
ಬಿಗ್ ಬಾಸ್ ಗುಂಗಿನಿಂದ ಜನ ಹೊರಗೆ ಬಂದಿದ್ರೂ, ಸ್ಪರ್ಧಿಗಳು ಮಾತ್ರ ಅದೇ ಗುದ್ದಾಟ ಮುಂದುವರೆಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮಾಜಿ ಸ್ಪರ್ಧಿ ಚೈತ್ರಾ ಕುಂದಾಪುರ (Chaitra Kundapura) vs ಅಶ್ವಿನಿ ಗೌಡ (Ashwini Gowda) ಪೋಸ್ಟ್ ವಾರ್ ಜೋರಾಗಿದೆ.
ಬಿಗ್ ಬಾಸ್ (Bigg Boss) ಸೀಸನ್ 12ರ ಶೋನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ರಜತ್ ಹಾಗೂ ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಗೆ ಬಂದಿದ್ರು. ಆಗ ಚೈತ್ರಾ ಹಾಗೂ ಅಶ್ವಿನಿ ನಡುವೆ ವಾರ್ ಜೋರಾಗಿತ್ತು. ಇದೀಗ ಅಶ್ವಿನಿ ಪೋಸ್ಟ್ ಒಂದನ್ನ ಶೇರ್ ಮಾಡಿದ್ದು, ಚೈತ್ರಾ ಕುಂದಾಪುರ ಅವರನ್ನು ಕೆರಳುವಂತೆ ಮಾಡಿದೆ.

ಅಶ್ವಿನಿ ಗೌಡ ಅವರ ಒಂದು ಪೋಸ್ಟ್ಗೆ ಚೈತ್ರಾ ಕುಂದಾಪುರ ಕೆರಳಿ ಕೆಂಡವಾಗಿದ್ದಾರೆ. ತಮ್ಮ ಕೈ ಕಾಲುಗಳ ಮೇಲೆ ಪರಚಿರುವ ಗಾಯದ ಫೋಟೋವನ್ನು ಅಶ್ವಿನಿ ಗೌಡ ಪೋಸ್ಟ್ ಮಾಡಿದ್ದಾರೆ. ಇದು ಚೈತ್ರಾ ಕುಂದಾಪುರ ಅವರೇ ಪರಚಿದ ಗಾಯಗಳು ಅಂತ ಜನರು ಕಮೆಂಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಅಶ್ವಿನಿ ಪೋಸ್ಟ್ಗೆ ಚೈತ್ರಾ ಕುಂದಾಪುರ ಕೂಡ ತಿರುಗೇಟು ನೀಡಿದ್ದಾರೆ. ನಂಗೂ ದೇಹದ ಮೇಲೆ ಪರಚಿದ ಕಲೆಗಳಿವೆ. ಆದ್ರೆ ಕ್ಷಮಿಸಿ ನನ್ನ ಬಳಿ ಯಾವುದೇ ಪಿಆರ್ ತಂಡ ಇಲ್ಲ ಎಂದು ಕೌಂಟರ್ ಪೋಸ್ಟ್ ಮಾಡಿದ್ದಾರೆ.
ಚೈತ್ರಾ ಕುಂದಾಪುರ ಪೋಸ್ಟ್ ಮೇಲೆ ಪೋಸ್ಟ್ ಶೇರ್ ಮಾಡಿ ಕೌಂಟರ್ ಕೊಟ್ಟಿದ್ದು, ಅಶ್ವಿನಿ ಗೌಡ ಫ್ಯಾನ್ಸ್ ಗರಂ ಆಗಿದ್ದಾರೆ. ಚೈತ್ರಾ ವಿರುದ್ಧ ನಾನಾ ಆಕ್ರೋಶದ ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ.






Be the first to comment
Leave a Reply