Skip to content
NCIB TIMES MEDIA Mon, Mar 2, 2026 ad image
  • ಮುಖಪುಟ
  • ಟ್ರೆಂಡಿಂಗ್‌
  • ಬೆಂಗಳೂರು
  • ಸಿನಿಮಾ
  • ರಾಜ್ಯ
  • ಕ್ರೈಂ ಸುದ್ದಿ
  • ರಾಜಕೀಯ
  • ವೀಡಿಯೊ
  • ಕ್ರೀಡೆ
  • More
    • ಜೋತಿಷ್ಯ
    • ಆರೋಗ್ಯ ಸಲಹೆಗಳು
    • ಅಂತಾರಾಷ್ಟ್ರೀಯ
    • ಉದ್ಯೋಗ
  • About Us

Search here

×

ಕ್ರೀಡೆ

ಅಣಕವಾಡುವ ವಿಡಿಯೋ ವೈರಲ್ ಈ ಪಂದ್ಯದಲ್ಲಿ ಅವರು ಬೌಲಿಂಗ್ ಮಾಡುತ್ತಿದ್ದ ವೇಳೆ ಕ್ರೀಡಾಂಗಣದ ಗ್ಯಾಲರಿಯಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಅಮೆರಿಕ ತಂಡದ ಅಭಿಮಾನಿಗಳು ಅವರ ಬೌಲಿಂಗ್ ಶೈಲಿಯನ್ನು ಅಣಕವಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಅವರ ಬೌಲಿಂಗ್ ಶೈಲಿಯ ಬಗ್ಗೆ ಅನೇಕ ಅನುಮಾನ ವ್ಯಕ್ತವಾಗಿದ್ದು, ಚಕಿಂಗ್ ಎಂಬ ಆರೋಪ ಕೇಳಿ ಬಂದಿದೆ. ಸಾಮಾಜಿಕ ಜಾಲತಾಣದಲ್ಲೂ ಈ ಬಗ್ಗೆ ಅನೇಕ ಚರ್ಚೆಗಳು ನಡೆದಿವೆ. ಅವರು ಉದ್ದೇಶಪೂರ್ವಕವಾಗಿ ಚೆಂಡನ್ನು ಎಸೆಯುತ್ತಿದ್ದು ಐಸಿಸಿಯು ಅವರನ್ನು ನಿಷೇಧಿಸಬೇಕು ಎಂಬ ಅಭಿಪ್ರಾಯ ಕೇಳಿ ಬಂದಿದೆ. ಉಸ್ಮಾನ್ ತಾರಿಕ್ ಅವರ ಬೌಲಿಂಗ್ ಸಾಮರ್ಥ್ಯವನ್ನು ಈ ಹಿಂದೆ ಪಾಕಿಸ್ತಾನ ಕ್ರಿಕೆಟ್ ನ ಬೌಲಿಂಗ್ ದಂತಕತೆ ವಸೀಂ ಅಕ್ರಂ ಅವರು ಹೊಗಳಿದ್ದರು. ಆದರೆ ಇದೀಗ ಆಸ್ಟ್ರೇಲಿಯಾ ಆಲ್ರೌಂಡರ್ ಕ್ಯಾಮರೂನ್ ಗ್ರೀನ್, ಇಂಗ್ಲೆಂಡ್ ಬ್ಯಾಟರ್ ಟಾಮ್ ಬ್ಯಾಂಟನ್ ಮತ್ತು ಭಾರತದ ಮಾಜಿ ಕ್ರಿಕೆಟರ್ ಶ್ರೀವತ್ಸ ಗೋಸ್ವಾಮಿ ಟೀಕಿಸಿದ್ದಾರೆ. ಅವರ ಬೌಲಿಂಗ್ ಶೈಲಿ ಬಗ್ಗೆ ಅನುಮಾನ ವ್ಯಕ್ತವಾಗಿರುವುದು ಇದೇ ಮೊದಲೇನಲ್ಲ. 42ರ ಹರೆಯದ ಬೌಲರ್ ಚೆಂಡೆಸೆಯುವ ಶೈಲಿ ವಿಚಾರವಾಗಿ ಪಾಕಿಸ್ತಾನ ಸೂಪರ್ ಲೀಗ್(PSL) ನಲ್ಲೂ ಆರೋಪ ಕೇಳಿ ಬಂದಿತ್ತು. ಆದರೆ ಅವರ ಬೌಲಿಂಗ್ ಸಮರ್ಪಕವಾಗಿದೆ ಎಂಬ ತೀರ್ಪನ್ನು ಅಲ್ಲಿನ ತಜ್ಞರು ಕೊಟ್ಟದ್ದರಿಂದ ಅವರು ಮುಂದುವರಿಯುವಂತಾಯಿತು.
Explained- ಇಂಡೋ ಪಾಕ್ ಪಂದ್ಯಕ್ಕೂ ಮುನ್ನ ಹೊಸ ವಿವಾದ; ನಿಂತು ಚೆಂಡೆಸೆವ ಉಸ್ಮಾನ್ ತಾರಿಕ್ ಬೌಲಿಂಗ್ ಶೈಲಿ ಸಮರ್ಪಕವಾಗಿದ್ಯಾ?
ಭಾರತಕ್ಕೆ ಇಂದು ನಮೀಬಿಯಾ ಎದುರಾಳಿ; ಪಂದ್ಯ ಎಷ್ಟು ಗಂಟೆಗೆ ಆರಂಭ?
ಕಳೆದೊಂದು ವರ್ಷದಿಂದ ವಿವಾದ ಕಳೆದ ವರ್ಷ ಬಾರ್ಡರ್ ಗವಾಸ್ಕರ್ ಟ್ರೋಫಿ ಮುಗಿಯುವವರೆಗೂ ಭಾರತ ತಂಡದ ಆಟಗಾರರೊಂದಿಗೆ ಅವರ ಪತ್ನಿಯರು, ಪ್ರೇಯಸಿಯರು ಪ್ರಯಾಣಿಸುತ್ತಿದ್ದುದು ದೊಡ್ಡ ಸಂಗತಿಯಾಗಿರಲಿಲ್ಲ. ಆದರೆ ಯಾವಾಗ ಟೀಂ ಇಂಡಿಯಾ ಆ ಮಹತ್ವದ ಟೂರ್ನಿಯಲ್ಲಿ 4-1 ಅಂತರದಲ್ಲಿ ಪರಾಭವಗೊಂಡು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ರೇಸ್ ನಿಂದ ಹೊರಬಿತ್ತೋ ಆಗ ಈ ವಿಚಾರ ಹೊಗೆಯಾಡಿತು. ಆಟಗಾರರೊಂದಿಗೆ ಅವರ ಕುಟುಂಬ ವರ್ಗವೆಲ್ಲಾ ಪ್ರಯಾಣ ಮಾಡುವುದು, ಅವರೊಂದಿಗೆ ತಂಗುವುದಕ್ಕೆ ವಿರೋಧ ವ್ಯಕ್ತವಾಯಿತು. ಈ ಬಗ್ಗೆ ತಂಡದ ಕೋಚ್ ಆಗಿದ್ದ ಗೌತಮ್ ಗಂಭೀರ್ ಅವರು ಬಿಸಿಸಿಐ ಮುಂದೆ ಪ್ರಸ್ತಾಪಿಸಿದ್ದರು ಎಂದು ಹೇಳಲಾಗಿದೆ. ಜೊತೆಗೆ ತಂಡದಲ್ಲಿ ಸ್ಟಾರ್ ಸಂಸ್ಕೃತಿಯನ್ನು ತಾನು ಇಲ್ಲವಾಗಿಸುವುದಾಗಿ ಅವರು ಹೇಳಿದ್ದರು. ಇದು ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಉದ್ದೇಶಿಸಿ ಹೇಳಿದ್ದರು ಎಂಬುದು ಅರ್ಥವಾಗದಿದ್ದ ಸಂಗತಿಯಲ್ಲ. ಬಳಿಕ ಬಿಸಿಸಿಐಯು ಆಟಗಾರರಿಗೆ ಕಟ್ಟುನಿಟ್ಟಿನ ನಿಮಯಗಳನ್ನು ರೂಪಿಸಿತ್ತು. ಆಟಗಾರರು ತಂಡದೊಂದಿಗೆ ವಾಸಿಸಬೇಕು, ತಂಡಕ್ಕೆ ನಿಗದಿಯಾಗಿರುವ ವಾಹನದಲ್ಲೇ ಕ್ರೀಡಾಂಗಣಕ್ಕೆ ಪ್ರಯಾಣ ಮಾಡಬೇಕು ಎಂಬಿತ್ಯಾದಿ ವಿಷಯಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿತ್ತು. ಅದ್ಭುತ ಲಯದಲ್ಲಿರುವ ಟೀಂ ಇಂಡಿಯಾ ಇದಾದ ಬಳಿಕ ಕಳೆದ ವರ್ಷ ಐಸಿಸಿ ಚಾಂಪಿಯನ್ಸ್ ಟ್ರೋಫಿ ವೇಳೆ ಕೆಲ ದಿನಗಳ ಕಾಲ ಆಟಗಾರರ ಕುಟುಂಬಸ್ಥರಿಗೆ ಜೊತೆಗೆ ಕಳೆಯುವ ಅವಕಾಶ ನೀಡಿತ್ತು. ಇದೀಗ ಮಹತ್ವದ ಟಿ20 ವಿಶ್ವಕಪ್ ವೇಳೆ ಮತ್ತೆ ಈ ಪ್ರಶ್ನೆ ಉದ್ಭವಿಸಿದೆ. ಕಳೆದ ಬಾರಿ ಭಾಗಶಃ ಅನುಮತಿ ನೀಡಿದ್ದ ಮಂಡಳಿ ಈ ಬಾರಿ ಸ್ಪಷ್ಟವಾಗಿ ನಿರಾಕರಿಸಿದೆ. ಹಾಲಿ ಚಾಂಪಿಯನ್ ಭಾರತ ತಂಡ ಭರ್ಜರಿ ಲಯದಲ್ಲಿದ್ದು ಈ ಟಿ20 ವಿಶ್ವಕಪ್ ನಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಗುಂಪು ಹಂತದ ಮೊದಲ ಪಂದ್ಯದಲ್ಲಿ ಭಾರತ ತಂಡ ಅಮೆರಿಕವನ್ನು ಸೋಲಿಸಿದೆ. ಮುಂದಿನ ಪಂದ್ಯವನ್ನು ಫೆಬ್ರವರಿ 12ರಂದು ನಮೀಬಿಯಾ ವಿರುದ್ಧ ಆಡಲಿದೆ. ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯ 15ರಂದು ಕೊಲಂಬೊದಲ್ಲಿ ನಡೆಯಲಿದೆ.
ಟಿ20 ವಿಶ್ವಕಪ್ ವೇಳೆ ಆಟಗಾರರೊಂದಿಗೆ ಇರಬಹುದೇ ಪತ್ನಿಯರು?: ಟೀಂ ಇಂಡಿಯಾ ಮನವಿಗೆ ಬಿಸಿಸಿಐ ಒಪ್ಪಿಗೆ ಯಾಕಿಲ್ಲ?

Posts pagination

previous items 1 2

Trending

ಮಗಳ ಹುಟ್ಟುಹಬ್ಬ ಆಚರಣೆಗೆ ದುಬೈ ಪ್ರವಾಸ: ಬೆಂಗಳೂರಿನ ದಂಪತಿ ಅಬುಧಾಬಿಯಲ್ಲಿ ಲಾಕ್
ಮಗಳ ಹುಟ್ಟುಹಬ್ಬ ಆಚರಣೆಗೆ ದುಬೈ ಪ್ರವಾಸ: ಬೆಂಗಳೂರಿನ ದಂಪತಿ ಅಬುಧಾಬಿಯಲ್ಲಿ ಲಾಕ್
ಇರಾನ್‌ ಪ್ರತೀಕಾರದ ದಾಳಿ: ಅಮೆರಿಕದ 560 ಸೈನಿಕರ ಸಾವು?
ಇರಾನ್‌ ಪ್ರತೀಕಾರದ ದಾಳಿ: ಅಮೆರಿಕದ 560 ಸೈನಿಕರ ಸಾವು?
ಕುವೈತ್​​ನಲ್ಲಿ ಅಮೆರಿಕಾದ ಎಫ್‌-15 ಯುದ್ಧ ವಿಮಾನ ಪತನ: ಪೈಲಟ್‌ ಅಪಾಯದಿಂದ ಪಾರು
ಕುವೈತ್​​ನಲ್ಲಿ ಅಮೆರಿಕಾದ ಎಫ್‌-15 ಯುದ್ಧ ವಿಮಾನ ಪತನ: ಪೈಲಟ್‌ ಅಪಾಯದಿಂದ ಪಾರು
ಭಾರತೀಯ ಷೇರುಪೇಟೆ ಕುಸಿತ: ಒಂದೂವರೆ ಗಂಟೆಯಲ್ಲಿ 8 ಲಕ್ಷ ಕೋಟಿ ರೂ. ನಷ್ಟ
ಭಾರತೀಯ ಷೇರುಪೇಟೆ ಕುಸಿತ: ಒಂದೂವರೆ ಗಂಟೆಯಲ್ಲಿ 8 ಲಕ್ಷ ಕೋಟಿ ರೂ. ನಷ್ಟ
ನಟಿ ರಶ್ಮಿಕಾ ಮಂದಣ್ಣ- ನಟ ವಿಜಯ ದೇವರಕೊಂಡ ಮದುವೆ ರೆಸಿಪ್ಷನ್‌ಗೆ ಆಹ್ವಾನಿತರಿಗೆ ಮಾತ್ರ ಪ್ರವೇಶ: ಜನರ ನೂಕುನುಗ್ಗಲು ತಪ್ಪಿಸಲು ಈ ಕ್ರಮ
ನಟಿ ರಶ್ಮಿಕಾ ಮಂದಣ್ಣ- ನಟ ವಿಜಯ ದೇವರಕೊಂಡ ರಿಸೆಪ್ಷನ್‌ಗೆ ಆಹ್ವಾನಿತರಿಗೆ ಮಾತ್ರ ಪ್ರವೇಶ: ಜನರ ನೂಕುನುಗ್ಗಲು ತಪ್ಪಿಸಲು ಈ ಕ್ರಮ
ಇರಾನ್‌- ಇಸ್ರೇಲ್, ಅಮೆರಿಕಾ ಯುದ್ಧ: ಭಾರತದಲ್ಲಿ ಮೋದಿ ಅಧ್ಯಕ್ಷತೆಯಲ್ಲಿ ಭದ್ರತಾ ಸಭೆ
ಇರಾನ್‌- ಇಸ್ರೇಲ್, ಅಮೆರಿಕಾ ಯುದ್ಧ: ಭಾರತದಲ್ಲಿ ಮೋದಿ ಅಧ್ಯಕ್ಷತೆಯಲ್ಲಿ ಭದ್ರತಾ ಸಭೆ
© 2026 NCIB TIMES MEDIA 24/7 Private Limited. Made with , Designed by flixoye | About | privacy | terms
  • Facebook
  • Instagram
  • X
  • YouTube