‘ದೊಡ್ಮನೆ ಹಬ್ಬ’ ಕಾರ್ಯಕ್ರಮದಲ್ಲಿ ರಕ್ಷಿತಾ ಶೆಟ್ಟಿ ಅತ್ತುಬಿಟ್ಟಿದ್ದಾರೆ. ಗಿಲ್ಲಿ ನಟ ಬಗ್ಗೆ ತಮ್ಮ ಬೇಸರವನ್ನ ಹೊರಹಾಕಿದ್ದಾರೆ. ಅಸಲಿಗೆ, ಗಿಲ್ಲಿ ನಟ ಮೇಲೆ ರಕ್ಷಿತಾ ಶೆಟ್ಟಿ ಬೇಜಾರು ಮಾಡಿಕೊಂಡಿದ್ಯಾಕೆ? ಏಕಾಏಕಿ ಕಣ್ಣೀರು ಸುರಿಸಿದ್ಯಾಕೆ? ಇಲ್ಲಿದೆ ಮಾಹಿತಿ…

‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮ ಮುಗಿದು ಇನ್ನೇನು 1 ತಿಂಗಳಾಗುತ್ತಾ ಬಂತು. ಆದರೂ ‘ಬಿಗ್ ಬಾಸ್’ ಹವಾ ಇನ್ನೂ ಕಮ್ಮಿ ಆಗಿಲ್ಲ. ಎಲ್ಲೆಲ್ಲೂ ‘ಬಿಗ್ ಬಾಸ್’ ವಿನ್ನರ್ ಗಿಲ್ಲಿ ಕ್ರೇಜ್ ಜೋರಾಗಿದೆ. ‘ಬಿಗ್ ಬಾಸ್’ ಮನೆಯಿಂದ ಹೊರಬಂದಿದ್ದೇ ತಡ.. ಗಿಲ್ಲಿ ನಟ ಸಿಕ್ಕಾಪಟ್ಟೆ ಬಿಜಿಯಿದ್ದಾರೆ. ಪ್ರತಿದಿನ ಒಂದಲ್ಲಾ ಒಂದು ಕಾರ್ಯಕ್ರಮಗಳಿಗೆ ಗಿಲ್ಲಿ ನಟ ಭೇಟಿ ಕೊಡುತ್ತಿದ್ದಾರೆ. ಹೀಗಿರುವಾಗಲೇ, ಗಿಲ್ಲಿ ನಟ ಮೇಲೆ ರಕ್ಷಿತಾ ಶೆಟ್ಟಿ ತಮ್ಮ ಬೇಸರ ಹೊರಹಾಕಿದ್ದಾರೆ. ಸಾಲದಕ್ಕೆ, ರಕ್ಷಿತಾ ಶೆಟ್ಟಿ ಕಣ್ಣೀರು ಸುರಿಸಿದ್ದಾರೆ.
‘ದೊಡ್ಮನೆ ಹಬ್ಬ’
ಇತ್ತೀಚೆಗಷ್ಟೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ‘ದೊಡ್ಮನೆ ಹಬ್ಬ’ ಕಾರ್ಯಕ್ರಮ ನಡೆಯಿತು. ಫೆಬ್ರವರಿ 14 ರಂದು ‘ದೊಡ್ಮನೆ ಹಬ್ಬ’ ಶೋ ಪ್ರಸಾರವಾಯಿತು. ಇದೇ ಕಾರ್ಯಕ್ರಮದಲ್ಲಿ ರಕ್ಷಿತಾ ಶೆಟ್ಟಿ ಕಣ್ಣೀರು ಸುರಿಸಿದ್ದಾರೆ.
ರಕ್ಷಿತಾ ಶೆಟ್ಟಿ ಹೇಳಿದ್ದೇನು?
‘ದೊಡ್ಮನೆ ಹಬ್ಬ’ ಕಾರ್ಯಕ್ರಮದಲ್ಲಿ ‘ಬಿಗ್ ಬಾಸ್’ ಬಗ್ಗೆ ಮಾತನಾಡಿದ ರಕ್ಷಿತಾ ಶೆಟ್ಟಿ, ‘’ನನ್ನ ದೇಹ ಇಲ್ಲಿದೆ ಅಷ್ಟೇ. ಆದರೆ, ನನ್ನ ಮನಸ್ಸು ಇನ್ನೂ ‘ಬಿಗ್ ಬಾಸ್’ ಮನೆಯಲ್ಲೇ ಇದೆ. ನಾನು ಅಲ್ಲಿಂದ ಇನ್ನೂ ಹೊರಗೆ ಬಂದಿಲ್ಲ. ನಾವೆಲ್ಲಾ ತುಂಬಾ ಜಗಳ ಮಾಡಿದ್ದೀವಿ, ಹೊಟ್ಟೆಕಿಚ್ಚು ಇರಬಹುದು, ಕೋಪ – ನಿಷ್ಠೂರ.. ಎಲ್ಲಾ ಇರಬಹುದು. ಆದರೆ, ಎಲ್ಲರನ್ನ ನಾನು ನೋಡುವಾಗ ಒಂದೊಂದು ಮೆಮೊರಿ ನೆನಪಾಗುತ್ತದೆ. ಒಳಗೆ ಹೇಗೆ ಇದ್ವೋ.. ಹೊರಗೆ ಸಹ ಅದೇ ಅನುಬಂಧ ಮುಂದುವರೆಯುತ್ತದೆ ಎಂಬ ಆಶಯ ನನಗಿತ್ತು. ಎಲ್ಲೋ ಒಂದು ಕಡೆ ಅದು ಡಿಸ್ಕನೆಕ್ಟ್ ಆದರೆ, ಹರ್ಟ್ ಆಗುತ್ತದೆ’’ ಎಂದು ಹೇಳಿ ರಕ್ಷಿತಾ ಶೆಟ್ಟಿ ಅತ್ತುಬಿಟ್ಟಿದ್ದಾರೆ. ಕಣ್ಣೀರು ಸುರಿಸಿದ ನಂತರ ‘’ವೇದಿಕೆ ಮೇಲೆ ಅತ್ತಿದ್ದೇನೆ. ರಿಯಲಿ ಸಾರಿ’’ ಎಂದು ರಕ್ಷಿತಾ ಶೆಟ್ಟಿ ಕ್ಷಮೆ ಕೇಳಿದ್ದಾರೆ.






Be the first to comment
Leave a Reply