ಕಾಂಬೋಡಿಯಾದಲ್ಲಿ ನಕಲಿ ಭಾರತೀಯ ಪೊಲೀಸ್‌ ಠಾಣೆ ಜಾಲ ಪತ್ತೆ: ಭಾರತೀಯರೇ ಇವರ ಟಾರ್ಗೆಟ್! ಹೇಗಿದೆ ಗೊತ್ತಾ‌ ನಕಲಿ ಠಾಣೆಯ ರಿಯಲ್‌ ಸೆಟಪ್

ಕಾಂಬೋಡಿಯಾದಲ್ಲಿ ಭಾರತೀಯ ಪೊಲೀಸ್‌ ಠಾಣೆಯ ನಕಲಿ ಸೆಟಪ್‌ ನಲ್ಲಿ ವಿದೇಶಗಳಲ್ಲಿರುವ ಭಾರತೀಯರನ್ನು ಟಾರ್ಗೆಟ್‌ ಮಾಡಿ ಡಿಜಟಲ್‌ ಬಂಧನಕ್ಕೊಳಪಡಿಸಿ ವಂಚನೆ ಮಾಡುತ್ತಿದ್ದ ದೊಡ್ಡ ನಕಲಿ ಭಾರತೀಯ ಪೊಲೀಸ್‌ ಇಲಾಖೆಯ ಜಾಲವನ್ನು ಅಲ್ಲಿನ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈವರೆಗೋ ಸುಮಾರು 200 ಇಂತಹ ಠಾಣೆಗಳನ್ನು ಪತ್ತೆ ಹಚ್ಚಿ, 190 ಠಾಣೆಗಳನ್ನು ಸೀಜ್‌ ಮಾಡಿದ್ದಾರೆ. ಇನ್ನು, ಈ ಭಾರತೀಯ ನಕಲಲಿ ಪೊಲೀಸ್‌ ಠಾಣೆ ನಡೆಸುತ್ತಿದ್ದ ರೋವಾರಿ ಚೀನಾದ ಉದ್ಯಮಿ ಎಂದು ಶಂಕಿಸಲಾಗಿದ್ದು, ಈ ಸಂಬಂಧ ತನಿಖೆ ನಡೆಯುತ್ತಿದೆ.

 

ನೋಮ್‌ ಪೆನ್ನ್:‌ ಇತ್ತೀಚಿನ ಡಿಜಿಟಲ್‌ ಕಾಲದಲ್ಲಿ ವಿಧವಿಧವಾಗಿ ಜನರನ್ನು ವಂಚಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದು ಕೇವಲ ಒಂದು ಪ್ರದೇಶಕ್ಕೆ ಮಾತ್ರ ಸಿಮೀತವಾಗದೇ ಜಾಗತಿಕವಾಗಿ ಇದೊಂದು ಸಾಂಕ್ರಾಮಿಕ ರೋಗದಂತೆ ಹಬ್ಬುತ್ತಿದೆ. ಹೀಗೆ ತಮ್ಮ ದೇಶದಲ್ಲಿನ ಡಿಜಿಟಲ್‌ ಬಂಧನ ವಂಚನೆ ಪ್ರಕರಣಗಳನ್ನು ಹತ್ತಿಕ್ಕುವ ಪ್ರಯತ್ನದಲ್ಲಿ ಕಾಂಬೋಡಿಯಾದ ಪೊಲೀಸರು ಮುಂದಾಗಿದ್ದು, ಈ ವೇಳೆ, ನಕಲಿ ಭಾರತೀಯ ಪೊಲೀಸ್‌ ಠಾಣೆ ನಡೆಸುತ್ತಿದ್ದ ಜಾಲವನ್ನು ಭೇದಿಸಿದ್ದಾರೆ.

ಕಾಂಬೋಡಿಯಾದಲ್ಲಿದೆ ನಕಲಿ ಭಾರತೀಯ ಪೊಲೀಸ್‌ ಠಾಣೆ

ಹೌದು, ಕಂಬೋಡಿಯಾದಲ್ಲಿ ಭಾರತೀಯ ಪೊಲೀಸ್‌ ಠಾಣೆಗಳು ಎಂದು ನೀವು ಓದಿದ್ದು ಸರಿಯಾಗಿಯೇ ಇದೆ. ಕಾಂಬೋಡಿಯಾದಲ್ಲಿ ಡಿಜಿಟಲ್‌ ಬಂಧನ ಹಾಗೂ ಡಿಜಿಟಲ್‌ ವಂಚನೆ ಚಟುವಟಿಕೆ ನಡೆಸುತ್ತಿದ್ದ ಖತರ್ನಾಕ್‌ ಜಾಲ ಪತ್ತೆಯಾಗಿದೆ. ಇತ್ತೀಚೆಗೆ ದೇಶದಲ್ಲಿ ಅಂತರಾಷ್ಟ್ರೀಯ ವಂಚನೆಗಳ ಕಡಿವಾಣಕ್ಕೆ ಕಾರ್ಯಚರಣೆ ನಡೆಸಿದ ವೇಳೆ, ಕಾಂಬೋಡಿಯಾ ಪೊಲೀಸರು ಬರೋಬ್ಬರಿ 200 ನಕಲಿ ಇಂಡಿಯನ್‌ ಪೊಲೀಸ್‌ ಠಾಣೆಗಳನ್ನು ಪತ್ತೆ ಹಚ್ಚಿದ್ದು, ಇದರಲ್ಲಿ ಸದ್ಯ, 190 ನಕಲಿ ಠಾಣೆಗಳನ್ನು ಸೀಜ್‌ ಮಾಡಿದ್ದಾರೆ. ನಕಲಿ ಭಾರತೀಯ ಪೊಲೀಸ್‌ ಠಾಣೆಗಳ ಪ್ರಮುಖ ರೂವಾರಿ ಚೀನಾ ಮೂಲದ ಉದ್ಯಮಿ ಎಂದು ಶಂಕಿಸಲಾಗಿದೆ.

ಪೊಲೀಸ್‌ ಠಾಣೆ ಸೆಟಪ್‌, ಭಾರತೀಯರೇ ಇವರ ಟಾರ್ಗೆಟ್!

ಇನ್ನು, ಈ ನಕಲಿ ಪೊಲೀಸ್‌ ಠಾಣೆಗಳ ಸೆಟಪ್‌ ಸಹ ಸಿನಿಮೀಯ ಸೆಟಪ್‌ ನಂತಿದ್ದು, ಥೇಟ್‌ ಅಸಲಿಯಂತೆ ಕಾಣುವಂತೆ ಪಾಳುಬಿದ್ದ ಕಾಂಪೌಂಡ್‌ನಲ್ಲಿ ನಿರ್ಮಿಸಲಾಗಿದ್ದು,ಇದರಲ್ಲಿ ಮುಂಬೈ ಪೊಲೀಸ್ ಮತ್ತು ಸಿಬಿಐ ಇಲಾಖೆಯ ಲೋಗೋಗಳಿರುವ ನಕಲಿ ಸೈನ್‌ಬೋರ್ಡ್ಗಳಿಂದ ಹಿಡಿದು,ಕಚೇರಿಯ ಎರಡೂ ಬದಿಯಲ್ಲಿ ಮಹಾತ್ಮ ಗಾಂಧಿ ಮತ್ತು ಬಿ.ಆರ್. ಅಂಬೇಡ್ಕರ್ ಚಿತ್ರ ಮತ್ತು ಭಾರತೀಯ ಧ್ವಜ ಅಳವಡಿಸಿದ್ದಾರೆ. ‌

ಈ ಕುರಿತು ಮಾಹಿತಿ ನೀಡಿದ ಕಾಂಬೋಡಿಯಾದ ಆನ್‌ಲೈನ್ ಹಗರಣ ನಿಯಂತ್ರಣ ಆಯೋಗದ ಅಧ್ಯಕ್ಷರಾದ ಛೇ ಸಿನಾರಿತ್ ಪ್ರಕಾರ, ಕಳೆದ ವರ್ಷದ ಕೊನೆಯಲ್ಲಿ ಅಮೆರಿಕದ ಹಗರಣವೊಂದರ ಕಿಂಗ್‌ಪಿನ್ ಎಂದು ಹೇಳಲಾದ ಲಿ ಕುವಾಂಗ್‌ನನ್ನು ಚೀನಾ ಅಪರಾಧ ಜಾಲಗಳ ವಿರುದ್ಧದ ಪ್ರಮುಖ ಅಂತರಾಷ್ಟ್ರೀಯ ಆರೋಪಿಯೆಂದು ದೋಷಾರೋಪ ಸಲ್ಲಿಸಿದ ಬಳಿಕ ದೇಶದಲ್ಲಿ ಇಂತಹ ಚಟುವಟಿಕೆಗಳು ನಡೆಯುತ್ತಿರುವ ಶಂಕೆಯ ಮೇಲೆ ಆರಂಭಿಸಿದ ಈ ಕಾರ್ಯಚರಣೆಯಲ್ಲಿ ಈ ವರೆಗೂ 200 ನಕಲಿ ಪೊಲೀಸ್‌ ಠಾಣೆಗಳನ್ನು ಪತ್ತೆ ಹಚ್ಚಿದ್ದು, ಈವರೆಗೂ ಇದರಲ್ಲಿ ಶಾಮೀಲಾಗಿರುವ 173 ವ್ಯಕ್ತಿಗಳನ್ನು ಬಂಧಿಸಿದ್ದು, ಇದರಲ್ಲಿ ಕೆಲಸ ಮಾಡುತ್ತದ್ದ 11 ಸಾವಿರಕ್ಕೂ ಅಧಿಕ ಕಾರ್ಮಿಕರನ್ನು ಗಡೀಪಾರು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಅಲ್ಲಿನ ಪೊಲೀಸರಿಗಿಂತ ಈ ನಕಲಿ ಜಾಲದ ಶಕ್ತಿಯೇ ಹೆಚ್ಚು

ಇನ್ನು, ಈ ಹಗರಣದ ಆದೆಷ್ಟು ದೊಡ್ಡದಿದೆ ಎಂದರೆ ಕೇವಲ ಈ ಒಂದು ಪ್ರದೇಶದಲ್ಲೇ ಅಲ್ಲಿನ ಪೊಲೀಸರಿಗಿಂತ ಈ ನಕಲಿ ಪೊಲೀಸ್‌ ಅಧಿಕಾರಿಗಳೇ ಹೆಚ್ಚಿದ್ದಾರೆ. ಈ ಕುರಿತು ಹೇಳಿಕೆ ನೀಡಿದ ಪೊಲೀಸ್‌ ಅಧಿಕಾರಿ ಇಡೀ ಪ್ರಾಂತ್ಯದಲ್ಲಿ ನಮ್ಮ ಪೊಲೀಸ್‌ ಸಂಖ್ಯೆ ಕೇವಲ 1ಸಾವಿರ ಹಾಗೂ ಮಿಲಿಟರಿ ಪೊಲೀಸ್‌ ಸಂಖೆ 300 ಇದೆ. ಆದರೆ, ಈ ನಕಲಿ ಜಾಲ ಬಳಿಯಲ್ಲಿ ಬರೋಬ್ಬರಿ 6-7 ಸಾವಿರ ಜನರಿದ್ದಾರೆ. ಸದ್ಯ ಈ ಪ್ರದೇಶದಿಂದ ಇವರು ತೊರೆದಿದ್ದಾರೆ ಎಂದು ತಿಳಿಸಿದ್ದಾರೆ.

ಸದ್ಯ, ಭಾರತೀಯ ಪೊಲೀಸ್‌ ಇಲಾಖೆಯ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಚೀನಾ ಮೂಲದ ಉದ್ಯಮಿಯ ನಕಲಿ ಪೊಲೀಸ್‌ ಇಲಾಖೆಯ ದೊಡ್ಡ ಜಾಲವನ್ನು ಕಾಂಬೋಡಿಯಾ ಪೊಲೀಸರು ಭೇದಿಸಿದ್ದು, ಈ ಕಾರ್ಯಚರಣೆ ಮತ್ತಷ್ಟು ವೇಗಗೊಳಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

ad image