Bigg Boss: ರೋಹಿತ್ ಶೆಟ್ಟಿ ಮತ್ತು ರಣವೀರ್ ಸಿಂಗ್ ಬಳಿಕ ಇದೀಗ ಮತ್ತೊಬ್ಬರಿಗೆ ಬೆದರಿಕೆ ಕರೆ ಬಂದಿದೆ. ಬಿಗ್ ಬಾಸ್ 13 ರ ಹಿಮಾಂಶಿ ಖುರಾನಾ ಅವರಿಗೆ ಇದೀಗ ಕೊಲೆ ಬೆದರಿಕೆಗೆ ಬಂದಿದೆ ಎಂದು ಹೇಳಲಾಗುತ್ತಿದೆ
ರೋಹಿತ್ ಶೆಟ್ಟಿ(Rohith Shetty) ಮತ್ತು ರಣವೀರ್ ಸಿಂಗ್ (Ranveer Singh)ಬಳಿಕ ಇದೀಗ ಮತ್ತೊಬ್ಬರಿಗೆ ಬೆದರಿಕೆ ಕರೆ ಬಂದಿದೆ. ಬಿಗ್ ಬಾಸ್ 13 ರ ಹಿಮಾಂಶಿ ಖುರಾನಾ ಅವರಿಗೆ ಇದೀಗ ಕೊಲೆ ಬೆದರಿಕೆಗೆ ಬಂದಿದೆ ಎಂದು ಹೇಳಲಾಗುತ್ತಿದೆ. ಬೆದರಿಕೆ ಕರೆ ಮಾತ್ರವಲ್ಲದೆ 10 ಕೋಟಿ ರೂ. ಬೇಡಿಕೆ ಇಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಗಂಭೀರ ಬೆದರಿಕೆ ಬಗ್ಗೆ ಹಿಮಾಂಶಿ ಖುರಾನಾ ಪೊಲೀಸ್ ದೂರು ದಾಖಲಿಸಿದ್ದಾರೆ. ಬಾಬಾ ಸಿದ್ದಿಕಿ ಕೊಲೆ ಪ್ರಕರಣದಲ್ಲಿ ವಾಂಟೆಡ್ ಅಪರಾಧಿ ಆಗಿರುವ ಜೀಶನ್ ಅಖ್ತರ್ ಈ ಬೆದರಿಕೆ ಕರೆ ಮಾಡಿದ್ದಾರೆ ಎನ್ನಲಾಗಿದೆ.
ಜೀಶನ್ ಅಖ್ತರ್ ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿದ್ದಾರೆ ಮತ್ತು ಕುಖ್ಯಾತ ಪಾಕಿಸ್ತಾನಿ ದರೋಡೆಕೋರ ಶಹಜಾದ್ ಭಟ್ಟಿ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಬೆದರಿಕೆಯ ಹಿಂದಿನ ನಿಜವಾದ ಪಿತೂರಿಯನ್ನು ಬಹಿರಂಗಪಡಿಸಲು ಭದ್ರತಾ ಸಂಸ್ಥೆಗಳು ಈಗ ಆಡಿಯೋ ಕ್ಲಿಪ್ ಅನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿವೆ.
ಈ ಘಟನೆಯ ನಂತರ, ಮನರಂಜನಾ ಉದ್ಯಮದಲ್ಲಿ ಭದ್ರತಾ ಕಾಳಜಿಗಳು ಹೆಚ್ಚಿವೆ ಮತ್ತು “ಬಿಗ್ ಬಾಸ್ 13” ನಲ್ಲಿ ಖ್ಯಾತಿಗೆ ಏರಿದ ಹಿಮಾಂಶಿ ಖುರಾನಾ ಅವರನ್ನು ರಕ್ಷಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎನ್ನಲಾಗ್ತಿದೆ






Be the first to comment
Leave a Reply