ನನ್ನನ್ನ ಇಂಡಸ್ಟ್ರೀಯಿಂದ ಬ್ಯಾನ್ ಮಾಡ್ದಾಗ, ಜಯಮಾಲಾ ಬಂದು ಯಾರಿಲ್ಲದೇ ಇದ್ರು ಜಗ್ಗೇಶ್ ನಾನು ನಿನ್ನ ಜೊತೆ ಇರ್ತೀನಿ ಅಂದಿದ್ರು. ಹೆಣ್ಣುಮಕ್ಕಳ ಸಂಘವನ್ನ ಕಟ್ಟಿ, ಪೋಷಕ ಕಲಾವಿದರ ಜೊತೆಗೆ ರಾಜ್‌ಕುಮಾರ್ ಅವರ ಮನೆಯಲ್ಲಿ ಕೂತುಕೊಂಡು, ಅದ್ಭುತವಾಗಿ ಮಾತನಾಡಿದ್ದರು. ಕಡೆಗೆ, ರಾಜ್‌ಕುಮಾರ್ ಅವರು ಒಂದು ಮಾತು ಹೇಳಿದ್ರುʼ ಎಂದು ಹಳೆಯ ಕಹಿ ಘಟನೆಯನ್ನ ನೆನೆದಿದ್ದಾರೆ ನಟ ಜಗ್ಗೇಶ್.
ಹೈಲೈಟ್ಸ್:
- ಚಿತ್ರರಂಗ ಬ್ಯಾನ್ ಮಾಡಿದ ಕಹಿ ನೆನಪು ಹಂಚಿಕೊಂಡ ನಟ ಜಗ್ಗೇಶ್!
- ಸಂಕಷ್ಟದ ಸಮಯದಲ್ಲಿ ಜಗ್ಗೇಶ್ ಜೊತೆಯಾದ ನಟಿ ಜಯಮಾಲಾ!
- ʻಜಗ್ಗೇಶ್‌ನ ಬ್ಯಾನ್ ಮಾಡೋದಾದರೆ, ಮೊದಲು ನನ್ನನ್ನ ಮಾಡಿʼ ಎಂದಿದ್ರಂತೆ ಡಾ. ರಾಜ್‌ಕುಮಾರ್

ʻʻಜಯಮಾಲಾ ಬಗ್ಗೆ ನನಗೆ ಅಪಾರವಾದಂತಹ ಒಂದು ಗೌರವವಿದೆ. ಒಂದು ದಿನ ಒಬ್ಬ ನಿರ್ಮಾಪಕ 10 ಸಾವಿರ ದುಡ್ಡು ಹಾಕಿ ಪೂಜೆ ಮಾಡ್ದ, ಸಿನಿಮಾ ಮಾಡೋಕಾಗಲಿಲ್ಲ. ಆಮೇಲೆ, ನಾವು ಒಬ್ಬರ ಆಫೀಸ್ ಕಾದು ಸಿನಿಮಾ ಮಾಡಿ, ಅದು ಬಹಳ ದೊಡ್ಡ ಹಿಟ್ ಆಯ್ತು. ಅವನಿಗೂ ನನಗೂ ಯಾವುದೋ ಕಾರಣಕ್ಕೆ ಕ್ಲ್ಯಾಶ್ ಆಯ್ತು. ನಾನು ಏಕಾಏಕಿ ಅವನಿಗೆ ಬೈದೆ, ಆಮೇಲೆ ಬ್ಯಾನ್ ಅಂದ್ಬಿಟ್ರು. ಆಗ ನಾನು ಇಂಡಸ್ಟ್ರೀಯಲ್ಲಿ ಎಲ್ರಿಗೂ ಫೋನ್ ಮಾಡಿದೆ. ಎಲ್ಲ ಎಸ್ಕೇಪ್ ಆದ್ರೂʼʼ ಎಂದು ಇತ್ತೀಚೆಗೆ ವೇದಿಕೆಯೊಂದರಲ್ಲಿ ಜಗ್ಗೇಶ್ ಹೇಳಿಕೊಂಡಿದ್ದಾರೆ.






Be the first to comment
Leave a Reply