ಪ್ರಯಾಣಿಕರ ಗಮನಕ್ಕೆ.. ಫೆ.16ರಂದು ಕೆಲ ರೈಲುಗಳ ಸಂಚಾರದಲ್ಲಿ ಬದಲಾವಣೆ!

ಪ್ರಯಾಣಿಕರ ಗಮನಕ್ಕೆ.. ಫೆ.16ರಂದು ಕೆಲ ರೈಲುಗಳ ಸಂಚಾರದಲ್ಲಿ ಬದಲಾವಣೆ!

ಫೆಬ್ರವರಿ 16ರಂದು ಹಬ್ಬನಘಟ್ಟ-ಅರಸೀಕೆರೆ ಮಧ್ಯೆ ಕಾಲುವೆ ಕಾಮಗಾರಿ ನಡೆಯುತ್ತಿರುವುದರಿಂದ ಕೆಲ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಮೈಸೂರು-ಅರಸೀಕೆರೆ ಮತ್ತು ತಾಳಗುಪ್ಪ ಮಾರ್ಗದ ಕೆಲವು ರೈಲುಗಳು ರದ್ದಾಗಲಿವೆ, ಕೆಲವನ್ನು ಭಾಗಶಃ ರದ್ದುಪಡಿಸಲಾಗಿದೆ ಅಥವಾ ವಿಳಂಬವಾಗಿ ಸಂಚರಿಸಲಿವೆ. ಪ್ರಯಾಣಿಕರು ಅನಾನುಕೂಲ ತಪ್ಪಿಸಲು ಮುಂಚಿತವಾಗಿ ರೈಲ್ವೆ ವೇಳಾಪಟ್ಟಿ ಪರಿಶೀಲಿಸಲು ರೈಲ್ವೆ ಇಲಾಖೆ ಸೂಚಿಸಿದೆ.

ಸಂಚಾರ ರದ್ದುಗೊಂಡ ರೈಲುಗಳು

ರೈಲು ಸಂಖ್ಯೆ 56267 ಅರಸೀಕೆರೆ–ಮೈಸೂರು ಪ್ಯಾಸೆಂಜರ್

ರೈಲು ಸಂಖ್ಯೆ 16206 ಮೈಸೂರು–ತಾಳಗುಪ್ಪ ಎಕ್ಸ್‌ಪ್ರೆಸ್

ರೈಲು ಸಂಖ್ಯೆ 16205 ತಾಳಗುಪ್ಪ–ಮೈಸೂರು ಎಕ್ಸ್‌ಪ್ರೆಸ್

ಇನ್ನು ರೈಲು ಸಂಖ್ಯೆ 16225 ಮೈಸೂರು–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ಮೈಸೂರು–ಅರಸೀಕೆರೆನಡುವಿನ ಸಂಚಾರವನ್ನು ಭಾಗಶಃ ರದ್ದುಪಡಿಸಲಾಗಿದ್ದು, ಅರಸೀಕೆರೆಯಿಂದ ತನ್ನ ನಿಗದಿತ ವೇಳೆಗೆ ಪ್ರಯಾಣ ಆರಂಭಿಸಲಿದೆ. ರೈಲು ಸಂಖ್ಯೆ 56266 ಮೈಸೂರು–ಅರಸೀಕೆರೆ ಪ್ಯಾಸೆಂಜರ್ ರೈಲು 110 ನಿಮಿಷಗಳ ಕಾಲ ಮತ್ತು ರೈಲು ಸಂಖ್ಯೆ 16221 ತಾಳಗುಪ್ಪ–ಮೈಸೂರು ಎಕ್ಸ್‌ಪ್ರೆಸ್ ರೈಲನ್ನು 100 ನಿಮಿಷಗಳ ಕಾಲ ಮಾರ್ಗ ಮಧ್ಯೆ ನಿಯಂತ್ರಿಸಲಾಗುತ್ತದೆ.

ಈ ರೈಲುಗಳ ಸಂಚಾರದಲ್ಲಿ ವಿಳಂಬ

ರೈಲು ಸಂಖ್ಯೆ 56265 ಅರಸೀಕೆರೆ–ಮೈಸೂರು ಪ್ಯಾಸೆಂಜರ್ ರೈಲು ಅರಸೀಕೆರೆಯಿಂದ 100 ನಿಮಿಷಗಳ ವಿಳಂಬದೊಂದಿಗೆ ಮತ್ತು ರೈಲು ಸಂಖ್ಯೆ 06269 ಮೈಸೂರು–ಎಸ್‌ಎಂವಿಟಿ ಬೆಂಗಳೂರು ಪ್ಯಾಸೆಂಜರ್ ವಿಶೇಷ ರೈಲು ಮೈಸೂರಿನಿಂದ 100 ನಿಮಿಷಗಳ ವಿಳಂಬದೊಂದಿಗೆ ಸಂಚಾರ ನಡೆಸಲಿದೆ ಎಂದು ರೈಲ್ವೇ ಇಲಾಖೆ ಮಾಹಿತಿ ನೀಡಿದೆ.

 

Tags :

mysore

Be the first to comment

Leave a Reply

Your email address will not be published. Required fields are marked *

ad image