ಬಿಕ್ಲು ಶಿವ ಕೊಲೆ ಕೇಸ್​​ನಲ್ಲಿ ಶಾಸಕ ಬೈರತಿ ಬಸವರಾಜ್ ಖಾಕಿ ವಶಕ್ಕೆ!

ಶಾಸಕ ಬೈರತಿ ಬಸವರಾಜ್ ಖಾಕಿ ವಶಕ್ಕೆ

ಬೆಂಗಳೂರು: ಬಿಕ್ಲು ಶಿವ ಕೊಲೆ ಕೇಸ್​ನಲ್ಲಿ ಆರೋಪಿಯಾಗಿರುವ ಬೈರತಿ ಬಸವರಾಜ್​​ನನ್ನ​​​ ಕೊನೆಗೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸುಪ್ರೀಂ ಕೋರ್ಟ್​ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆದ ಹಿನ್ನೆಲೆ ಬಂಧನದ ಭೀತಿಯಿಂದ ಗುಜರಾತ್​ ಅಹಮದಾಬಾದ್​ನಲ್ಲಿ ತಲೆಮರೆಸಿಕೊಂಡಿದ್ದರು. ಅಹಮದಾಬಾದ್​ನಿಂದ ಬೆಂಗಳೂರಿಗೆ ವಿಮಾನದಲ್ಲಿ ಆಗಮಿಸಿದ ಬೈರತಿ ಬಸವರಾಜ್​ನನ್ನ ಲುಕ್ ಔಟ್ ನೋಟಿಸ್ ಹಿನ್ನೆಲೆ ಏರ್​​ಪೋರ್ಟ್​ನಲ್ಲಿ ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಫ್ಲೈಟ್ ಇಳಿದು ಹೊರ ಬರ್ತಿದ್ದಂತೆ ವಶಕ್ಕೆ

ಅಹಮದಾಬಾದ್​ನಿಂದ ಇಂಡಿಗೋ 6E683 ವಿಮಾನದಲ್ಲಿ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಶಾಸಕ ಬೈರತಿ ಬಸವರಾಜ್​ ಅವರನ್ನ ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಏರ್​ಪೋರ್ಟ್​ನಲ್ಲಿ ಸಿಐಡಿ ಅಧಿಕಾರಿಗಳಿಗೆ ಒಳಗೆ ಪ್ರವೇಶ ಇಲ್ಲದ ಕಾರಣ ಏರ್​​ಪೋರ್ಟ್​ ಒಳಭಾಗಕ್ಕೆ ದೇವನಹಳ್ಳಿ ಎಸಿಪಿ ಹರ್ಷ ಅವರು ಶಾಸಕ ಬೈರತಿ ಬಸವರಾಜ್​ ಅವರನ್ನ ವಶಕ್ಕೆ ಪಡೆದಿದ್ದಾರೆ.

Be the first to comment

Leave a Reply

Your email address will not be published. Required fields are marked *

ad image