಂತ್ರಿ ಅವರೇ ತಮ್ಮ ಬಳಿ ಇಟ್ಟುಕೊಳ್ಳುತ್ತಾರೆ. ಕಾರಣ ರಾಜ್ಯದಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಗಳು ಸೇರಿದಂತೆ ಎಲ್ಲಾ ಮಾಹಿತಿಯನ್ನು ಕಲೆಹಾಕುವುದು ಸಾಮಾನ್ಯ.
ಗುಪ್ತಚರ ವಿಭಾಗಕ್ಕೆ ಓರ್ವ ಐಪಿಎಸ್‌ ದರ್ಜೆಯ ಎಡಿಜಿಪಿ ಅಽಕಾರಿಯನ್ನು ನೇಮಕ ಮಾಡಲಾಗುತ್ತದೆ. ಇದರ ಕೆಳಗೆ ವಿವಿಧ ಶ್ರೇಣಿಯ ಅಽಕಾರಿಗಳು ಇರುತ್ತಾರೆ.

ಈಗ ಅಶೋಕ್‌ ಅವರು ಮಾಡಿರುವ ಆರೋಪ ದಂತೆ ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರು ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಅವರ ಬಣದ ಶಾಸಕರ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡಲು ಗುಪ್ತಚರ ವಿಭಾಗಕ್ಕೆ ನಿರ್ದೇಶನ ನೀಡಿದ್ದಾರೆಂದು ಆರೋಪಿಸಿದ್ದಾರೆ.
ಕೂಡಲೇ ಸಿದ್ದರಾಮಯ್ಯ ನವರು ಗುಪ್ತಚರ ವಿಭಾಗವನ್ನು ತಮ್ಮ ಸಹೋದ್ಯೋಗಿಗಳ ಮೇಲೆ ಕಣ್ಣಿಡುವ ಕೃತ್ಯ ನಡೆಸಬಾರದು ಎಂದು ಹೇಳಿದ್ದಾರೆ.

ಅಂದಹಾಗೆ ಅಶೋಕ್‌ ಅವರು ಮಾಡಿರುವ ಆರೋಪಕ್ಕೆ ಪುಷ್ಟಿ ನೀಡುವಂತೆ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಕೆಲವು ವಿದ್ಯಮಾನಗಳು ಕೂಡ ಅವರ ಆರೋಪವನ್ನು ತಳ್ಳಿ ಹಾಕುವಂತಿಲ್ಲ. ಏಕೆಂದರೆ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರುವ ಡಿಕೆಶಿ ಮತ್ತವರ ಬಣದ ಶಾಸಕರು ಪ್ರತ್ಯೇಕವಾಗಿ ಸಭೆ ಸೇರುವುದು, ರಾಜಕೀಯ ಚಟುವಟಿಕೆಗಳ ಬಗ್ಗೆ ಸೇರಿದಂತೆ ಹಲವು ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸುತ್ತಲೇ ಇದ್ದಾರೆ.

ಅಶೋಕ್‌ ಹೇಳಿರುವಂತೆ ಗುಪ್ತಚರ ವಿಭಾಗವನ್ನು ತಮ್ಮ ಬಳಿ ಇಟ್ಟುಕೊಂಡಿರುವ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಎದುರಾಳಿಗಳ ಕಾರ್ಯತಂತ್ರ, ಚಟುವಟಿಕೆಗಳು ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನು ಕಲೆ ಹಾಕಿ ದೈನಂದಿನ ವರದಿ ನೀಡುವಂತೆ ಸೂಚಿಸಿದ್ದಾರೆ ಎಂಬುದು ಅವರ ಆರೋಪವಾಗಿದೆ.

ಮಾಗಡಿ ಶಾಸಕ ಎಚ್‌.ಸಿ. ಬಾಲಕೃಷ್ಣ ಅವರ ಹುಟ್ಟುಹಬ್ಬದ ಮುನ್ನಾದಿನದಂದು ಡಿ.ಕೆ.ಶಿವಕುಮಾರ್‌ ಕ್ಯಾಂಪ್‌ ಹೋಟೆಲ್‌ನಲ್ಲಿ ಭೋಜನಕ್ಕೆ ಒಟ್ಟುಗೂಡಿದ ನಂತರ, ಸಿದ್ದರಾಮಯ್ಯ ಅವರು ಶಾಸಕರ ಚಲನವಲನಗಳ ಬಗ್ಗೆ ಸೂಕ್ಷ್ಮ ವಿವರಗಳನ್ನು ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಡಿಕೆಎಸ್‌ ಶಿಬಿರವು ಸುಮಾರು 40 ಶಾಸಕರು ಭೋಜನಕೂಟದಲ್ಲಿ ಭಾಗವಹಿಸಿದ್ದಾರೆ ಎಂದು ಪರೋಕ್ಷವಾಗಿ ಹೇಳಿಕೊಂಡಿತ್ತು. ಆದರೆ ಭೋಜನಕೂಟಕ್ಕೆ ಆಹ್ವಾನಿಸಿದ್ದ 69 ಶಾಸಕರಲ್ಲಿ ಕೇವಲ 32 ಮಂದಿ ಮಾತ್ರ ಹಾಜರಾಗಿದ್ದರು. ಬಜೆಟ್‌ ಅಽವೇಶನದ ನಂತರ ದೆಹಲಿಯಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಅನ್ನು ಭೇಟಿಯಾಗುವುದಾಗಿ ಶಾಸಕರ ತಂಡ ಸಂದೇಶ ಕಳುಹಿಸಿತ್ತು. ಎರಡೂ ಬಣಗಳಿಂದಲೂ ದೂರವಾಗಿ ತಟಸ್ಥರಾಗಿದ್ದ ಕೆಲವು ಶಾಸಕರು ಸಿಎಂ ಬದಲಾವಣೆಯ ಪರವಾಗಿದ್ದಾರೆ. ಆದರೆ 2028ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಇಮೇಜ್‌ಗೆ ಧಕ್ಕೆ ತರದಂತೆ ಮತ್ತು ಭವಿಷ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರದ ನಿರ್ಧಾರವನ್ನು ಪಕ್ಷದ ಹೈಕಮಾಂಡ್‌ ತೆಗೆದುಕೊಳ್ಳಬೇಕಿದೆ ಎಂದು ಕೆಲವು ಶಾಸಕರು ತಿಳಿಸಿದ್ದಾರೆ.

ಶಿವಕುಮಾರ್‌ ಮುಖ್ಯಮಂತ್ರಿ ಯಾದರೆ ಮುಂದೆ ಎದು ರಾಗುವ ಕಾನೂನು ತೊಡಕು ಗಳ ಬಗ್ಗೆ ಎಐಸಿಸಿ ಕಾನೂನು ಅಭಿಪ್ರಾಯ ಗಳನ್ನು ಸಂಗ್ರಹಿಸುತ್ತಿದೆ. ಅಕ್ರಮ ಆಸ್ತಿ ಪ್ರಕರಣ ಸೇರಿದಂತೆ ಶಿವಕುಮಾರ್‌ ವಿರುದ್ಧ ಬಾಕಿ ಇರುವ ಕೆಲವು ಪ್ರಕರಣಗಳನ್ನು ನಿರ್ವಹಿಸು ತ್ತಿರುವ ಸುಪ್ರೀಂಕೋರ್ಟ್‌ ವಕೀಲ ಕಪಿಲ್‌ ಸಿಬಲ್‌ ಶೀಘ್ರವೇ ಎಐಸಿಸಿಗೆ ಮಾಹಿತಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಜೈಲುವಾಸದಿಂದ ಹೊರಬಂದಿರುವ ಶಿವಕುಮಾರ್‌ ಪ್ರಕರಣವನ್ನು ಬಿಜೆಪಿ ಅಸವಾಗಿರಿಸಿಕೊಳ್ಳುತ್ತದೆ ಎಂಬ ಭಯ ಕಾಂಗ್ರೆಸ್‌ಗೆ ಕಾಡುತ್ತಿದೆ. ಹೀಗಾಗಿ ಕಾಂಗ್ರೆಸ್‌ ಹೈಕಮಾಂಡ್‌ ಎಚ್ಚರಿಕೆಯ ಹೆಜ್ಜೆ ಇಡಲಿದೆ. 2024 ರ ಮಾರ್ಚ್‌ನಲ್ಲಿ ಸುಪ್ರೀಂಕೋರ್ಟ್‌ ಅವರ ವಿರುದ್ಧದ 2018 ರ ಹಣ ವರ್ಗಾವಣೆ ಪ್ರಕರಣವನ್ನು ವಜಾಗೊಳಿಸಿತು. ಇದು ಶಿವಕುಮಾರ್‌ ಬಣದಲ್ಲಿ ನೈತಿಕತೆಯನ್ನು ಹೆಚ್ಚಿಸಿತ್ತು ಎಂದು ಹೇಳಲಾಗಿದೆ.

Be the first to comment

Leave a Reply

Your email address will not be published. Required fields are marked *

ad image