ನಾಳೆ ಭಾರತ್ ಬಂದ್!?.. ಹೋರಾಟಗಾರರ ಬೇಡಿಕೆಗಳೇನು?

ದೇಶಾದ್ಯಂತ ನಾಳೆ ಭಾರತ್​ ಬಂದ್ ಮಾಡಲು ಹಲವು ಸಂಘಟನೆಗಳು ಕರೆ ನೀಡಿದೆ. ದೇಶಾದ್ಯಂತ ಕೇಂದ್ರ ಸರ್ಕಾರದ ಕೃಷಿ ಮತ್ತು ಆರ್ಥಿಕ ನೀತಿಗಳ ವಿರುದ್ಧ ರಾಷ್ಟ್ರವ್ಯಾಪಿ ಮುಷ್ಕರ ಅಥವಾ ಭಾರತ್ ಬಂದ್‌ಗೆ ಕರೆ ನೀಡಲಾಗಿದೆ. 10 ಕೇಂದ್ರ ಕಾರ್ಮಿಕ ಸಂಘಗಳ ನೇತೃತ್ವದಲ್ಲಿ ನಡೆಯುತ್ತಿರುವ ಈ ಮುಷ್ಕರಕ್ಕೆ ರೈತ ಸಂಘಟನೆಗಳು, ವಿಶೇಷವಾಗಿ ಸಂಯುಕ್ತ ಕಿಸಾನ್ ಮೋರ್ಚಾ ಸಂಪೂರ್ಣ ಬೆಂಬಲ ನೀಡಿದೆ.

ನಾಳೆ ಭಾರತ್ ಬಂದ್!?

ನಾಳೆ ನಡೆಯುವ ಈ ಮುಷ್ಕರ ಕಾರ್ಮಿಕರು ಮತ್ತು ರೈತರ ಜಂಟಿ ಹೋರಾಟವಾಗಿ ರೂಪುಗೊಂಡಿದ್ದು, ಸುಮಾರು 30 ಕೋಟಿಗೂ ಹೆಚ್ಚು ಕಾರ್ಮಿಕರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಸಂಘಟನೆಗಳು ಹೇಳಿವೆ. ಕೇಂದ್ರ ಕಾರ್ಮಿಕ ಸಂಘಗಳು CITU, AITUC, INTUC, HMS, AICCTU, LPF, UTUC ಸೇರಿದಂತೆ 10 ಸಂಘಗಳು ಈ ಮುಷ್ಕರಕ್ಕೆ ಕರೆ ನೀಡಿವೆ. ಇದರ ಜೊತೆಗೆ ಬ್ಯಾಂಕ್, ವಿಮಾ, ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರ ಸಂಘಗಳು ಸಹ ಸೇರಿವೆ. ಮುಷ್ಕರದ ಮುಖ್ಯ ಉದ್ದೇಶಗಳು ಏನೆಂದರೆ, ಖಾಸಗೀಕರಣ ವಿರೋಧ, ಗುತ್ತಿಗೆ ಪದ್ಧತಿ ನಿಲ್ಲಿಸುವುದು, ನಾಲ್ಕು ಕಾರ್ಮಿಕ ಸಂಹಿತೆಗಳ ರದ್ದತಿ, MGNREGAಗೆ ಪ್ರಸ್ತಾವಿತ ಬದಲಾವಣೆಗಳ ವಿರೋಧ, ವಿದ್ಯುತ್ ತಿದ್ದುಪಡಿ ಮಸೂದೆ 2025 ಮತ್ತು ಬೀಜ ಮಸೂದೆ ಹಿಂಪಡೆಯುವುದು. ಇದರಿಂದ ಕಾರ್ಮಿಕರ ಉದ್ಯೋಗ ಭದ್ರತೆ ಮತ್ತು ರೈತರ ಜೀವನೋಪಾಯಕ್ಕೆ ಧಕ್ಕೆ ಬರುತ್ತದೆ ಎಂದು ಸಂಘಟನೆಗಳು ಆರೋಪಿಸಿವೆ.

ಏನಾದ್ರೂ ಬ್ಯಾಂಕ್​ ಕೆಲ್ಸ ಇದ್ರೆ ಇವತ್ತೇ ಮುಗಿಸಿಕೊಳ್ಳಿ..

ಏನಾದ್ರೂ ಎಮೆರ್ಜೆನ್ಸಿ ಬ್ಯಾಂಕ್ ಕೆಲಸಗಳಿದ್ದರೆ ಇಂದೇ ಮುಗಿಸಿಕೊಳ್ಳಿ, ನಾಳೆಗೆ ಮುಂದೂಡಿದರೆ ಕಷ್ಟವಾಗಬಹುದು. ಬ್ಯಾಂಕ್​ಗಳ ಖಾಸಗೀಕರಣ ಮತ್ತು ಕಾರ್ಮಿಕ ಸಂಹಿತೆಯನ್ನು ವಿರೋಧಿಸಿ ನಾಳೆ ದೇಶಾದ್ಯಂತ ಬ್ಯಾಂಕ್ ಮುಷ್ಕರ ನಡೆಯಲಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ದೇಶದ ಪ್ರಮುಖ ಬ್ಯಾಂಕುಗಳು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿವೆ. ಸೇವೆಗಳ ಮೇಲೆ ಪರಿಣಾಮ ಬೀರಬಹುದು ಮತ್ತು ಯಾವುದೇ ತುರ್ತು ಬೇಕಿಂಗ್ ಕೆಲಸವನ್ನು ಮುಂಚಿತವಾಗಿ ಪೂರ್ಣಗೊಳಿಸಬೇಕೆಂದು ಬ್ಯಾಂಕುಗಳು ತಮ್ಮ ಗ್ರಾಹಕರಿಗೆ  ಸೂಚನೆ ನೀಡಿವೆ. ಈ ಸಮಯದಲ್ಲಿ ಬ್ಯಾಂಕ್​ಗಳು, ಭಾರತೀಯ ಜೀವ ವಿಮಾ ನಿಗಮ, ಅಂಚೆ ಕಚೇರಿಗಳು ಮುಚ್ಚಲ್ಪಡುತ್ತವೆ. ಶಾಖೆಗಳು ತೆರೆದಿರಬಹುದು ಆದರೆ ನಗದು ವಹಿವಾಟು ಮತ್ತು ಚೆಕ್ ಕ್ಲಿಯರಿಂಗ್ ಕೆಲಸದಲ್ಲಿ ವಿಳಂಬವಾಗಬಹುದು. ಆದಾಗ್ಯೂ, ಡಿಜಿಟಲ್ ಬ್ಯಾಂಕಿಂಗ್ ಸೇವೆಗಳಲ್ಲಿ ಯಾವುದೇ ಅಡ್ಡಿ ಉಂಟಾಗುವುದಿಲ್ಲ. ವಾರದಲ್ಲಿ ಕೇವಲ ಐದು ದಿನಗಳ ಕೆಲಸಕ್ಕೆ ಒತ್ತಾಯಿಸಿ ಜನವರಿ 27ರಂದು ಬ್ಯಾಂಕ್​ಗಳು ಒಂದು ದಿನದ ಮುಷ್ಕರವನ್ನು ನಡೆಸಿದ್ದರು. ಕಳೆದ ವರ್ಷದ ಕೊನೆಯಲ್ಲಿ ಸರ್ಕಾರವು ಅಧಿಸೂಚನೆ ಹೊರಡಿಸಿದ ನಾಲ್ಕು ಹೊಸ ಕಾರ್ಮಿಕ ಕಾನೂನು ವಿರೋಧಿಸಲು 10 ಕೇಂದ್ರ ಕಾರ್ಮಿಕ ಸಂಘಗಳು ಕರೆದ ಪ್ರತಿಭಟನೆಯಲ್ಲಿ ನಾಳೆ ಭಾಗವಹಿಸುತ್ತಿದ್ದಾರೆ.

ಬ್ಯಾಂಕ್​ ಮುಷ್ಕರ

ಮುಷ್ಕರ ಯಾಕೆ ?

ಕೇಂದ್ರ ಸರ್ಕಾರವು ಕಾರ್ಮಿಕ ಕಾನೂನುಗಳನ್ನು ಹಾಳು ಮಾಡುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಇದಲ್ಲದೆ ಬ್ಯಾಂಕ್ ನೌಕರರ ಮೇಲೆ ಹೆಚ್ಚಿನ ಹೊರೆ ಹಾಕಲಾಗುತ್ತಿದೆ. ಹಳೆಯ ಪಿಂಚಣಿ ಮತ್ತು ಹೊಸ ಕಾರ್ಮಿಕ ಕಾನೂನು ರದ್ದುಗೊಳಿಸುವ ಬೇಡಿಕೆಗಳು ಬಹಳ ದಿನಗಳಿಂದ ಕೇಳಿಬರುತ್ತಿವೆ. ಆದರೆ ಸರ್ಕಾರ ಗಮನ ಹರಿಸುತ್ತಿಲ್ಲ ಎಂಬುದು ಅವರ ವಾದ.  ಪರಿಣಾಮವಾಗಿ, ಸಂಸ್ಥೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ನಾಳೆ ಬೃಹತ್ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ.

Be the first to comment

Leave a Reply

Your email address will not be published. Required fields are marked *

ad image