
ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 49ನೇ ಹುಟ್ಟುಹಬ್ಬ. ಬರ್ತ್‌ಡೇ ಆಚರಣೆಯಲ್ಲಿ ಮಾಡುವ ಸ್ಥಿತಿಯಲ್ಲಿ ದರ್ಶನ್ ಇಲ್ಲದಿದ್ದರೂ, ಅಭಿಮಾನಿಗಳ ಸಂಭ್ರಮಕ್ಕೆ ಏನೂ ಕಮ್ಮಿ ಇಲ್ಲ. ಸಾಮಾನ್ಯವಾಗಿ ಈ ದಿನವನ್ನು ನಟ ದರ್ಶನ್ ಅಭಿಮಾನಿಗಳು, ಸಹೋದ್ಯೋಗಿಗಳು ಮತ್ತು ಕುಟುಂಬದವರೊಂದಿಗೆ ಸಂಭ್ರಮಿಸುತ್ತಿದ್ದರು. ಆದರೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ದರ್ಶನ್ ಪರಪ್ಪನ ಅಗ್ರಹಾರ ಕೇಂದ್ರೀಯ ಕಾರಾಗೃಹದಲ್ಲಿದ್ದಾರೆ. ಆದರೂ ಅವರ ಕುಟುಂಬ, ಸ್ನೇಹಿತರು, ಅಭಿಮಾನಿಗಳ ಸಂಭ್ರಮ ಕಡಿಮೆಯಾಗಿಲ್ಲ. ದರ್ಶನ್ ಪತ್ನಿ ವಿಜಯಲಕ್ಷ್ಮೀ ಪತಿ ದರ್ಶನ್ಗೆ ಸ್ಪೆಷಲ್ ವಿಷ್ ಮಾಡಿದ್ದಾರೆ.

ಜೈಲಿನ ಗೋಡೆಗಳ ಮಧ್ಯೆ ಇರುವ ದರ್ಶನ್ಗೆ ಪತ್ನಿ ವಿಜಯಲಕ್ಷ್ಮೀ ಸ್ಪೆಷಲ್ ವಿಷ್ ಮಾಡಿದ್ದಾರೆ. ಪತಿ ದರ್ಶನ್ ಮತ್ತು ಮಗ ವಿನೀಶ್ ಜೊತೆಗಿರುವ ಫೋಟೋ ಹಂಚಿಕೊಂಡು ಅಲ್ಲಿರುವ ಕೇಕ್ನ್ಲೂ ಸ್ಪೆಷಲ್ ಮೆಸೇಜ್ ನೀಡಿದ್ದಾರೆ. ಇದನ್ನ ಕಂಡು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಪ್ರತಿ ವರ್ಷ ಕುಟುಂಬ, ಸ್ನೇಹಿತರು, ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಮಾಡಿಕೊಳ್ತಿದ್ದ ದಾಸ ಈ ಬಾರಿ ಕೊಲೆ ಕೇಸ್ನಲ್ಲಿ ಜೈಲಿನಲ್ಲಿ ಇದ್ದಾರೆ. ಇದರಿಂದ ಅಭಿಮಾನಿಗಳಲ್ಲಿ ತೀವ್ರ ಕೊರಗು ಮತ್ತು ದುಃಖ ಮೂಡಿದೆ. ದರ್ಶನ್ ಜೀವನದಲ್ಲಿ ಮೊದಲ ಬಾರಿಗೆ ಜೈಲಿನಲ್ಲೇ ಜನ್ಮದಿನ ಆಚರಿಸುತ್ತಿದ್ದು, ಹೆಚ್ಚಿನ ಸಂಭ್ರಮಕ್ಕೆ ಅವಕಾಶವಿಲ್ಲ. ಅಲ್ಲಿನ ನಿಯಮಗಳ ಪ್ರಕಾರ ಸೀಮಿತ ಸದಸ್ಯರು ಮಾತ್ರ ಭೇಟಿಗೆ ಅನುಮತಿ ಪಡೆಯಬಹುದು. ಗಂಡನ ಹುಟ್ಟುಹಬ್ಬ ನಿಮಿತ್ತ ಇಂದು ಪತ್ನಿ ವಿಜಯಲಕ್ಷ್ಮೀ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಈ ಮಧ್ಯೆ ವಿಜಯಲಕ್ಷ್ಮೀ ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಮಾಡಿದ್ದಾರೆ. ಇದು ಅಭಿಮಾನಿಗಳಿಗೆ ಹೆಚ್ಚು ಸಂತಸ ನೀಡಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಫೋಟೋದಲ್ಲಿ ದರ್ಶನ್, ವಿನೀಶ್ ಮತ್ತು ವಿಜಯಲಕ್ಷ್ಮೀ ಕೇಕ್ ಎದುರಿಗೆ ನಿಂತಿದ್ದಾರೆ. ಕೇಕ್ ಮೇಲೆ ಆನೆಯ ಚಿತ್ರವನ್ನು ಇಡಲಾಗಿದೆ. ದರ್ಶನ್ ಅವರಿಗೆ ಆನೆ ಎಂದರೆ ಬಹಳ ಇಷ್ಟ ಎಂದು ಎಲ್ಲರಿಗೂ ಗೊತ್ತು. ಈ ಕಾರಣದಿಂದ ಕೇಕ್‌ನಲ್ಲಿ ಆನೆಯನ್ನು ಇರಿಸಲಾಗಿದೆ. ಜೊತೆಗೆ ಒಂದು ಲವ್ ಮೆಸೇಜ್ ಕೂಡ ನೀಡಿದ್ದಾರೆ. ಪೋಸ್ಟ್‌ನಲ್ಲಿ ವಿಜಯಲಕ್ಷ್ಮೀ ಬರೆದಿರುವ ಮಾತುಗಳು ಭಾವುಕವಾಗಿವೆ. ಪ್ರತಿ ದಿನವನ್ನೂ ಸಂಭ್ರಮಿಸುವ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು ಎಂದು ಬರೆದಿದ್ದು, ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನಟ ದರ್ಶನ್ ಹಾಗೂ ಮಗ ವಿನೀಶ್ ನಡುವಿನ ಬಾಂಧವ್ಯ ಈ ವಿಡಿಯೋದಲ್ಲಿದೆ. ದರ್ಶನ್ ಹೊರಗಡೆ ಇದ್ದಾಗ ವಿನೀಶ್ ಜೊತೆ ಸುಂದರ ಕ್ಷಣಗಳನ್ನು ಕಳೆದಿದ್ದರು. ಕೊನೆಗೆ ತಂದೆಗೆ ವಿನೀಶ್ ಹುಟ್ಟುಹಬ್ಬದ ಶುಭಾಶಯ ಕೋರಿರುವ ಆಡಿಯೋ ಕೇಳಬಹುದು. ‘ಡೆವಿಲ್’ ಚಿತ್ರದ ಚಿತ್ರೀಕರಣಕ್ಕಾಗಿ ಪತ್ನಿ ಹಾಗೂ ಮಗನ ಜೊತೆ ದರ್ಶನ್ ಬ್ಯಾಂಕಾಕ್‌ಗೆ ಹೋಗಿದ್ದರು. ಈ ಎಲ್ಲ ಸಂತಸದ ಕ್ಷಣಗಳು ಸೆರೆಯಾಗಿವೆ.






Be the first to comment
Leave a Reply