ರಕ್ತ ವರ್ಣದ ಚಂದ್ರಗ್ರಹಣಕ್ಕೆ ಕೌಂಟ್​​ಡೌನ್: ಎಷ್ಟೊತ್ತಿಗೆ ಗ್ರಹಣ ಸ್ಪರ್ಶ, ಎಷ್ಟೊತ್ತಿಗೆ ಮೋಕ್ಷ?

ರಕ್ತ ವರ್ಣದ ಚಂದ್ರಗ್ರಹಣಕ್ಕೆ ಕೌಂಟ್​​ಡೌನ್: ಎಷ್ಟೊತ್ತಿಗೆ ಗ್ರಹಣ ಸ್ಪರ್ಶ, ಮೋಕ್ಷ ಎಷ್ಟೊತ್ತಿಗೆ?

ಇಂದು ರಕ್ತವರ್ಣದ ಚಂದ್ರಗ್ರಹಣ ಸಂಭವಿಸಿದೆ. ಗ್ರಹಣದ ಬಗ್ಗೆ ಜನರಿಗೆ ಭಯವೂ ಇದೆ. ಕೆಲವರು ವೈಜ್ಞಾನಿಕವಾಗಿ ಗ್ರಹಣವನ್ನು ವಿಶ್ಲೇಷಣೆ ಮಾಡುತ್ತಾರೆ. ಇನ್ನೂ ಕೆಲವರು ಧಾರ್ಮಿಕ ದೃಷ್ಟಿಕೋನದಿಂದ ಗ್ರಹಣವನ್ನು ನೋಡುತ್ತಾರೆ. ಮಾರ್ಚ್​​ 3.. ಮಂಗಳವಾರ , ಅಂದರೇ, ಇಂದು  ಪಾಲ್ಗುಣ ಶುಕ್ಲ ಹುಣ್ಣಿಮೆ ದಿನ.. ವರ್ಷದ ಮೊದಲ ಕೇತುಗ್ರಸ್ಥ ಚಂದ್ರಗ್ರಹಣ.. ಆಕಾಶದಲ್ಲಿ ಚಮತ್ಕಾರ ಸೃಷ್ಠಿಸಲಿದೆ.. ಬಿಳಿ ಬಣ್ಣದಲ್ಲಿ  ಕಂಗೊಳಿಸ್ತಾ, ಬೆಳದಿಂಗಳ ಬೆಳಕು ಕೊಡ್ತಿದ್ದ ಚಂದಿರ ಇಂದು ರಣರಣ ಕೆಂಪೇರಿ ರಕ್ತ ವರ್ಣಕ್ಕೆ ತಿರುಗಿ ಅಗಸದಲ್ಲಿ ಮಾಯೆ ಸೃಷ್ಠಿಸಲಿದೆ.. ಇಂದು ವರ್ಷದ ಮೊದಲ ಕೇತುಗ್ರಸ್ಥ ಚಂದ್ರಗ್ರಹಣ ಪ್ರಪಂಚದಾದ್ಯಂತ ಆಕಾಶದಲ್ಲಿ ಚಮತ್ಕಾರ ಸೃಷ್ಠಿಸಲಿದೆ..

ಮಧ್ಯಾಹ್ನ 3.18ರಿಂದ ಸಂಜೆ 6.48ರವರೆಗೂ ಸಂಪೂರ್ಣ ಚಂದ್ರ ಗ್ರಹಣ ಸಂಭವಿಸಲಿದ್ದು, ಈ ದಿನ ಪೂರ್ಣ ಚಂದ್ರನು ಕೆಂಪು ವರ್ಣದಲ್ಲಿ ಕಾಣಿಸಲಿದ್ದಾನೆ.. ಆದ್ರೆ ಭಾರತದಲ್ಲಿ ಗ್ರಹಣ ಸ್ಪರ್ಶ ಕಾಲದಲ್ಲಿ ಚಂದ್ರ ಗೋಚರ ಇರುವುದಿಲ್ಲ. ಸಂಜೆ 6.22ರಿಂದ 6.47ರವರೆಗೆ ಗ್ರಹಣ ಗೋಚರಿಸಲಿದೆ. ಒಟ್ಟು 25 ನಿಮಿಷಗಳ ಕಾಲ ಗೋಚರಿಸಲಿರೋ ಚಂದ್ರ ಅದ್ಭುತ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾನೆ. ಇಂದು ಸಂಭವಿಸಲಿರೋ ಕೇತುಗ್ರಸ್ತ ಚಂದ್ರಗ್ರಹಣದ ಹಿನ್ನೆಲೆ ಎಲ್ಲರ ಗಮನ ಈಗ ದೇವಸ್ಥಾನಗಳತ್ತ ನೆಟ್ಟಿದೆ. ಗ್ರಹಣದ ಸೂತಕದ ಕಾರಣದಿಂದಾಗಿ ಕರ್ನಾಟಕದ ಕಾಶಿಯಿಂದ ಹಿಡಿದು ತಿರುಪತಿಯವರೆಗೆ ಬಹುತೇಕ ಪ್ರಮುಖ ದೇವಸ್ಥಾನಗಳ ಪೂಜೆ ಮತ್ತು ದರ್ಶನದ ಅವಧಿಯಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ.

ರಾಜ್ಯದ ಹಲವು ದೇಗುಲ ಬೆಳಗ್ಗೆ 9 ಗಂಟೆಗೆ  ಬಂದ್​ ಆಗಲಿದ್ದು, ಸಂಜೆ 7.45ರ ಬಳಿಕವೇ ದೇಗುಲ ಓಪನ್​ ಆಗಲಿವೆ.. ಈ ಹೊತ್ತಿಗೆ ಬಹುತೇಕ ಕ್ಷೇತ್ರಗಳಲ್ಲಿ ಯಾವುದೇ ಪೂಜೆ ಮತ್ತು ದರ್ಶನಕ್ಕೆ ಅವಕಾಶ ಇರೋದಿಲ್ಲ.. ಬೆಂಗಳೂರಿನ ಕಾಡು ಮಲ್ಲಿಕಾರ್ಜುನ ದೇವಾಲಯದಲ್ಲಿ ಚಂದ್ರಗ್ರಹಣ ಹಿನ್ನೆಲೆಯಲ್ಲಿ ವಿಶೇಷ ಪೂಜಾ ಕ್ರಮಗಳನ್ನು ರೂಪಿಸಲಾಗಿದೆ.. ವಿಜಯನಗರ ಜಿಲ್ಲೆಯಲ್ಲಿ ಹಂಪಿ ವಿರೂಪಾಕ್ಷೇಶ್ವರ ದೇಗುಲ ಸೇರಿದಂತೆ ಬಹುತೇಕ ದೇವಾಲಯಗಳ ಗರ್ಭಗುಡಿಗಳನ್ನು ಬಂದ್ ಮಾಡಲಾಗುತ್ತದೆ. ಉಡುಪಿಯ ಶ್ರೀ ಕೃಷ್ಣಮಠದಲ್ಲಿ ಗ್ರಹಣ ಕಾಲದಲ್ಲೂ ಮಠ ತೆರೆದಿರುತ್ತೆ.. ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಐತಿಹಾಸಿಕ ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ಗರ್ಭಗುಡಿ ಬಂದ್ ಮಾಡಲಾಗುತ್ತೆ.. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಗ್ರಹಣ ವೇಳೆಯಲ್ಲಿಯೂ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಮೈಸೂರು ಚಾಮುಂಡೇಶ್ವರಿ ದೇವಾಲಯ ದಲ್ಲಿ ಚಂದ್ರಗ್ರಹಣ ಹಿನ್ನೆಲೆ ಮಧ್ಯಾಹ್ನ 2 ಗಂಟೆಗೆ ದೇವಾಲಯ ಬಂದ್ ಮಾಡಲಾಗುತ್ತದೆ. ಕೊಲ್ಲೋರು ಶ್ರೀ ಮೂಕಾಂಬಿಕಾ ದೇವಿಗೆ ಗ್ರಹಣ ಕಾಲದಲ್ಲಿ ವಿಶೇಷ ಪೂಜೆಗಳು ನಡೆಯುತ್ತೆ. ಜೊತೆಗೆ ವಿವಿಧ ರಾಶಿಯವರಿಗೂ ಎಫೆಕ್ಟ್‌ ತಟ್ಟಲಿದೆ ಅಂತ ಜೋತಿಷಿಗಳು ಹೇಳ್ತಿದ್ದಾರೆ.. ಸಿಂಹ ರಾಶಿಯಲ್ಲಿ ಗ್ರಹಣ ಸಂಭವಿಸುತ್ತಿದ್ದು, ಇದಕ್ಕನುಗುಣವಾಗಿ ಕೆಲ ರಾಶಿಯವರು ಹೆಚ್ಚಿನ ಜಾಗ್ರತೆ ವಹಿಸಬೇಕು ಅಂತಾನೂ ಸಲಹೆ ನೀಡ್ತಾರೆ.

Be the first to comment

Leave a Reply

Your email address will not be published. Required fields are marked *

ad image