ಐಶೂ, ಶಶಿ ಮತ್ತೆ ಕಮಾಲ್.. ರಿಯಲ್​​ನಲ್ಲೂ ಒಂದಾಗಲಿ ಎಂದು ಹಾರೈಸಿದ ಫ್ಯಾನ್ಸ್​..!

ಐಶೂ ಶಶಿ ಮತ್ತೆ ಕಮಾಲ್.. ರಿಯಲ್​​ನಲ್ಲೂ ಒಂದಾಗಲಿ ಎಂದು ಹಾರೈಸಿದ ಫ್ಯಾನ್ಸ್​..!

ಬಿಗ್‌ಬಾಸ್‌ ಮನೆ ನೇಮ್​ ಫೇಮ್​ ಜೊತೆಗೆ ಒಂದೊಳ್ಳೆ ಫ್ರೆಂಡ್‌ಷಿಪ್​ ಅನ್ನ ಕ್ರಿಯೇಟ್ ಮಾಡಿಕೊಡುತ್ತೆ. ಕೆಲವರು ಫ್ರೆಂಡ್‌ಷಿಪ್​ನ್ನ ಕಂಟ್ಯೂನ್​ ಮಾಡೊದಿಲ್ಲ. ಇನ್ನು ಕೆಲವರು ಫ್ರೆಂಡ್‌ಷಿಪ್​ನ್ನ ಮುಂದುವರೆಸ್ತಾರೆ. ಅದಕ್ಕೆ ಬೆಸ್ಟ್​ ಎಕ್ಸಾಂಪಲ್​ ಅಂದ್ರೆ ಶಿಶಿರ್ ಮತ್ತು​ ಐಶ್ವರ್ಯ. ಬಿಗ್‌ಬಾಸ್‌ ಮನೆ ನೇಮ್​ ಫೇಮ್​ ಜೊತೆಗೆ ಒಂದೊಳ್ಳೆ ಫ್ರೆಂಡ್‌ಷಿಪ್​ ಅನ್ನ ಕ್ರಿಯೇಟ್ ಮಾಡಿಕೊಡುತ್ತೆ. ಕೆಲವರು ಫ್ರೆಂಡ್‌ಷಿಪ್​ನ್ನ ಕಂಟ್ಯೂನ್​ ಮಾಡೊದಿಲ್ಲ. ಇನ್ನು ಕೆಲವರು ಫ್ರೆಂಡ್‌ಷಿಪ್​ನ್ನ  ಮುಂದುವರೆಸ್ತಾರೆ. ಅದಕ್ಕೆ ಬೆಸ್ಟ್​ ಎಕ್ಸಾಂಪಲ್​ ಅಂದ್ರೆ ಶಿಶಿರ್ ಮತ್ತು​ ಐಶ್ವರ್ಯ. ಈ ಜೋಡಿ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಸಖತ್ತಾಗಿ ರೀಲ್ಸ್​ ಮಾಡುವ ಮೂಲಕ ವೀಕ್ಷಕರನ್ನ ರಂಜಿಸ್ತಿದ್ದಾರೆ.

ಐಶೂ ಶಶಿ ಮತ್ತೆ ಕಮಾಲ್.. ರಿಯಲ್​​ನಲ್ಲೂ ಒಂದಾಗಲಿ ಎಂದು ಹಾರೈಸಿದ ಫ್ಯಾನ್ಸ್​..!

ಬಿಗ್‌ಬಾಸ್‌ ಮನೆಯಲ್ಲಿ ಲವ್‌, ಫ್ರೆಂಡ್‌ಶಿಪ್, ಆಗೋದು ಸಹಜ.. ಹಾಗೇ ಅಲ್ಲಿಂದ ಹೊರ ಬಂದಮೇಲೆ ನಾನ್ಯಾರೋ ನೀನ್ಯಾರೋ ಎಂದುಕೊಳ್ಳುವುದೆಲ್ಲ ಸರ್ವೇ ಸಾಮಾನ್ಯ.. ಆದ್ರೆ ಕೆಲವರು ಮಾತ್ರ ಬಿಗ್‌ ಬಾಸ್​ನಿಂದ ಹೊರ ಬಂದ ಮೇಲೂ ಅದೇ ರೀತಿ ಫ್ರೆಂಡ್‌ಶಿಪ್​ನ್ನ ಕಂಟ್ಯೂನ್​ ಮಾಡ್ತಾರೆ. ಇದೀಗ ಐಶ್ವರ್ಯ ಸಿಂಧೋಗಿ ಮತ್ತು ಶಿಶಿರ್‌ ಶಾಸ್ತ್ರಿ ಕೂಡ ಅದೇ ರೀತಿ ಫ್ರೆಂಡ್‌ಷಿಪ್‌ ಉಳಿಸಿಕೊಂಡಿದ್ದಾರೆ. ನಟ ಶಿಶಿರ್‌ ಶಾಸ್ತ್ರೀ ಮತ್ತು  ಐಶ್ವರ್ಯಾ ಸಿಂಧೋಗಿ ಅವರು  ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಶೋನಲ್ಲಿ ಭಾಗವಹಿಸಿದ್ದರು. ಆ ವೇಳೆ ಇವರಿಬ್ಬರ ಮಧ್ಯೆ ಸ್ನೇಹ ಹುಟ್ಟಿಕೊಂಡಿತ್ತು. ಈ ಫ್ರೆಂಡ್​ಶಿಪ್​ನ್ನ ವೀಕ್ಷಕರು ಮೆಚ್ಚಿಕೊಂಡಿದ್ದರು. ಸಾಮನ್ಯವಾಗಿ ಜನರನ್ನ ಬೇಗ ರೀಚ್​ ಆಗೋಕೆ ಇರುವ ಒಂದೊಳ್ಳೆ ಸ್ಟ್ರಾಂಗ್​ ಫ್ಲ್ಯಾಟ್​ ಫಾರ್ಮ್ ಅಂದ್ರೆ ಅದು ಇನ್​ಸ್ಟಾಗ್ರಾಮ್.. ಅದ್ರಲ್ಲೂ ರೀಲ್ಸ್​ ಮಾಡೋದ್ರಿಂದ ಸಖತ್​ ಫೇಮಸ್​ ಆಗ್ತಾರೆ. ದೊಡ್ಡ ದೊಡ್ಡ ಕಲಾವಿದರಿಂದ ಹಿಡಿದು, ಈಗ್ತಾನೆ  ಸಿನಿಮಾ ಕನಸು ಕಣ್ತೀರೋ ಯುವ ಪ್ರತಿಭೆಗಳ ವರೆಗೂ ತಮ್ಮ ಪ್ರತಿಭೆ ತೋರಿಸೋಕೆ ಮೊದಲು ಆಯ್ಕೆ ಮಾಡ್ಕೋಳ್ಳೋದು ರೀಲ್ಸ​ನ್ನೇ..,. ಹೀಗಾಗಿ ಈ ಜೋಡಿ ಕೂಡ ಸೋಷಿಯಲ್​ ಮೀಡಿಯಾದಲ್ಲಿ ಹೊಸ ಹೊಸ ಪ್ರಯತ್ನಗಳನ್ನ ಮಾಡ್ತಿದೆ.

ಐಶ್ವರ್ಯ ಮತ್ತು ಶಿಶಿರ್​ ಫೋಟೋ ಶೂಟ್​ಗಳ ಜೊತೆಗೆ ಹಲವು ಸಾಂಗ್​ಗಳಿಗೆ ಸ್ಟೆಪ್​ ಹಾಕಿದ್ದಾರೆ. ಕಾಸ್ಟ್ಯೂಮ್​. ಮೇಕಪ್‌ಗೂ  ಸ್ಪೆಷಲ್​ ಫೇಸ್ ಆಗಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ರೀಲ್ಸ್​ ಕಂಡು ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ. ಸದ್ಯ ಶಿಶಿರ್​ ಗಂಧದ ಗುಡಿ ಧಾರವಾಹಿಯಲ್ಲಿ ಮುತ್ತು ರಾಜ್​ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಇನ್ನು ಐಶ್ವರ್ಯ ಜೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ನಾ ನಿನ್ನ ಬಿಡಲಾರೇ ಧಾರವಾಹಿಯಲ್ಲಿ ಇತ್ತಿಚ್ಚೇಗೆ ಶರತ್​ ಫ್ರೆಂಡ್‌ ಕ್ಯಾರೆಕ್ಟರ್‌ನಲ್ಲಿ ಕಾಣಿಸಿಕೊಂಡಿದ್ದರು. ಶಿಶಿರ್​ ಮತ್ತು ಐಶ್ವರ್ಯರವರ ಜೋಡಿಯ ರೀಲ್ಸ್​ ಕಂಡು ನಿಜ ಜೀವನದಲ್ಲೂ ಈ ಜೋಡಿ ಒಂದಾಗಲೀ ಅಂತಾ ವೀಕ್ಷಕರು ಹಾರೈಸ್ತಿದ್ದಾರೆ.

Be the first to comment

Leave a Reply

Your email address will not be published. Required fields are marked *

ad image