ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬೈರತಿ ಬಸವರಾಜ್ಗೆ ಮತ್ತೆ ಬಂಧನದ ಭೀತಿ ಎದುರಾಗಿದೆ. ಬೈರತಿ ಬಸವರಾಜ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿ ಆದೇಶ ಹೊರಡಿಸಿದ್ದು, ಬಿಜೆಪಿ ಶಾಸಕನಿಗೆ ಸಿಐಡಿ ಟೀಂ ಲುಕ್ ಔಟ್ ನೋಟಿಸ್ ಜಾರಿ ಮಾಡಿದೆ. ಶಾಸಕ ಬೈರತಿ ಬಸವರಾಜ್ ಅವರನ್ನು ಬಂಧಿಸಲು ಸಿಐಡಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಬೇಲ್ ಅರ್ಜಿ 2 ಬಾರಿ ರದ್ದಾದ ಬೆನ್ನಲ್ಲೇ ಬೈರತಿ ಬಸವರಾಜ್ ವಿದೇಶಕ್ಕೆ ತೆರಳುವುದನ್ನು ತಡೆಯುವ ನಿಟ್ಟಿನಲ್ಲಿ ಲುಕ್ ಔಟ್ ನೋಟಿಸ್ ಕೂಡ ಜಾರಿ ಮಾಡಲಾಗಿದೆ.

ಶಾಸಕರಿಗಾಗಿ ಶೋಧ
ಶಾಸಕ ಬೈರತಿ ಬಸವರಾಜ್ಗಾಗಿ ಹಲವು ರಾಜ್ಯಗಳಲ್ಲಿ ಸಿಐಡಿ ಟೀಮ್ ಹುಡುಕಾಟ ನಡೆಸಿದೆ. ಕರ್ನಾಟಕ, ಗೋವಾ, ಕೇರಳ ಮಹಾರಾಷ್ಟ್ರ, ತಮಿಳುನಾಡು, ಆಂಧ್ರ, ತೆಲಂಗಾಣದಲ್ಲಿ ಸಿಐಡಿಯ ವಿಶೇಷ ತಂಡಗಳಿಂದ ಸರ್ಚಿಂಗ್ ಮುಂದುವರಿಸಿದೆ ಎಂದು ತಿಳಿದು ಬಂದಿದೆ. ಶಾಸಕ ಬೈರತಿ ಬಸವರಾಜ್ ಅವರು ಮೊಬೈಲ್ಗಳನ್ನ ಆನ್ ಮಾಡದೆ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾರೆ. ಆಪ್ತರ ಮೂಲಕ ಕುಟುಂಬಸ್ಥರ ಜೊತೆ ಸಂಪರ್ಕದಲ್ಲಿರೋ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಬೈರತಿ ಆಪ್ತರ ಮೇಲೂ ಸಿಐಡಿ ತಂಡ ಕಣ್ಣಿಟ್ಟಿದೆ.
ಟ್ರಾವೆಲ್ ಹಿಸ್ಟರಿ ಜಾಲಾಟ
ಬೆಂಗಳೂರಿನಲ್ಲಿಯೇ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದಾರೆ. ಬರ್ತ್ ಡೇ ಮತ್ತು ಜಾತ್ರೆಯಲ್ಲಿ ಭಾಗಿಯಾದ ನಂತರ ಬೈರತಿ ಫೋನ್ಗಳು ಸ್ವಿಚ್ಡ್ ಆಫ್ ಆಗಿದೆ. ಇದೀಗ ಬೈರತಿ ಬಸವರಾಜ್ ಟ್ರಾವೆಲ್ ಹಿಸ್ಟರಿಯನ್ನ ಸಿಐಡಿ ಟೀಮ್ ಕೆದಕುತ್ತಿದೆ. ಹೊರ ರಾಜ್ಯಗಳಲ್ಲಿ ತಲೆಮರೆಸಿಕೊಂಡ ಶಂಕೆ ಹಿನ್ನೆಲೆ ವಿವಿಧ ತಂಡಗಳಾಗಿ ಸಿಐಡಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ.






Be the first to comment
Leave a Reply