Jewelry: ಜೋಧಾ ಅಕ್ಬರ್‌’ ಚಿತ್ರದಲ್ಲಿ ಬಳಸಿದ ಆಭರಣಗಳ ಸೆಕ್ಯೂರಿಟಿಗೆ 5 ಗಾರ್ಡ್‌ಗಳನ್ನ ನೇಮಿಸಿದ್ರಂತೆ! ಯಾಕೆ ಗೊತ್ತಾ?

Avatar photo

ನಾಲ್ಕು ಬಾರಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ಕಾಸ್ಟ್ಯೂಮ್ ಡಿಸೈನರ್ ಆದ ನೀತಾ ಲುಲ್ಲಾ ಈ ಚಲನಚಿತ್ರದ ಯಶಸ್ಸಿನಲ್ಲಿ ತುಂಬಾನೇ ಮುಖ್ಯವಾದ ಪಾತ್ರವನ್ನು ವಹಿಸಿದ್ದಾರೆ.

ಅಶುತೋಷ್ ಗೋವಾರಿಕರ್ (Ashutosh Gowariker) ಅವರ 2008 ರ ಚಲನಚಿತ್ರ (Movie) ‘ಜೋಧಾ ಅಕ್ಬರ್’ (Jodha Akbar) ಚಿತ್ರ ತನ್ನ ಪೌರಾಣಿಕ ಕಥೆಗಷ್ಟೆ ಅಲ್ಲದೆ, ಅದರಲ್ಲಿ ನಟಿಸಿದ ನಟ ಹೃತಿಕ್ ರೋಷನ್ (Hrithik Roshan) ಮತ್ತು ನಟಿ ಐಶ್ವರ್ಯ ರೈ (Aishwarya Rai) ಅವರು ಧರಿಸಿದ್ದ ರಿಚ್ ಕಾಸ್ಟ್ಯೂಮ್ ಮತ್ತು ವೈಭವದಿಂದ ಕೂಡಿದ ಆಭರಣಗಳಿಂದಾಗಿಯೂ ನೆನಪಿನಲ್ಲಿ ಉಳಿದಿರುವ ಚಿತ್ರ ಅಂತ ಹೇಳಬಹುದು. ಈ ಪೌರಾಣಿಕ ಚಿತ್ರದಲ್ಲಿ 16ನೇ ಶತಮಾನದ ಮೊಘಲ್ ರಾಜವಂಶದ ರಾಜರ ಇತಿಹಾಸದ ಕಥೆಯನ್ನು ತುಂಬಾನೇ ವೈಭವಯುತವಾಗಿ ಚಿತ್ರೀಕರಿಸಿದ್ದಾರೆ.

ಐಶ್ವರ್ಯಾ ರೈ ಬಚ್ಚನ್ ಮತ್ತು ಹೃತಿಕ್ ರೋಷನ್ ಅವರ ಅಭಿನಯದಲ್ಲಿ ಮೂಡಿ ಬಂದ ಈ ಚಿತ್ರವು ಇಂದು 18 ವರ್ಷಗಳನ್ನು ಪೂರೈಸುತ್ತದೆ. ಆ ಚಿತ್ರೀಕರಣದ ಸಂದರ್ಭದಲ್ಲಿ ನಿರ್ಮಿಸಲಾದ ರಾಜಮನೆತನದ ಸೆಟ್‌ಗಳು ಮತ್ತು ಆ ಚಿತ್ರದಲ್ಲಿ ಬಳಸಲಾದ ರಾಜ ಉಡುಗೆ ತೊಡುಗೆಗಳು ಮತ್ತು ವೈಭವಯುತವಾದ ಒಡವೆಗಳು ಇಂದಿಗೂ ಸಹ ಅಷ್ಟೇ ಜನಪ್ರಿಯವಾಗಿವೆ. ಇದೆಲ್ಲದಕ್ಕೂ ಮೀರಿ ಸಂಗೀತ ನಿರ್ದೇಶಕರಾದ ಎ ಆರ್ ರೆಹಮಾನ್ ಅವರ ಮಧುರ ಸಂಗೀತ ಈ ಚಿತ್ರಕ್ಕೆ ವಿಶಿಷ್ಟವಾದ ಮೆರುಗನ್ನು ತಂದುಕೊಟ್ಟಿತ್ತು.

ಈ ಚಿತ್ರದ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡಿದ್ದ ನೀತಾ

ನಾಲ್ಕು ಬಾರಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ಕಾಸ್ಟ್ಯೂಮ್ ಡಿಸೈನರ್ ಆದ ನೀತಾ ಲುಲ್ಲಾ ಈ ಚಲನಚಿತ್ರದ ಯಶಸ್ಸಿನಲ್ಲಿ ತುಂಬಾನೇ ಮುಖ್ಯವಾದ ಪಾತ್ರವನ್ನು ವಹಿಸಿದ್ದಾರೆ. ನಾಲ್ಕು ದಶಕಗಳಿಗೂ ಹೆಚ್ಚು ಕಾಲದ ವೃತ್ತಿಜೀವನದೊಂದಿಗೆ, ಭಾರತೀಯ ಕಾಸ್ಟ್ಯೂಮ್ ಡಿಸೈನರ್ ಈ ಚಿತ್ರದಲ್ಲಿ ಬಳಸಲಾಗುವ ವಸ್ತ್ರಗಳ ವಿನ್ಯಾಸದ ಬಗ್ಗೆ ತುಂಬಾನೇ ಆಳವಾದ ಸಂಶೋಧನೆಯನ್ನ ಮಾಡಿದ್ರಂತೆ.

ಆಭರಣಗಳಿರುವ ಕೊಠಡಿಯನ್ನ 5 ಸೆಕ್ಯೂರಿಟಿ ಗಾರ್ಡ್‌ಗಳು ಕಾವಲು ಕಾಯ್ತಿದ್ರಂತೆ

ಆಭರಣಗಳ ಬಗ್ಗೆ ಮಾತಾಡುತ್ತಾ ಡಿಸೈನರ್ ‘ನಾನು ಅವಳ ಕೋಣೆಗೆ ಅಥವಾ ವ್ಯಾನಿಟಿ ವ್ಯಾನಿಗೆ ಯಾವುದಾದರೊಂದು ಕಾಸ್ಟ್ಯೂಮ್ ಅನ್ನು ತೆಗೆದುಕೊಂಡು ಹೋದಾಗ, ನನಗೆ ಮೊದಲು ಸಿಗುತ್ತಿದ್ದುದ್ದು ‘ಆ ಗಯಿ’ ಎಂಬ ಪ್ರತಿಕ್ರಿಯೆ. ಲೆಹೆಂಗಾ ಮತ್ತು ಚೋಲಿ ಧರಿಸಿ ದುಪಟ್ಟಾವನ್ನು ಪಿನ್ ಮಾಡುವುದರ ಜೊತೆಗೆ, ಈ ಎಲ್ಲಾ ಆಭರಣಗಳನ್ನು ನಾವು ನೋಡಿಕೊಳ್ಳಬೇಕಾಗಿತ್ತು. ಇಬ್ಬರು ಅದನ್ನು ಹಿಡಿದುಕೊಂಡು ಬರುತ್ತಿದ್ದರು. ನಂತರ ನಾನು ಅದನ್ನು ನಾಲ್ಕು ದಾರಗಳಿಂದ ಪ್ಯಾಕ್ ಮಾಡುತ್ತಿದ್ದೆ,’ ಅಂತ ಕಾಸ್ಟ್ಯೂಮ್ ಡಿಸೈನರ್ ಹೇಳುತ್ತಾರೆ.
ಈ ಎಲ್ಲಾ ಆಭರಣಗಳು ಸೆಟ್‌ನಲ್ಲಿ ತನ್ನದೇ ಆದ ಪಾತ್ರವನ್ನು ವಹಿಸಿದವು. ಅದನ್ನು ರಕ್ಷಿಸಲು ಐದು ಭದ್ರತಾ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು ಎಂದು ನೀತಾ ಲುಲ್ಲಾ ಹಂಚಿಕೊಳ್ಳುತ್ತಾರೆ. ‘ಆಭರಣ ಕೊಠಡಿಯನ್ನು ನೋಡಿಕೊಳ್ಳಲು ಐದು ಭದ್ರತಾ ಸಿಬ್ಬಂದಿ ಇದ್ದರು. ಎಲ್ಲವನ್ನೂ ಬರೆದು, ನಟನಿಗೆ ನೀಡಿ, ಹಿಂದಕ್ಕೆ ತೆಗೆದುಕೊಂಡು, ಮರು ಪಟ್ಟಿ ಮಾಡಲಾಯಿತು. ಒಂದು ಬಾರಿ, ಒಂದು ಕಿವಿಯೋಲೆಯಿಂದ ಒಂದು ಸಣ್ಣ ಮಣಿ ಕೆಳಗೆ ಬಿದ್ದಿತು.
ಭದ್ರತಾ ಸಿಬ್ಬಂದಿ ನನ್ನ ಬಳಿಗೆ ಓಡಿ ಬಂದರು, ಎಲ್ಲರೂ ಗಾಬರಿಗೊಂಡರು. ಅವನು ಬೆರಳು ತೋರಿಸಿ, ‘ಇಸ್ಮೇ ಯೇ ಮಣಿ ಖೋ ಗಯಾ’ ಎಂದು ಹೇಳಿದನು. ಎಲ್ಲರೂ ಓಡಿ ಬಂದರು, ಮತ್ತು ಇದ್ದಕ್ಕಿದ್ದಂತೆ ಎಲ್ಲರ ವಾಕಿ-ಟಾಕಿಗಳು ಅಲರ್ಟ್ ಆದವು,’ ಅಂತ ಡಿಸೈನರ್ ಹೇಳಿದರು. ಮೊಘಲ್ ಮಿನಿಯೇಚರ್‌ಗಳ ಅದ್ಭುತ ಬ್ಲೂಪ್ರಿಂಟ್‌ನಂತೆ ಕುಂದನ್ ಚೋಕರ್‌, ಎನಾಮೆಲ್ಡ್ ಪೋಲ್ಕಿ ಮತ್ತು ರೀಗಲ್ ಬೋರ್ಲಾಗಳ ಅದ್ಭುತ ಸೆಟ್ – ಜೋಧಾ ಅಕ್ಬರ್ ಅವರ ಆಭರಣಗಳನ್ನು ತಾನಿಷ್ಕ್ ಸಹಯೋಗದೊಂದಿಗೆ ವಿನ್ಯಾಸಗೊಳಿಸಲಾಗಿತ್ತು.

Be the first to comment

Leave a Reply

Your email address will not be published. Required fields are marked *

ad image