ವಿಜಯಪುರ: ಈ ದೇಶದ ಗಾಳಿ ಸೇವನೆ ಮಾಡಿ, ಯಾವುದೋ ದೇಶದ ಅಧ್ಯಕ್ಷ ಸತ್ತರೆ ಇಲ್ಲಿ ಅಳುವುದು ಯಾಕೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಈ ದೇಶಕ್ಕೆ ದ್ರೋಹ ಮಾಡಿದ ಹಾಗೆ ಎಂದು ಇರಾನ್ ಸರ್ವೋಚ್ಚ ನಾಯಕ ಖಮೇನಿ ಹತ್ಯೆ ಖಂಡಿಸಿ ಭಾರತದಲ್ಲಿ ಪ್ರತಿಭಟನೆ ನಡೆಸುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆ ಮಾಡುವವರು ಯಾರು ಅಂತಾ ಗೊತ್ತಾಯ್ತಲ್ಲ. ಆರ್‌ಎಸ್‌ಎಸ್ ಪಥಸಂಚಲನ ಮಾಡಬೇಕು ಅಂದ್ರೆ ರಾಜ್ಯದಲ್ಲಿ ರಿಜಿಸ್ಟ್ರೇಷನ್ ಆಗಿದೆಯಾ ಅಂತಾ ಕೇಳ್ತಾರೆ ಪ್ರಿಯಾಂಕ್ ಖರ್ಗೆ. ಈಗ ಇವರು ಅಳೋದಕ್ಕೆ ಮತ್ತು ಆ ದೇಶದ ನಾಯಕನ ಚೇಲಾ ಆಗಲು ರಿಜಿಸ್ಟ್ರೇಷನ್ ಎಲ್ಲಾದ್ರೂ ಮಾಡಿದ್ದಾರಾ? ಯುಎಇ, ಇರಾನ್‌ನಲ್ಲಿ ರಿಜಿಸ್ಟ್ರೇಷನ್ ಮಾಡಿದ್ದಾರಾ ಎಂದು ಸಿದ್ದರಾಮಯ್ಯ, ಪ್ರಿಯಾಂಕ್ ಖರ್ಗೆ ಹೇಳಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
ಅವರು ಪ್ರತಿಭಟನೆ ಮಾಡೋದು, ಅಶಾಂತಿ ಮೂಡಿಸೋದು ಭಾರತದಲ್ಲಿ ಮಾಡಬಾರದು. ಒಂದು ವೇಳೆ ಅವರು ಮಾಡಿದ್ರೆ ಅವರ ಮೇಲೆ ಗುಂಡಿನ ದಾಳಿ ಮಾಡಬೇಕು. ಅವರೆಲ್ಲ ದೇಶದ್ರೋಹಿಗಳೇ ಹೊರತು ದೇಶ ಪ್ರೇಮಿಗಳಲ್ಲ. ಪಾಕಿಸ್ತಾನ ಭಾರತದ ಮೇಲೆ ದಾಳಿ ಮಾಡಿದಾಗ, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿ ಮಾಡಿದಾಗ ಇವರು ಪ್ರತಿಭಟಿಸಲಿಲ್ಲ. ಈಗ ಬಹಳ ದುಃಖ ಆಗಿದೆ ಎಂದು ಕುಟುಕಿದ್ದಾರೆ.






Be the first to comment
Leave a Reply