ಬ್ಲಿಂಕ್‌ಇಟ್‌ನಿಂದ ಖರೀದಿಸಿದ ಚಾಕುವಿನಿಂದ 2 ಕೊಲೆ; ಇ-ಕಾಮರ್ಸ್ ಕಂಪನಿ ವಿರುದ್ಧ ಪ್ರಕರಣ ದಾಖಲು

Police raid BlinkIt stores: ಕೊಲೆಗಳಲ್ಲಿ ಹೆಚ್ಚಾಗಿ ಬಳಸುವ ಬಟನ್ ಚಾಕುಗಳು ಅಥವಾ ಬಟನ್ ಲಾಕ್ ಚಾಕುಗಳನ್ನು ಮಾರಾಟ ಮಾಡಿದ್ದಕ್ಕಾಗಿ ಆನ್‌ಲೈನ್ ವಿತರಣಾ ಕಂಪನಿ ಬ್ಲಿಂಕ್‌ಇಟ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪಶ್ಚಿಮ ದೆಹಲಿಯಲ್ಲಿ ನಡೆದ ಎರಡು ಪ್ರತ್ಯೇಕ ಕೊಲೆಗಳ ತನಿಖೆಯ ಸಮಯದಲ್ಲಿ, ಎರಡೂ ಅಪರಾಧಗಳಲ್ಲಿ ಬಳಸಲಾದ ಚಾಕುಗಳನ್ನು ಬ್ಲಿಂಕ್‌ಇಟ್ ಮೂಲಕ ಖರೀದಿಸಲಾಗಿದೆ ಎಂದು ತಿಳಿದುಬಂದಿದೆ.

ಕೊಲೆಗಳಲ್ಲಿ ಹೆಚ್ಚಾಗಿ ಬಳಸುವ ಬಟನ್ ಚಾಕು ಅಥವಾ ಬಟನ್ ಲಾಕ್ ಚಾಕು ಮಾರಾಟ ಮಾಡಿದ್ದಕ್ಕಾಗಿ ಆನ್‌ಲೈನ್ ವಿತರಣಾ ಕಂಪನಿ ಬ್ಲಿಂಕ್‌ಇಟ್ (BlinkIt) ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಎರಡು ಪ್ರತ್ಯೇಕ ಕೊಲೆ ಪ್ರಕರಣಗಳ ಆರೋಪಿಗಳು ಈ ಆ್ಯಪ್ ಮೂಲಕ ಚಾಕುಗಳನ್ನು ಖರೀದಿಸಿದ್ದಾಗಿ ಹೇಳಿದ ನಂತರ ದೆಹಲಿ (Delhi) ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಪಶ್ಚಿಮ ದೆಹಲಿಯಲ್ಲಿ ನಡೆದ ಎರಡು ಪ್ರತ್ಯೇಕ ಕೊಲೆಗಳ ತನಿಖೆಯ ಸಮಯದಲ್ಲಿ, ಎರಡೂ ಅಪರಾಧಗಳಲ್ಲಿ ಬಳಸಲಾದ ಚಾಕುಗಳನ್ನು ಬ್ಲಿಂಕ್‌ಇಟ್ ಮೂಲಕ ಖರೀದಿಸಲಾಗಿದೆ ಎಂದು ತಿಳಿದುಬಂದಿದೆ. ನಂತರ ಪೊಲೀಸರು ಗ್ರಾಹಕರಂತೆ ನಟಿಸಿ ಅದೇ ಚಾಕುವನ್ನು ಬ್ಲಿಂಕ್‌ಇಟ್‍ನಿಂದ ಖರೀದಿಸಿದರು.

ಸರ್ಕಾರಿ ನಿಯಮಗಳ ಪ್ರಕಾರ, 7.62 ಸೆಂ.ಮೀ. ಉದ್ದ ಮತ್ತು 1.72 ಸೆಂ.ಮೀ. ಅಗಲದ ಬ್ಲೇಡ್‌ಗಳನ್ನು ಹೊಂದಿರುವ ಚಾಕುಗಳನ್ನು ಮಾತ್ರ ಆನ್‌ಲೈನ್‌ನಲ್ಲಿ ಮಾರಾಟ ಮಾಡಬಹುದು. ಅದಕ್ಕಿಂತ ದೊಡ್ಡದಾದ ಯಾವುದೇ ಚಾಕು ಮಾರಾಟ ಶಸ್ತ್ರಾಸ್ತ್ರ ಕಾಯ್ದೆಯನ್ನು ಉಲ್ಲಂಘಿಸುತ್ತದೆ ಮತ್ತು ಅದು ಕ್ರಿಮಿನಲ್ ಅಪರಾಧ ಎನಿಸಿಕೊಳ್ಳುತ್ತದೆ. ಪೊಲೀಸರಿಗೆ ತಲುಪಿಸಿದ ಚಾಕು 8 ಸೆಂ.ಮೀ. ಉದ್ದ ಮತ್ತು 2.5 ಸೆಂ.ಮೀ. ಅಗಲವಿದ್ದು, ಇದು ಕಾನೂನು ಮಿತಿಗಳನ್ನು ಮೀರಿದೆ.

ನಂತರ ಪೊಲೀಸರು ದೆಹಲಿಯಾದ್ಯಂತ ಹಲವು ಬ್ಲಿಂಕ್‌ಇಟ್ ಶಾಖೆ ಮೇಲೆ ದಾಳಿ ನಡೆಸಿ 55ಕ್ಕೂ ಹೆಚ್ಚು ಅಂತಹ ಚಾಕುಗಳನ್ನು ವಶಪಡಿಸಿಕೊಂಡರು. ಅಂತಹ ಚಾಕುಗಳನ್ನು ಮಾರಾಟ ಮಾಡಿದ್ದಕ್ಕಾಗಿ ಕ್ವಿಕ್-ಕಾಮರ್ಸ್ ಪ್ಲಾಟ್‌ಫಾರ್ಮ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದರ ಬೆಲೆ 699 ರುಪಾಯಿ ಎಂದು ವರದಿಯಾಗಿದೆ.

Be the first to comment

Leave a Reply

Your email address will not be published. Required fields are marked *

ad image