ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ವೆಸ್ಟ್ ಇಂಡೀಸ್ ವೇಗಿ ಶರ್ಮ ಜೋಸೆಫ್ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಟಿ20 ವಿಶ್ವಕಪ್ನ 37ನೇ ಪಂದ್ಯದಲ್ಲಿ ಇಟಲಿ ವಿರುದ್ಧ ಆಡಿದ ಈ ಪಂದ್ಯದಲ್ಲಿ, ಶಮರ್ 4 ಓವರ್ಗಳಲ್ಲಿ 30 ರನ್ ನೀಡಿ 4 ವಿಕೆಟ್ಗಳನ್ನು ಪಡೆದರು. ಅಲ್ಲದೆ, 4 ಕ್ಯಾಚ್ಗಳನ್ನು ಸಹ ಹಿಡಿದಿದ್ದರು. ಈ ಮೂಲಕ ಒಂದೇ ಪಂದ್ಯದಲ್ಲಿ 4 ವಿಕೆಟ್ ಮತ್ತು 4 ಕ್ಯಾಚ್ಗಳನ್ನು ಪಡೆದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಶಮರ್ ಜೋಸೆಫ್ ಅವರ ಐತಿಹಾಸಿಕ ಸಾಧನೆ
ಸ್ಥಳ: ಈಡನ್ ಗಾರ್ಡನ್ಸ್, ಕೋಲ್ಕತ್ತಾ
ಪ್ರತಿ : ಇಟಲಿ
ಬೌಲಿಂಗ್: 4 ಓವರ್ಗಳಲ್ಲಿ 30 ರನ್ಗೆ 4 ವಿಕೆಟ್ಗಳು (ಹ್ಯಾರಿ ಮ್ಯಾನೆಂಟಿ, ಥಾಮಸ್ ಡ್ರಾಕಾ, ಗ್ರಾಂಟ್ ಸ್ಟೀವರ್ಟ್, ಅಲಿ ಹಸನ್ )
ಫೀಲ್ಡಿಂಗ್: 4 ಕ್ಯಾಚ್ಗಳು
ವಿಶೇಷತೆ: ಟಿ20 ಅಂತಾರಾಷ್ಟ್ರೀಯ ಪಂದ್ಯವೊಂದರಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ
ಈ ಐತಿಹಾಸಿಕ ಪ್ರದರ್ಶನದಿಂದ ವೆಸ್ಟ್ ಇಂಡೀಸ್ ಇಟಲಿ ವಿರುದ್ಧ 42 ರನ್ಗಳ ಜಯ ಸಾಧಿಸಿತು






Be the first to comment
Leave a Reply