
ಬೆಳಗಾವಿ: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಹಿರೇನಂದಿಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಗ್ರಾಮದ ಸಮೀಪದ ಮೆಕ್ಕೆಜೋಳ ಗದ್ದೆಯಲ್ಲಿ 50 ವರ್ಷದ ಕಲ್ಮೇಶ್ ಕೋಟಿ ಅವರ ಶವ ಪತ್ತೆಯಾಗಿದ್ದು,ಕಿತ್ತೂರಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಹತ್ಯೆಗೆ ಕಾರಣವೇನು?
ತುಮಕೂರಿನಲ್ಲಿ ಹೋಮ್ ಕೇರ್ನಲ್ಲಿ ಕೆಲಸ ಮಾಡುತ್ತಿದ್ದ ಕಲ್ಮೇಶ್, ಸುಮಾರು ಹತ್ತು ದಿನಗಳ ಹಿಂದಷ್ಟೇ ಗ್ರಾಮಕ್ಕೆ ಬಂದಿದ್ದರು. ನಾಲ್ಕು ದಿನಗಳ ಹಿಂದೆ ನಡೆದಿರುವ ಈ ಕೊಲೆ ತಡವಾಗಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದುಷ್ಕರ್ಮಿಗಳು ಕಲ್ಮೇಶ್ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದು, ಬಳಿಕ ಮರ್ಮಾಂಗ ಕತ್ತರಿಸಿ ವಿಕೃತಿ ಮೆರೆದಿರುವುದು ಬೆಳಕಿಗೆ ಬಂದಿದೆ. ಹತ್ತು ವರ್ಷಗಳ ಹಿಂದೆ ಕಲ್ಮೇಶ್ ಪತ್ನಿ ದೂರವಾಗಿದ್ದ ಕಾರಣ ತಮ್ಮ ವೃದ್ಧ ತಾಯಿಯೊಂದಿಗೆ ವಾಸವಿದ್ದರು. ಘಟನೆ ತಿಳಿದು ಪತ್ನಿ ಹಾಗೂ ಪುತ್ರ ಗ್ರಾಮಕ್ಕೆ ಆಗಮಿಸಿದ್ದಾರೆ. ಪ್ರಕರಣ ಸಂಬಂಧ ಎಸ್ಪಿ ರಾಮರಾಜನ್ ಸೇರಿದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಣಕಾಸು, ಆಸ್ತಿ ಹಾಗೂ ಮಹಿಳೆ ಸಂಬಂಧಿತ ವಿಚಾರಗಳಿಗೆ ಕೊಲೆ ಆಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.






Be the first to comment
Leave a Reply