ರಾಜ್ಯದ ಪುರುಷ ಪ್ರಯಾಣಿಕರಿಗೆ ಗುಡ್​ ನ್ಯೂಸ್ ಕೊಟ್ಟ ಸಾರಿಗೆ ಇಲಾಖೆ!

ಬೆಂಗಳೂರು: ರಾಜ್ಯದಲ್ಲಿ ಬಸ್ ಪ್ರಯಾಣ ಮಾಡುವ ಲಕ್ಷಾಂತರ ಪುರುಷ ಪ್ರಯಾಣಿಕರಿಗೆ ದೊಡ್ಡ ರಿಲೀಫ್ ಸುದ್ದಿ ಬಂದಿದೆ. ಇದನ್ನು ಪುರುಷ ಪ್ರಯಾಣಿಕರಿಗೆ ಗುಡ್​ ನ್ಯೂಸ್​ ಅಂತಲೇ ಹೇಳಬಹುದು. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಧಿಕೃತ ಘೋಷಣೆ ಮಾಡಿದ್ದಾರೆ. ಸದ್ಯಕ್ಕೆ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳ ಟಿಕೆಟ್ ದರ ಏರಿಕೆ ಆಗುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ರಾಜ್ಯದ ಪುರುಷ ಪ್ರಯಾಣಿಕರಿಗೆ ಗುಡ್​ ನ್ಯೂಸ್ ಕೊಟ್ಟ ಸಾರಿಗೆ ಇಲಾಖೆ!
ಕಳೆದ ವರ್ಷ ಜನವರಿಯಲ್ಲಿ ಬಸ್ ಪ್ರಯಾಣ ದರಕ್ಕೆ 15% ಏರಿಕೆ ಮಾಡಲಾಗಿತ್ತು. ಆ ನಂತರ ಸರ್ಕಾರವು ಪ್ರತಿ ವರ್ಷ ದರ ಪರಿಷ್ಕರಣೆ ಮಾಡುವ ನಿರ್ಣಯ ತೆಗೆದುಕೊಂಡಿತ್ತು. ಆದರೆ ಈ ವರ್ಷ ಇದಕ್ಕೆ ಬ್ರೇಕ್​ ಹಾಕಿದೆ. ರಾಜ್ಯ ಸರ್ಕಾರ ಜಲಮಂಡಳಿ, ವಿದ್ಯುತ್ ಮತ್ತು ಮೆಟ್ರೋ ಮಾದರಿಯಲ್ಲಿ ಪ್ರತಿ ವರ್ಷ ದರ ಪರಿಷ್ಕರಣೆ ಮಾಡುವಂತೆ ಸಾರಿಗೆ ದರಕ್ಕೂ ಅನ್ವಯಿಸಲು ಯೋಜನೆ ಮಾಡಲಾಗಿತ್ತು. ಇದಕ್ಕಾಗಿ ಒಂದು ಸಮಿತಿಯನ್ನು ರಚಿಸಿ, ಆ ಸಮಿತಿಯ ವರದಿಯ ಆಧಾರದ ಮೇಲೆ ದರ ಏರಿಕೆ ಅಥವಾ ಕಡಿತ ಮಾಡುವ ಯೋಜನೆಯಾಗಿತ್ತು. ಆದರೆ ಈ ವರ್ಷ ಇನ್ನೂ ಆ ಸಮಿತಿ ರಚನೆಯಾಗಿಲ್ಲ. ಸಮಿತಿ ರಚನೆಯಾಗದ ಕಾರಣ ಈ ವರ್ಷ ಬಸ್ ಟಿಕೆಟ್ ದರ ಏರಿಕೆ ಮಾಡುವುದಿಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಸಚಿವ ರಾಮಲಿಂಗಾರೆಡ್ಡಿ, ಮುಂದಿನ 6 ತಿಂಗಳಲ್ಲಿ ಸಮಿತಿ ರಚನೆಯಾಗಿ ವರದಿ ನೀಡಿದರೂ, ಈ ವರ್ಷ ದರ ಏರಿಕೆಯ ಸಾಧ್ಯತೆ ಇಲ್ಲ. ಅಂದರೆ 2026ರ ಜನವರಿಯಿಂದ ಏಪ್ರಿಲ್ ಅಥವಾ ಮೇ ತಿಂಗಳವರೆಗೆ ಬಸ್ ದರ ಏರಿಕೆ ಆಗುವುದಿಲ್ಲ ಎಂದು ಅರ್ಥ. ಮುಂದಿನ ವರ್ಷ (2027) ದರ ಪರಿಷ್ಕರಣೆಯ ಸಾಧ್ಯತೆ ಇದೆ ಎಂದು ಸಚಿವರು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಪುರುಷ ಪ್ರಯಾಣಿಕರು ದೊಡ್ಡ ರಿಲೀಫ್ ಸಿಕ್ಕಿದೆ. ಏಕೆಂದರೆ ಕಳೆದ ವರ್ಷ ಜನವರಿಯಲ್ಲಿ ದರ ಏರಿಕೆಯಾದ ನಂತರ ಪ್ರಯಾಣಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈಗ ದರ ಏರಿಕೆ ಇಲ್ಲದಿರುವುದರಿಂದ ಪ್ರಯಾಣ ವೆಚ್ಚ ಸ್ಥಿರವಾಗಿರುತ್ತದೆ.
ಈ ನಿರ್ಣಯದಿಂದ ರಾಜ್ಯದಲ್ಲಿ ದಿನನಿತ್ಯ ಬಸ್ ಪ್ರಯಾಣ ಮಾಡುವ ಲಕ್ಷಾಂತರ ಪುರುಷ ಪ್ರಯಾಣಿಕರಿಗೆ ದೊಡ್ಡ ಆರ್ಥಿಕ ರಿಲೀಫ್ ಸಿಕ್ಕಂತಾಗಿದೆ. ವಿಶೇಷವಾಗಿ ಕೆಲಸಕ್ಕೆ ಹೋಗುವವರು, ವಿದ್ಯಾರ್ಥಿಗಳು ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಇದು ದೊಡ್ಡ ಸುದ್ದಿಯಾಗಿದೆ. ಸಾರಿಗೆ ಇಲಾಖೆಯ ಮೂಲಗಳ ಪ್ರಕಾರ, ಸಮಿತಿ ರಚನೆಯಾಗಿ ವರದಿ ಬಂದ ನಂತರವೇ ಮುಂದಿನ ದರ ಪರಿಷ್ಕರಣೆಯ ಬಗ್ಗೆ ಚರ್ಚೆ ನಡೆಯಲಿದೆ. ಈಗಿನ ಸ್ಥಿತಿಯಲ್ಲಿ 2026ರ ಉಳಿದ ತಿಂಗಳುಗಳಲ್ಲಿ ಬಸ್ ದರ ಏರಿಕೆಯ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಲಾಗುತ್ತಿದೆ.

Be the first to comment

Leave a Reply

Your email address will not be published. Required fields are marked *

ad image