ಬೆಂಗಳೂರಲ್ಲಿ ನಾಯಿ ಸಾಕಲು ಹೊಸ ರೂಲ್ಸ್

ಬೆಂಗಳೂರು, ಫೆ. 10- ನಾಯಿ ಸಾಕುವು ದಕ್ಕೂ ಜಿಬಿಎ ಹೊಸ ರೂಲ್ಸ್ ತರುತ್ತಿದೆ. ಬೀದಿ ನಾಯಿಗಳ ಹಾವಳಿಗೆ ಬ್ರೇಕ್‌ ಹಾಕಲು ಸುಪ್ರೀಂ ಕೋರ್ಟ್‌ ಕೆಲ ಮಾನದಂಡಗಳನ್ನು ಅನುಸರಿಸಲು ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಿತ್ತು. ಇದೀಗ ಸಾಕು ನಾಯಿಗಳಿಂದಲೂ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆ ಇದೆ ಎಂದು ಕೆಲವರು ಜಿಬಿಎಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಸಾಕು ನಾಯಿ ಸಾಕಲು ಹೊಸ ರೂಲ್‌್ಸ ಜಾರಿಗೆ ತರಲಾಗುತ್ತಿದೆ.

ಜಿಬಿಎ ಮುಖ್ಯ ಅಯುಕ್ತ ಮಹೇಶ್ವರ್‌ ರಾವ್‌ ಅವರು ಐದು ನಗರಪಾಲಿಕೆ ಅಯುಕ್ತರುಗಳಿಗೆ ಸೂಚನೆ ನೀಡಿ ಸಾಕು ನಾಯಿಗಳ ಸಾಕೋದಕ್ಕೆ ಕೆಲ ಮಾನದಂಡಗಳನ್ನು ಅನುಸರಿಸಿ ಸಾಧು ಸ್ವಬಾವದ ಹಾಗೂ ಅಕ್ರಮ ಸ್ವಬಾವದ ನಾಯಿಗಳ ಸಾಕೋದಕ್ಕೆ ಹಾಗೆ ವಸತಿ ಸಮುಚ್ಚಯದಲ್ಲಿ ಹಾಗೂ ಮನೆಗಳಲ್ಲಿ ಸಾಕೋದಕ್ಕೆ ಹೊಸ ನಿಯಮ ಜಾರಿಗೆ ತರುವಂತೆ ಸೂಚನೆ ನೀಡಿದ್ದಾರೆ.

ಕಳೆದ ವರ್ಷ ಜಿಬಿಎಯ ಪಶುಪಾಲನೆ ಇಲಾಖೆ ಸಾಕು ನಾಯಿಗಳ ಸರ್ವೆ ನಡೆಸಿದಾಗ 1.15 ಲಕ್ಷ ಸಾಕು ನಾಯಿಗಳಿವೆ ಎಂಬ ಮಾಹಿತಿ ಸಂಗ್ರಹಿಸಲಾಗಿತ್ತು. ಇದೀಗ ಪ್ರಾಣಿ ಹಿಂಸೆ 1960 ರ ಕಾಯ್ದೆ ಪ್ರಕಾರ ಕೆಲ ಷರತ್ತು ಗಳನ್ನು ವಿಧಿಸಿ ಸಾರ್ವಜನಿಕರು ಮನೆಯಲ್ಲಿ ನಾಯಿ ಸಾಕುವುದಕ್ಕೆ ನಿಯಮ ಜಾರಿಗೆ ತರಲು ಜಿಬಿಎ ಮುಂದಾಗಿದೆ.

ಹೊಸ ಕಾಯ್ದೆಯಲ್ಲಿ ಸಾಕು ನಾಯಿಗಳ ಸಾಕುವುದಕ್ಕೆ ಜಿಬಿಎ ಪಶುಪಾಲನೆ ಇಲಾಖೆಯಿಂದ ಪರವಾನಗಿ ಪಡೆಯಬೇಕು. ಹಾಗೂ ವಾರ್ಷಿಕವಾಗಿ ಜಿಬಿಎಗೆ ಇಂತ್ತಿಷ್ಟು ಅಂತ ಹಣ ಪಾವತಿ ಮಾಡಿ ಪ್ರತಿ ವರ್ಷ ಪರವಾನಗಿ ನವೀಕರಣ ಮಾಡಿಸಿಕೊಳ್ಳಬೇಕಾಗಿದೆ.

ಹಾಗೆ ಕ್ರೂರ ಸ್ವಬಾದ ನಾಯಿಗಳ ಸಾಕುವಿಕೆಗೆ ನಿಷೇಧ ಮಾಡಬೇಕು ಅಂತ ಕಾಯ್ದೆಯಲ್ಲಿ ನಮೂದಿಸಲು ತೀರ್ಮಾನಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೊರ ರೂಲ್ಸಿನಲ್ಲಿ ಏನಿದೆ:

ಸಾಕು ನಾಯಿಗಳನ್ನು ಸಾಕೋದಕ್ಕೆ ಜಿಬಿಎಯಿಂದ ಪರವಾನಗಿ ಪಡೆಯಬೇಕು. ಪ್ರತಿ ವರ್ಷ ಪರವಾನಗಿ ನವೀಕರಣಕ್ಕೆ ಜಿಬಿಎಗೆ ಇಂತ್ತಿಷ್ಟು ಹಣ ಪಾವತಿ ಮಾಡಬೇಕು. ನಾಯಿಗಳ ವರ್ಗದ ( ತಳಿ) ಅಧಾರದ ಮೇಲೆ ಪರವಾನಗೆ ಶುಲ್ಕ ನಿಗದಿ ಮಾಡಲಾಗುವುದು.

ಜಿಬಿಎ ನಿಯೋಜಿತ ಪಶುವೈದ್ಯಾಧಿಕಾರಿಯಿಂದ ದೃಢೀಕರಣ ಪಡೆಯಬೇಕು. ಪ್ರತಿ ಸಾಕು ನಾಯಿ ಮಾಲೀಕರು ತಮ್ಮ ಸ್ವಂತ ಖರ್ಚಿನಲ್ಲಿ ಮೈಕ್ರೋ ಚಿಪ್‌ ಅಳವಡಿಸಬೇಕು. ಸಾಕು ನಾಯಿ ಮಾಲೀಕರು ನಾಯಿಗೆ ರೆಬೀಸ್‌‍ ಲಸಿಕೆ ಹಾಕಿಸಬೇಕು. ಲಸಿಕೆ ಹಾಕಿಸಿರುವ ಬಗ್ಗೆ ನೊಂದಾಯಿತ ಪಶು ವೈದ್ಯರಿಂದ ದೃಢೀಕರಣ ಪಡೆಯ ಬೇಕಿದೆ.

ಪ್ರತಿ ಸಾಕು ನಾಯಿ ಮಾಲೀಕರು 12 ತಿಂಗಳಿಗಿಂತ ಹೆಚ್ಚಿನ ವಯಸ್ಸಿನ ನಾಯಿಗೆ ಕಡ್ಡಾಯವಾಗಿ ಸಂತಾನಹರಣ ಚಿಕಿತ್ಸೆ ಮಾಡಿಸಬೇಕು. ಇನ್ನೂ ಸಾಕು ನಾಯಿಗಳ ಅವರಣದಲ್ಲಿ ಸ್ವಚ್ಚತೆ ಕಾಪಾಡಬೇಕು. ನೆರೆಹೊರೆಯವರಿಗೆ ತೊಂದರೆ ಅಗದಂತೆ ನಾಯಿ ಸಾಕಬೇಕು.
ಮನೆಗಳಲ್ಲಿ ಮೂರು ನಾಯಿಗಳಿಗಿಂತ ಹೆಚ್ಚಿನ ನಾಯಿ ಸಾಕೋದಕ್ಕೆ ಅವಕಾಶ ಇಲ್ಲ. ಮೂರು ನಾಯಿಗಳಿಗಿಂತ ಹೆಚ್ಚಾಗಿ ಸಾಕಿದರೆ ಅಂತಹ ನಾಯಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದು ಪ್ರಾಣಿ ದಯಾ ಕೇಂದ್ರ ಕ್ಕೆ ಕಳುಹಿಸುತ್ತಾರೆ. ನಗರಪಾಲಿಕೆ ಬೈಲಾ ಪ್ರಕಾರವೇ ನಾಯಿಗಳನ್ನು ಸಾಕಬೇಕು.

ಒಂದು ವೇಳೆ ಬೈಲಾ ನಿಯಮ ಉಲ್ಲಂಘನೆ ಮಾಡಿದರೆ ಕಾನೂನು ರೀತಿಯ ಕ್ರಮ ಜರುಗಿಸುವ ಎಚ್ಚರಿಕೆ ನೀಡಲಾಗಿದೆ. ಇನ್ನೂ ಸಾಕು ನಾಯಿಗಳನ್ನು ವಾಕಿಂಗ್‌ ಕರೆದುಕೊಂಡು ಹೋದಾಗ ನಾಯಿಯ ಕತ್ತಿಗೆ ಹಗ್ಗ ಅಥವಾ ಚೈನ್‌ ಅಳವಡಿಕೆ ಮಾಡಿರಬೇಕು. ವಾಕಿಂಗ್‌ ವೇಳೆಯಲ್ಲಿ ನಾಯಿ ರಸ್ತೆಯಲ್ಲಿ ಗಲೀಜು ಮಾಡಿದರೆ ಅದನ್ನು ನೀವೇ ತೆಗೆಯಬೇಕು.

ಸಾಕು ನಾಯಿ ತಪ್ಪಿಸಿಕೊಂಡು ನಗರಪಾಲಿಕೆ ಅಧಿಕಾರಿಗಳು ವಶಕ್ಕೆ ಪಡೆದರೆ ಅದಕ್ಕೆ ಇಂತ್ತಿಷ್ಟು ಅಂತ ದಂಡ ಪಾವತಿ ಮಾಡಿ ನಾಯಿ ಬಿಡಿಸಿಕೊಳ್ಳಬೇಕು. 72 ಗಂಟೆಯೊಳಗೆ ಬಿಡಿಸಿಕೊಂಡರೆ ಒಂದು ಸಾವಿರ ದಂಡ ಪಾವತಿ ಮಾಡಬೇಕು. 72 ಗಂಟೆಯ ನಂತರ ಬಿಡಿಸಿಕೊಳ್ಳದಿದರೆ ಪ್ರತಿ ದಿನ 200 ರೂ ದಂಡ ಪಾವತಿಸಬೇಕು. ಒಂದು ವೇಳೆ ಬಿಡಿಸಿಕೊಳ್ಳದೆ ಹೋದರೆ ನಾಯಿಯನ್ನು ಪ್ರಾಣಿ ದಯಾ ಸಂಘಕ್ಕೆ ನೀಡಲಾಗುತ್ತದೆ.

ಅಪಾರ್ಟ್‌ಮೆಂಟ್‌ಗಳಲ್ಲಿ ಉಗ್ರ ಸ್ವರೂಪದ ನಾಯಿಗಳ ಸಾಕುವಿಕೆಗೆ ನಿಷೇಧ ಹೇರಲಾಗಿದೆ ವಿದೇಶಿ ತಳಿಗಳಾದ ಜರ್ಮನ್‌ ಶೆಪ್ಪಾರ್ಡ್‌, ..ರೊಟ್ರೇಲರ್‌, ಡಾಬರ್‌ಮನ್‌, ಹೌಂಡ ನಾಯಿಗಳ ಸಾಕೋದಕ್ಕೆ ನಿಷೇಧ ಹೇರಲಾಗಿದೆ.- ಒಂದು ವೇಳೆ ನಿಷೇಧತ ನಾಯಿಗಳನ್ನು ಸಾಕಿದರೆ ಅವುಗಳನ್ನು ಸಾರ್ವಜನಿಕರ ಓಡಾಡುವ ಪ್ರದೇಶದಲ್ಲಿ ಓಡಾಡಿಸುವಂತಿಲ್ಲ.
ಈಗ ಹೇಳಿ ನೀವು ಇನುಂದೆ ನಾಯಿ ಸಾಕುತ್ತೀರಾ…….

Be the first to comment

Leave a Reply

Your email address will not be published. Required fields are marked *

ad image