Explained- ಇಂಡೋ ಪಾಕ್ ಪಂದ್ಯಕ್ಕೂ ಮುನ್ನ ಹೊಸ ವಿವಾದ; ನಿಂತು ಚೆಂಡೆಸೆವ ಉಸ್ಮಾನ್ ತಾರಿಕ್ ಬೌಲಿಂಗ್ ಶೈಲಿ ಸಮರ್ಪಕವಾಗಿದ್ಯಾ?

Usman Tariq Controversial Bowling Style- ಐಸಿಸಿ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದ ವೇಳೆಯಲ್ಲೇ ಉಸ್ಮಾನ್ ತಾರಿಕ್ ಅವರ ಬೌಲಿಂಗ್ ಶೈಲಿಯನ್ನು ಆಸ್ಟ್ರೇಲಿಯಾದ ಕ್ಯಾಮರೂನ್ ಗ್ರೀನ್ ಅಣಕವಾಡಿದ್ದು ಸುದ್ದಿಯಾಗಿತ್ತು. ಅಮೆರಿಕ ವಿರುದ್ಧ ಪಂದ್ಯದಲ್ಲಿ ಅವರು 3 ವಿಕೆಟ್ ಪಡೆದ ಬಳಿಕವಂತೂ ಅವರು ಚಕಿಂಗ ಮಾಡುತ್ತಿದ್ದಾರೆ ಎಂಬ ಆರೋಪ ಬಲವಾಗಿದೆ. ಅದರಲ್ಲೂ ನಿಂತು ಚೆಂಡೆಸೆವ ಅವರ ಬೌಲಿಂಗ್ ಶೈಲಿ ತೀವ್ರ ವಿವಾದಕ್ಕೀಡಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಭಾರತದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಅಭಿಪ್ರಾಯ ಬಹಳ ಮಹತ್ವ ಪಡೆದಿದೆ.

ಹೈಲೈಟ್ಸ್‌:

  • ಪಾಕಿಸ್ತಾನದ ಸ್ಪಿನ್ ಬೌಲರ್ ಉಸ್ಮಾನ್ ತಾರಿಕ್ ಬಗ್ಗೆ ಚಕಿಂಗ್ ಆರೋಪ
  • ಅಮೆರಿಕ ವಿರುದ್ಧ ಪಂದ್ಯದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆ
  • ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ವ್ಯಕ್ತಪಡಿಸಿದ್ದಾರೆ ಮಹತ್ವದ ಅಭಿಪ್ರಾಯ

    ಭಾರತ ಮತ್ತು ಪಾಕಿಸ್ತಾನ ತಂಡಗಳೆರಡೂ ಫೆಬ್ರವರಿ 15ರಂದು ನಡೆಯಲಿರುವ ಹೈವೋಲ್ಟೇಜ್ ಪಂದ್ಯಕ್ಕೆ ಅಣಿಯಾಗುತ್ತಿರುವ ಹೊತ್ತಲ್ಲೇ ಹೊಸ ವಿವಾದವೊಂದು ಮೈದಳೆದು ನಿಂತಿದೆ. ಪಾಕಿಸ್ತಾನದ ಸ್ಪಿನ್ ಬೌಲರ್ ಉಸ್ಮಾನ್ ತಾರಿಕ್ ಅವರ ಬೌಲಿಂಗ್ ಶೈಲಿಯ ಬಗ್ಗೆ ತೀವ್ರ ಪ್ರಶ್ನೆಗಳೆದ್ದಿವೆ. ಅವರು ಬೌಲಿಂಗ್ ಶೈಲಿ ಸಮರ್ಪಕವಾಗಿಲ್ಲ, ಥ್ರೋದಂತೆ ಕಂಡುಬರುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಅದಕ್ಕಿಂತಲೂ ಮುಖ್ಯವಾಗಿ ಅವರು ಬೌಲಿಂಗ್ ವೇಳೆ ಒಂದು ಕ್ಷಣ ನಿಂತು (Pauce) ಚೆಂಡೆಸೆಯುತ್ತಿದ್ದಾರೆ ಎಂಬುದೇ ಚರ್ಚೆಗೆ ಬಹುದೊಡ್ಡ ಕಾರಣವಾಗಿದೆ. ಈ ಎಲ್ಲಾ ವಿವಾದಗಳ ನಡುವೆ ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಉಸ್ಮಾನ್ ತಾರಿಕ್ ಅವರ ಬೆಂಬಲಕ್ಕೆ ನಿಂತಿರುವುದು ಅಚ್ಚರಿಯನ್ನು ಉಂಟು ಮಾಡಿದೆ.

    ಭಾರತದೊಂದಿಗೆ ಎ ಬಣದಲ್ಲಿರವ ಪಾಕಿಸ್ತಾನ ತಂಡ ಈವರೆಗೆ ಆಡಿರುವ ಎರಡು ಪಂದ್ಯಗಳಲ್ಲಿ ಎರಡನ್ನೂ ಗೆದ್ದು ನಾಲ್ಕು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ನೆದರ್ಲೆಂಡ್ ವಿರುದ್ಧ ತಿಣುಕಾಡಿ ಗೆದ್ದಿದ್ದ ಪಾಕ್, ಅಮೆರಿಕ ವಿರುದ್ಧ 32 ರನ್ ಗಳ ಭರ್ಜರಿ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಉಸ್ಮಾನ್ ತಾರೀಕ್ ಅವರು 27 ರನ್ ಗೆ 3 ವಿಕೆಟ್ ಪಡೆದು ಗೆಲುವಿನ ರೂವಾರಿಯಾಗಿದ್ದರು.

    ಅಣಕವಾಡುವ ವಿಡಿಯೋ ವೈರಲ್

    ಈ ಪಂದ್ಯದಲ್ಲಿ ಅವರು ಬೌಲಿಂಗ್ ಮಾಡುತ್ತಿದ್ದ ವೇಳೆ ಕ್ರೀಡಾಂಗಣದ ಗ್ಯಾಲರಿಯಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಅಮೆರಿಕ ತಂಡದ ಅಭಿಮಾನಿಗಳು ಅವರ ಬೌಲಿಂಗ್ ಶೈಲಿಯನ್ನು ಅಣಕವಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಅವರ ಬೌಲಿಂಗ್ ಶೈಲಿಯ ಬಗ್ಗೆ ಅನೇಕ ಅನುಮಾನ ವ್ಯಕ್ತವಾಗಿದ್ದು, ಚಕಿಂಗ್ ಎಂಬ ಆರೋಪ ಕೇಳಿ ಬಂದಿದೆ. ಸಾಮಾಜಿಕ ಜಾಲತಾಣದಲ್ಲೂ ಈ ಬಗ್ಗೆ ಅನೇಕ ಚರ್ಚೆಗಳು ನಡೆದಿವೆ. ಅವರು ಉದ್ದೇಶಪೂರ್ವಕವಾಗಿ ಚೆಂಡನ್ನು ಎಸೆಯುತ್ತಿದ್ದು ಐಸಿಸಿಯು ಅವರನ್ನು ನಿಷೇಧಿಸಬೇಕು ಎಂಬ ಅಭಿಪ್ರಾಯ ಕೇಳಿ ಬಂದಿದೆ. ಉಸ್ಮಾನ್ ತಾರಿಕ್ ಅವರ ಬೌಲಿಂಗ್ ಸಾಮರ್ಥ್ಯವನ್ನು ಈ ಹಿಂದೆ ಪಾಕಿಸ್ತಾನ ಕ್ರಿಕೆಟ್ ನ ಬೌಲಿಂಗ್ ದಂತಕತೆ ವಸೀಂ ಅಕ್ರಂ ಅವರು ಹೊಗಳಿದ್ದರು. ಆದರೆ ಇದೀಗ ಆಸ್ಟ್ರೇಲಿಯಾ ಆಲ್ರೌಂಡರ್ ಕ್ಯಾಮರೂನ್ ಗ್ರೀನ್, ಇಂಗ್ಲೆಂಡ್ ಬ್ಯಾಟರ್ ಟಾಮ್ ಬ್ಯಾಂಟನ್ ಮತ್ತು ಭಾರತದ ಮಾಜಿ ಕ್ರಿಕೆಟರ್ ಶ್ರೀವತ್ಸ ಗೋಸ್ವಾಮಿ ಟೀಕಿಸಿದ್ದಾರೆ.

    ಅವರ ಬೌಲಿಂಗ್ ಶೈಲಿ ಬಗ್ಗೆ ಅನುಮಾನ ವ್ಯಕ್ತವಾಗಿರುವುದು ಇದೇ ಮೊದಲೇನಲ್ಲ. 42ರ ಹರೆಯದ ಬೌಲರ್ ಚೆಂಡೆಸೆಯುವ ಶೈಲಿ ವಿಚಾರವಾಗಿ ಪಾಕಿಸ್ತಾನ ಸೂಪರ್ ಲೀಗ್(PSL) ನಲ್ಲೂ ಆರೋಪ ಕೇಳಿ ಬಂದಿತ್ತು. ಆದರೆ ಅವರ ಬೌಲಿಂಗ್ ಸಮರ್ಪಕವಾಗಿದೆ ಎಂಬ ತೀರ್ಪನ್ನು ಅಲ್ಲಿನ ತಜ್ಞರು ಕೊಟ್ಟದ್ದರಿಂದ ಅವರು ಮುಂದುವರಿಯುವಂತಾಯಿತು.ಅಣಕವಾಡುವ ವಿಡಿಯೋ ವೈರಲ್
ಈ ಪಂದ್ಯದಲ್ಲಿ ಅವರು ಬೌಲಿಂಗ್ ಮಾಡುತ್ತಿದ್ದ ವೇಳೆ ಕ್ರೀಡಾಂಗಣದ ಗ್ಯಾಲರಿಯಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಅಮೆರಿಕ ತಂಡದ ಅಭಿಮಾನಿಗಳು ಅವರ ಬೌಲಿಂಗ್ ಶೈಲಿಯನ್ನು ಅಣಕವಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಅವರ ಬೌಲಿಂಗ್ ಶೈಲಿಯ ಬಗ್ಗೆ ಅನೇಕ ಅನುಮಾನ ವ್ಯಕ್ತವಾಗಿದ್ದು, ಚಕಿಂಗ್ ಎಂಬ ಆರೋಪ ಕೇಳಿ ಬಂದಿದೆ. ಸಾಮಾಜಿಕ ಜಾಲತಾಣದಲ್ಲೂ ಈ ಬಗ್ಗೆ ಅನೇಕ ಚರ್ಚೆಗಳು ನಡೆದಿವೆ. ಅವರು ಉದ್ದೇಶಪೂರ್ವಕವಾಗಿ ಚೆಂಡನ್ನು ಎಸೆಯುತ್ತಿದ್ದು ಐಸಿಸಿಯು ಅವರನ್ನು ನಿಷೇಧಿಸಬೇಕು ಎಂಬ ಅಭಿಪ್ರಾಯ ಕೇಳಿ ಬಂದಿದೆ. ಉಸ್ಮಾನ್ ತಾರಿಕ್ ಅವರ ಬೌಲಿಂಗ್ ಸಾಮರ್ಥ್ಯವನ್ನು ಈ ಹಿಂದೆ ಪಾಕಿಸ್ತಾನ ಕ್ರಿಕೆಟ್ ನ ಬೌಲಿಂಗ್ ದಂತಕತೆ ವಸೀಂ ಅಕ್ರಂ ಅವರು ಹೊಗಳಿದ್ದರು. ಆದರೆ ಇದೀಗ ಆಸ್ಟ್ರೇಲಿಯಾ ಆಲ್ರೌಂಡರ್ ಕ್ಯಾಮರೂನ್ ಗ್ರೀನ್, ಇಂಗ್ಲೆಂಡ್ ಬ್ಯಾಟರ್ ಟಾಮ್ ಬ್ಯಾಂಟನ್ ಮತ್ತು ಭಾರತದ ಮಾಜಿ ಕ್ರಿಕೆಟರ್ ಶ್ರೀವತ್ಸ ಗೋಸ್ವಾಮಿ ಟೀಕಿಸಿದ್ದಾರೆ.

ಅವರ ಬೌಲಿಂಗ್ ಶೈಲಿ ಬಗ್ಗೆ ಅನುಮಾನ ವ್ಯಕ್ತವಾಗಿರುವುದು ಇದೇ ಮೊದಲೇನಲ್ಲ. 42ರ ಹರೆಯದ ಬೌಲರ್ ಚೆಂಡೆಸೆಯುವ ಶೈಲಿ ವಿಚಾರವಾಗಿ ಪಾಕಿಸ್ತಾನ ಸೂಪರ್ ಲೀಗ್(PSL) ನಲ್ಲೂ ಆರೋಪ ಕೇಳಿ ಬಂದಿತ್ತು. ಆದರೆ ಅವರ ಬೌಲಿಂಗ್ ಸಮರ್ಪಕವಾಗಿದೆ ಎಂಬ ತೀರ್ಪನ್ನು ಅಲ್ಲಿನ ತಜ್ಞರು ಕೊಟ್ಟದ್ದರಿಂದ ಅವರು ಮುಂದುವರಿಯುವಂತಾಯಿತು.

Be the first to comment

Leave a Reply

Your email address will not be published. Required fields are marked *

ad image