ಸುಟ್ಟ ಕಲೆ ಇರುವ ಶರ್ಟ್‌ಗೆ 1 ಲಕ್ಷ ರುಪಾಯಿ: ಇಂತಹ ಬಟ್ಟೆ ಕಸದ ಬುಟ್ಟಿಗೆ ಎಸೆದಿದ್ದೇವೆ ಎಂದು ಕಾಲೆಳೆದ ನೆಟ್ಟಿಗರು

ಬ್ರ್ಯಾಂಡ್ ಉಡುಪುಗಳು ಅಂತ ಬಂದಾಗ ಆಫರ್ ಇದ್ದರೆ ಸಾಕು ಜನ ಸಾಲುಗಟ್ಟಿ ನಿಂತು ಖರೀದಿಸುತ್ತಾರೆ. ಈಗ ‘ವೆಟ್‌ಮೆಂಟ್ಸ್’ ಎಂಬ ಫ್ಯಾಷನ್ ಬ್ರ್ಯಾಂಡ್ ವಿಭಿನ್ನ ವಾದ ಶರ್ಟ್ ಒಂದನ್ನು ಪರಿಚಯಿಸಿದ್ದು ಇದರ ವಿನ್ಯಾಸ ನೋಡಿಯೇ ಜನ‌ ಶಾಕ್ ಆಗಿದ್ದಾರೆ.

ನಾನಾ ಫ್ಯಾಷನ್ ಟ್ರೆಂಡಿಂಗ್ ಬಟ್ಟೆಗಳು ಮಾರುಕಟ್ಟೆಗೆ ಬಂದಿವೆ. ವಿವಿಧ ವಿನ್ಯಾಸ, ಅದರ ಗ್ರ್ಯಾಂಡ್ ವರ್ಕ್ ಹೀಗೆ ಎಲ್ಲವೂ ಜನರ ಗಮನ ಸೆಳೆಯುತ್ತದೆ. ಅದರಲ್ಲೂ ಬ್ರ್ಯಾಂಡ್ ಉಡುಪುಗಳು ಅಂತ ಬಂದಾಗ ಆಫರ್ ಇದ್ದರೆ ಸಾಕು ಜನ ಸಾಲುಗಟ್ಟಿ ನಿಂತು ಖರೀದಿಸುತ್ತಾರೆ. ಈಗ ‘ವೆಟ್‌ಮೆಂಟ್ಸ್’ (Vetements) ಎಂಬ ಫ್ಯಾಷನ್ ಬ್ರ್ಯಾಂಡ್ ವಿಭಿನ್ನ ಶರ್ಟ್ ಒಂದನ್ನು ಪರಿಚಯಿಸಿದ್ದು, ಇದರ ವಿನ್ಯಾಸ ನೋಡಿಯೇ ಜನ‌ ಶಾಕ್ ಆಗಿದ್ದಾರೆ.

ಸಾಮಾನ್ಯವಾಗಿ ಎಲ್ಲರೂ ಬಟ್ಟೆಗೆ ಐರನ್ ಮಾಡುತ್ತಾರೆ. ಅದರಲ್ಲೂ ದುಬಾರಿ ಬಟ್ಟೆ ಎಂದಾಗ ಇಸ್ತ್ರಿ ಪೆಟ್ಟಿಗೆಯನ್ನು ಮೂರು ನಾಲ್ಕು ಭಾರಿ ಗಮನಿಸಿಯೇ ಐರನ್ ಮಾಡುತ್ತೇವೆ‌‌‌. ಬಟ್ಟೆ ಸುಟ್ಟು ಹೋದರೆ ಕಲೆ ಆಗುತ್ತದೆ ಕಪ್ಪಾಗುತ್ತದೆ ಎನ್ನುವ ಕಾರಣಕ್ಕೆ ಈ ಕಾಳಜಿ ಮೊದಲೇ ತೆಗೆದುಕೊಳ್ಳುತ್ತೇವೆ. ಸಾಮಾನ್ಯವಾಗಿ ಸುಟ್ಟ ಗುರುತಿರುವ ಬಟ್ಟೆಯನ್ನು ನಾವು ಕಸಕ್ಕೆ ಎಸೆಯುವುದುಂಟು. ಆದರೆ, ವೆಟ್‌ಮೆಂಟ್ಸ್ ಕಂಪನಿಯು ಈಗ ಇದೇ ವಿಚಿತ್ರವಾದ ‘ಸುಟ್ಟ ಗುರುತಿನ’ ವಿನ್ಯಾಸವಿರುವ ಬಿಳಿ ಶರ್ಟ್ ಅನ್ನು ಮಾರುಕಟ್ಟೆಗೆ ತಂದಿದೆ.

ಇಸ್ತ್ರಿ ಬರ್ನ್ ಗ್ರಾಫಿಕ್ ಶರ್ಟ್ ಎಂಬ ಶೈಲಿಯ ಹೆಸರಿನಲ್ಲಿ ಮಾರಾಟವಾಗುವ ಈ ಡ್ರೆಸ್‌ ಅನ್ನು ಸ್ಕಾರ್ಚ್ ತರಹದ ಮುದ್ರಣದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಈ ಬಟ್ಟೆಯನ್ನು $1,139 (ಸುಮಾರು 1.03 ಲಕ್ಷ ರುಪಾಯಿ) ಮಾರಾಟ ಮಾಡಲಾಗುತ್ತಿದೆ. ಈ ಶರ್ಟ್‌ನ ಫೋಟೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಕಾಮೆಂಟ್‌ಗಳ ಮೂಲಕ ಬ್ರ್ಯಾಂಡ್‌ನ ಕಾಲೆಳೆಯುತ್ತಿದ್ದಾರೆ.

ಶರ್ಟ್‌ನ ಚಿತ್ರ ವೈರಲ್ ಆದ ತಕ್ಷಣ, ಹಲವು ಬಳಕೆದಾರರು ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ‌. ನೆಟ್ಟಿಗರೊಬ್ಬರು ನಾನು ಇದನ್ನು ವರ್ಷಗಳಿಂದ ಉಚಿತವಾಗಿ ಧರಿಸುತ್ತಿದ್ದೇನೆ ಎಂದಿದ್ದಾರೆ‌. ಮತ್ತೊಬ್ಬರು ನನ್ನ ಬಿಳಿ ಶರ್ಟ್ ಅನ್ನು ನಾನು ಸುಲಭವಾಗಿ ಸುಡಬಹುದು. ಏಕೆ ಹಣ ಪಾವತಿಸಬೇಕು? ಎಂದಿದ್ದಾರೆ. ‌ನಾನು ಬಾಲ್ಯದಲ್ಲೇ ಇಂತಹ ಕೆಲಸದಿಂದ ಬಟ್ಟೆ ಹಾಳು ಮಾಡಿದ್ದೇನೆ. ಈಗ ಇದು ಲಕ್ಷ ರುಪಾಯಿಗೆ ಮಾರಾಟ ಆಗುತ್ತಿದೆ ಎಂದು ಹಾಸ್ಯ ಮಾಡಿದ್ದಾರೆ.

Be the first to comment

Leave a Reply

Your email address will not be published. Required fields are marked *

ad image