Kolar: ಕೋಲಾರದಲ್ಲಿ ನಿರ್ಮಾಣವಾಗಲಿವೆ ಮೇಡ್ ಇನ್ ಇಂಡಿಯಾ ಹೆಲಿಕಾಪ್ಟರ್! ಮೋದಿ ಕೊಡಲಿದ್ದಾರೆ ಗ್ರೀನ್ ಸಿಗ್ನಲ್!

Avatar photo

ನಾಳೆಯಿಂದ ಮಿನಿ ಹೆಲಿಕಾಪ್ಟರ್ ಘಟಕ ಕಾರ್ಯಾರಂಭ ಮಾಡಲಿದೆ. ನಾಳೆ ನಡೆಯಲಿರುವ  ಕಾರ್ಯಕ್ರಮಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗು ಫ್ರಾನ್ಸ್‌ ರಕ್ಷಣಾ ಸಚಿವೆ ಕ್ಯಾಥರಿನ್ ವ್ಯಾಟ್ರಿ ಕೂಡ ಭಾಗಿಯಾಗಲಿದ್ದಾರೆ.

 

ಕೋಲಾರದಲ್ಲಿ ಭಾರತದ ಟಾಟಾ ಗ್ರೂಪ್​ನ (Tata Group) ಕೋಲಾರದಲ್ಲಿ ದೇಶದ ಮೊದಲ ಟಾಟಾ ಮಿನಿ ಏರ್​ಬಸ್ ಹೆಲಿಕಾಪ್ಟರ್ (Mini Airbus Helicopter) ಉತ್ಪಾದನಾ ಘಟಕ ಕಾರ್ಯರಂಭ ಮಾಡಲಿದೆ. ಕೋಲಾರ ತಾಲೂಕಿನ ವೇಮಗಲ್ (Vemagal) ಕೈಗಾರಿಕಾ ಪ್ರದೇಶದಲ್ಲಿ ಹೆಲಿಕಾಪ್ಟರ್ ಉತ್ಪಾದನಾ ನಿರ್ಮಾಣ ಮಾಡಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಚಾಲನೆ ನೀಡಲಿದ್ದಾರೆ. ವರ್ಚುವಲ್ ಮೂಲಕ ಪ್ರಧಾನಿ ಮೋದಿ ಹಾಗು ಫ್ರಾನ್ಸ್ ಅಧ್ಯಕ್ಷ್ಯ ಇಮ್ಯಾನ್ಯುಯಲ್ ಮ್ಯಾಕ್ರಾನ್ (Immanuel Macaron) ಭಾಗಿಯಾಗಲಿದ್ದಾರೆ.

ಭಾರತದ ಹೆಮ್ಮೆಯ ಕಂಪನಿಯಾದ ಟಾಟಾ ಕಂಪನಿಯಿಂದ ಟಾಟಾ ಅಡ್ವಾನ್ಸ್ ಸಿಸ್ಟಮ್ಸ್ ಲಿಮಿಟೆಡ್‌ ಏರ್‌ಬಸ್ ಎಚ್ 125 ಹೆಲಿಕಾಪ್ಟರ್ ಅಂತಿಮ ಜೋಡಣಾ ಘಟಕವನ್ನು ಕೋಲಾರದ ವೇಮಗಲ್​ ಕೈಗಾರಿಕ ಪ್ರದೇಶ ನಿರ್ಮಿಸಲಾಗಿದ್ದು, ನಾಳೆಯಿಂದ ಮಿನಿ ಹೆಲಿಕಾಪ್ಟರ್ ಘಟಕ ಕಾರ್ಯಾರಂಭ ಮಾಡಲಿದೆ. ಇನ್ನು, ನಾಳೆ ಕೋಲಾರದಲ್ಲಿ ನಡೆಯಲಿರುವ  ಕಾರ್ಯಕ್ರಮಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗು ಫ್ರಾನ್ಸ್‌ ರಕ್ಷಣಾ ಸಚಿವೆ ಕ್ಯಾಥರಿನ್ ವ್ಯಾಟ್ರಿ ಕೂಡ ಭಾಗಿಯಾಗಲಿದ್ದಾರೆ.

Be the first to comment

Leave a Reply

Your email address will not be published. Required fields are marked *

ad image