ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ರಕ್ತಸಿಕ್ತ ಕೌಟುಂಬಿಕ ಕಲಹ ಬಯಲಾಗಿದ್ದು, ಸ್ವಂತ ಮಗನೇ ತಂದೆ-ತಾಯಿಯನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದಾನೆ. ನಗರದ HAL ಪೊಲೀಸ್ ಠಾಣಾ ವ್ಯಾಪ್ತಿಯ ವಿಜ್ಞಾನ ನಗರದ ಆದರ್ಶ ವಿಸ್ತಾ ಅಪಾರ್ಟ್‌ಮೆಂಟ್ ಈ ಘೋರ ಕೃತ್ಯಕ್ಕೆ ಸಾಕ್ಷಿಯಾಗಿದೆ. 60 ವರ್ಷದ ನಿವೃತ್ತ ನೇವಿ ಕ್ಯಾಪ್ಟನ್ ನವೀನ್ ಚಂದ್ರ ಭಟ್ ಹಾಗೂ ಅವರ ಪತ್ನಿ, ಹೆಸರಾಂತ ದಂತವೈದ್ಯೆ ಡಾ. ಶ್ಯಾಮಲಾ ಭಟ್ ಕೊಲೆಯಾದ ದಂಪತಿ ಆರೋಪಿ ಮಗ ರೋಹನ್ ಭಟ್, ಕೌಟುಂಬಿಕ ವಿಚಾರವಾಗಿ ತಂದೆ-ತಾಯಿಯ ಜೊತೆ ಜಗಳ ತೆಗೆದು ಚಾಕುವಿನಿಂದ ಮನಸೋಇಚ್ಛೆ ಇರಿದು ಕ್ರೌರ್ಯ ಮೆರೆದಿದ್ದಾನೆ. ಸದ್ಯ ಹಂತಕ ರೋಹನ್ ಭಟ್ನ HAL ಪೊಲೀಸರು ಬಂಧಿಸಿದ್ದು, ವಿಚಾರಣೆಗೊಳಪಡಿಸಿದ್ದಾರೆ.

ತಂದೆ ಚಂದ್ರ ಭಟ್ ಹಾಗೂ ತಾಯಿ ಡಾ.ಶ್ಯಾಮಲಾ ಭಟ್ ಜೊತೆ ಪುತ್ರ ರೋಹನ್ ಭಟ್ ಬೆಂಗಳೂರಿನ ವಿಜ್ಞಾನ ನಗರದ ಆದರ್ಶ ವಿಸ್ತಾ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದರು. ಆದ್ರೆ, ಕೌಟುಂಬಿಕ ವಿಚಾರಕ್ಕೆ ಗಲಾಟೆ ನಡೆದಿದೆ ಎನ್ನಲಾಗಿದ್ದು, ಕೋಪದಲ್ಲಿ ತಂದೆ ತಾಯಿಗೆ ಚಾಕುವಿನಿಂದ ಚುಚ್ಚಿದ್ದಾನೆ. ಬಳಿಕ ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ HAL ಠಾಣೆ ಪೊಲೀಸರು ಆರೋಪಿ ಪುತ್ರ ರಾಕೇಶ್ ಭಟ್‌ನನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ. ವಿಚಾರಣೆಯಿಂದಲೇ ದಂಪತಿ ಹತ್ಯೆಗೆ ಕಾರಣ ಏನು ಎನ್ನುವುದು ತಿಳಿದು ಬರಲಿದೆ.






Be the first to comment
Leave a Reply