ಅಮೆರಿಕ ಈಗ ವಿಶ್ವದ ನಂ.1 ಇಂಧನ ಉತ್ಪಾದಕ ರಾಷ್ಟ್ರ: ಡೊನಾಲ್ಡ್‌ ಟ್ರಂಪ್‌

ವಾಷಿಂಗ್ಟನ್: ಅಮೆರಿಕ ಈ ವಿಶ್ವದ ನಂ.1 ಇಂಧನ ಉತ್ಪಾದಕ (Energy Producer) ರಾಷ್ಟ್ರವಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಹೇಳಿದ್ದಾರೆ.

 

 

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಟ್ರಂಪ್‌, ನಾವು ವಿಶ್ವದಲ್ಲೇ ಬೃಹತ್‌ ಇಂಧನ ರಫ್ತುದಾರರಾಗುತ್ತಿದ್ದೇವೆ. ಕಳೆದ ಕೆಲವು ತಿಂಗಳುಗಳಲ್ಲಿ ಜಪಾನ್ (Japan), ದಕ್ಷಿಣ ಕೊರಿಯಾ, ಭಾರತ ಸೇರಿದಂತೆ ಇತರೆ ದೇಶಗಳೊಂದಿಗಿನ ಇತ್ತೀಚಿನ ವ್ಯಾಪಾರ ಒಪ್ಪಂದಗಳು ಅಮೆರಿಕದ ಕಲ್ಲಿದ್ದಲು ರಫ್ತಿನಲ್ಲಿ ಗಣನೀಯ ಹೆಚ್ಚಳಕ್ಕೆ ಇದು ಕಾರಣವಾಗಿವೆ. ಅಲ್ಲದೇ ಇತರರೊಂದಿಗೂ ಐತಿಹಾಸಿಕ ವ್ಯಾಪಾರ ಒಪ್ಪಂದಗಳನ್ನ ಮಾಡಿಕೊಂಡಿದ್ದೇವೆ ಎಂದು ವಿವರಿಸಿದ್ದಾರೆ.

ಅಮೆರಿಕದ ಕಲ್ಲಿದ್ದಲು (Coal) ಗುಣಮಟ್ಟ ಜಗತ್ತಿನಲ್ಲೇ ಅತ್ಯುತ್ತಮವಾದದ್ದು ಎಂಬುದಾಗಿ ಹಲವು ದೇಶಗಳು ಭಾವಿಸಿವೆ ಎಂದು ಹೇಳಿದ್ದಾರೆ.

ಭಾರತ ತನ್ನ ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ಸಾಕಷ್ಟು ಲಭ್ಯತೆ, ನ್ಯಾಯಯುತ ಬೆಲೆ ಮತ್ತು ಪೂರೈಕೆಯ ವಿಶ್ವಾಸಾರ್ಹತೆ ಆಧರಿಸಿ ಇಂಧನ ನೀತಿಗೆ ಸಂಬಂಧಿಸಿದ ನಿರ್ಧಾರಗಳನ್ನ ತೆಗೆದುಕೊಳ್ಳುತ್ತದೆ ಎಂದು ಈಚೆಗೆ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದ್ದರು.

ತೈಲ ಕಂಪನಿಗಳು ಆಂತರಿಕ ಹೊಣೆಗಾರಿಕೆ ಮತ್ತು ವಿಶ್ವಾಸಾರ್ಹ ಜವಾಬ್ದಾರಿಗಳಿಗೆ ಬದ್ಧವಾಗಿರುತ್ತಲೇ, ಲಭ್ಯತೆ, ವೆಚ್ಚ ಮತ್ತು ಲಾಜಿಸ್ಟಿಕ್ಸ್ ಸೇರಿದಂತೆ ಮಾರುಕಟ್ಟೆ ಪರಿಸ್ಥಿತಿಗಳ ಆಧಾರದ ಮೇಲೆ ಖರೀದಿ ನಿರ್ಧಾರಗಳನ್ನ ತೆಗೆದುಕೊಳ್ಳುತ್ತವೆ ಎಂದೂ ಮಿಶ್ರಿ ಸ್ಪಷ್ಟಪಡಿಸಿದ್ದರು.

 

 

Be the first to comment

Leave a Reply

Your email address will not be published. Required fields are marked *

ad image