ರಿವೀಲ್ ಆಯ್ತು ಆಂಟಿ ಪ್ರಿಯಾಂಕ ಖತರ್ನಾಕ್ ಪ್ಲಾನ್‌!

ರಿವೀಲ್ ಆಯ್ತು ಆಂಟಿ ಪ್ರಿಯಾಂಕ ಖತರ್ನಾಕ್ ಪ್ಲಾನ್‌!

ಹಾಸನ: ಹಾಸನ ಜಿಲ್ಲೆಯ ಕಲ್ಕೆರೆ ಬಳಿ ನಾಪತ್ತೆಯಾಗಿದ್ದ 29 ವರ್ಷದ ಮಹಿಳೆ ಪ್ರಿಯಾಂಕ ಕೇಸ್​​ನಲ್ಲಿ ದೊಡ್ಡ ಟ್ವಿಸ್ಟ್​ ಎದುರಾಗಿದೆ. ತನ್ನ ಕೊಲೆಯಾಗಿದೆ ಎಂದು ಬಿಂಬಿಸಿ, ಪ್ರಿಯಕರ ಡೇವಿಡ್ ಜೊತೆ 30 ಲಕ್ಷ ಮೌಲ್ಯದ ಚಿನ್ನಾಭರಣದೊಂದಿಗೆ ಪರಾರಿಯಾಗಲು ಪ್ರಿಯಾಂಕಾ ಪ್ಲಾನ್ ಮಾಡಿದ್ದಳು. ಆದರೆ, ಬಿಹಾರಕ್ಕೆ ತೆರಳುವ ಮುನ್ನವೇ ಬೇಲೂರು ಪೊಲೀಸರು ಟವರ್ ಲೊಕೇಶನ್ ಆಧರಿಸಿ ಕುಣಿಗಲ್‌ನಲ್ಲಿ ಇಬ್ಬರನ್ನೂ ಪತ್ತೆಹಚ್ಚಿದ್ದಾರೆ. ಫೆಬ್ರವರಿ 12ರ ರಾತ್ರಿ ಕಾಣೆಯಾಗಿದ್ದ ಪ್ರಿಯಾಂಕಾ ನೇರವಾಗಿ ಕುಣಿಗಲ್‌ಗೆ ಬಂದಿದ್ದಳು. ರಾತ್ರಿ 12 ಗಂಟೆಗೆ ಕುಣಿಗಲ್‌ಗೆ ಬಂದಿದ್ದ ಪ್ರಿಯಾಂಕಾಳನ್ನು ಡೇವಿಡ್ ಮನೆಗೆ ಕರೆದುಕೊಂಡು ಬಂದಿದ್ದನು.

ರಿವೀಲ್ ಆಯ್ತು ಆಂಟಿ ಪ್ರಿಯಾಂಕ ಖತರ್ನಾಕ್ ಪ್ಲಾನ್‌!

ಪ್ರಿಯಾಂಕಾ ಮತ್ತು ಡೇವಿಡ್ ಜೊತೆಯಾಗಿಯೇ ಪ್ಲಾನ್ ಮಾಡಿರೋದು ಸಿಸಿಟಿವಿ ದೃಶ್ಯಗಳಿಂದ ಸಾಬೀತಾಗಿದೆ. ಗುರುವಾರ ಸಂಜೆ ನಾಲ್ಕು ಗಂಟೆಗೆ ಹೊರಟಿದ್ದ ಡೇವಿಡ್, ರಾತ್ರಿ 12 ಗಂಟೆಗೆ ಪ್ರಿಯಾಂಕಾ ಜೊತೆ ಆಗಮಿಸಿದ್ದಾನೆ. ಮನೆಯಲ್ಲಿದ್ದ ಪ್ರಿಯಾಂಕಾಗೆ ಡೇವಿಡ್ ಹೋಟೆಲ್‌ನಿಂದ ಊಟ ತಂದುಕೊಟ್ಟಿದ್ದಾನೆ. ಇದೆಲ್ಲವೂ ಡೇವಿಡ್ ವಾಸವಾಗಿದ್ದ ಏರಿಯಾದಲ್ಲಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸುಮಾರು 30 ಲಕ್ಷ ಮೌಲ್ಯದ ಚಿನ್ನಾಭರಣ ಜೊತೆ ಇಬ್ಬರು ಬಿಹಾರಕ್ಕೆ ತೆರಳಲು ಪ್ಲಾನ್ ಮಾಡಿಕೊಂಡಿದ್ದರು. ಶನಿವಾರ ಬೆಳಗ್ಗೆ ಬಿಹಾರಕ್ಕೆ ತೆರಳಲು ಇಬ್ಬರು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ಇನ್ನೇನು ಕುಣಿಗಲ್‌ನಿಂದ ಕಾಲ್ಕಿತ್ತಲು ಅಣಿಯಾಗುತ್ತಿದ್ದಾಗಲೇ ಶುಕ್ರವಾರ ರಾತ್ರಿ ಮನೆ ಮುಂದೆ ಬೇಲೂರು ಠಾಣೆಯ ಪೊಲೀಸರು ಬಂದು ನಿಂತಿದ್ದರು.

ಪೊಲೀಸರು ಬಂದಾಗಲೇ ಪ್ರಿಯಾಕಾ ಮನೆಯಿಂದ ಹೊರಗೆ ಬಂದಿದ್ದಾಳೆ. ಪೊಲೀಸರು ಬರೋದು ಸ್ವಲ್ಪ ವಿಳಂಬವಾಗಿದ್ರೂ ಪ್ರಿಯಾಂಕಾ-ಡೇವಿಡ್ ಬಿಹಾರದತ್ತ ಪ್ರಯಾಣ ಬೆಳೆಸುತ್ತಿದ್ದರು. ಒಂದು ವೇಳೆ ಕುಣಿಗಲ್‌ನಿಂದ ಎಸ್ಕೇಪ್ ಆಗಿದ್ರೆ ಈ ಪ್ರಕರಣ ಮತ್ತಷ್ಟು ಜಟಿಲವಾಗುತ್ತಿತ್ತು. ಟವರ್ ಡಂಪ್, ನೆಟ್‌ವರ್ಕ್ ಲೊಕೇಶನ್ ಆಧಾರದ ಮೇಲೆ ಪೊಲೀಸರು ಕುಣಿಗಲ್‌ಗೆ ಬಂದಿದ್ದರು. ಇಬ್ಬರನ್ನ ಲಾಕ್ ಮಾಡಿದ ಬೇಲೂರು ಪೊಲೀಸರು ರಾತ್ರಿಯೇ ಹಾಸನಕ್ಕೆ ಕರೆದುಕೊಂಡು ಬಂದಿದ್ದಾರೆ. ಮೂರು ಗಂಟೆ ವಿಚಾರಣೆ ಎದುರಿಸಿದ ಬಳಿಕ ಡೇವಿಡ್ ಒಬ್ಬನೇ ಕುಣಿಗಲ್‌ಗೆ ಹಿಂದಿರುಗಿದ್ದಾನೆ. ಗಂಡನೊಂದಿಗೆ ಹೋಗಲು ಒಪ್ಪದ ಪ್ರಿಯಾಂಕಾಳನ್ನ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದೆ.

Tags :

Hassan

Be the first to comment

Leave a Reply

Your email address will not be published. Required fields are marked *

ad image