ಚಿಕ್ಕಬಳ್ಳಾಪುರ, ಫೆ.4- ವಿಶ್ವವಿಖ್ಯಾತ ಪ್ರವಾಸಿ ತಾಣ ನಂದಿ ಬೆಟ್ಟದಲ್ಲಿ ಸಂಜೆ ಅಕಸಿಕ ಬೆಂಕಿ ಕಾಣಿಸಿಕೊಂಡು ಗಿರಿಧಾಮದ ಸುತ್ತಲಿನ ಹತ್ತಾರು ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾದ ಘಟನೆ ಸಂಭವಿಸಿದ್ದು ಇದು ಕಿಡಿಗೇಡಿಗಳ ಕೃತ್ಯದಿಂದಲೇ ನಡೆದಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.

ನಂದಿ ಬೆಟ್ಟದ ಸುತ್ತಮುತ್ತ ಜಾನುವಾರು ಮೇಯಿಸಲು ಬರುವ ಹಾಗೂ ನಂದಿ ಬೆಟ್ಟ ವೀಕ್ಷಣೆ ಮಾಡಲು ಬರುವ ಕೆಲವು ಪೋಕಾರಿಗಳು ಒಣ ಹುಲ್ಲನ್ನು ಸುಡುತ್ತಿದ್ದಾರೆ ಎನ್ನುವ ಹನುಮಾನ ಎಲ್ಲೆಡೆ ಮೂಡಿದೆ. ಅದರಂತೆ ಸುಲ್ತಾನಪೇಟೆ ಗ್ರಾಮದ ಬಳಿಯ ಬೆಟ್ಟಗಳ ಬುಡದಿಂದ ಭಾರಿ ಬೆಂಕಿ ಹರಡಿದೆ ಮತ್ತು ಸರ್ಪ ಜ್ವಾಲೆಯು ಬೆಟ್ಟಗಳ ತುದಿಯವರೆಗೆ ಮೇಲಕ್ಕೆ ಹಾರಿತು.
ಪಾರಂಪರಿಕ ಪ್ರವಾಸೋದ್ಯಮ ತಾಣಗಳನ್ನು ಅಭಿವದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಘೋಷಿಸಿರುವ ಪಟ್ಟಿಯಲ್ಲಿ ನಂದಿ ಬೆಟ್ಟವೂ ಒಂದು. ಆದಾಗ್ಯೂ, ಜನಪ್ರಿಯ ಗಿರಿಧಾಮಕ್ಕೆ ಈ ಉತ್ತೇಜನಕ್ಕೆ ಬೆದರಿಕೆ ಹಾಕುವುದು ಹಳೆಯ ಅಭ್ಯಾಸವಾಗಿದ್ದು, ಇದು ಬೆಟ್ಟಗಳ ಪ್ರಗತಿಯನ್ನು ಹಾಳುಮಾಡುತ್ತಿದೆ ಮತ್ತು ಜೀವವೈವಿಧ್ಯತೆಗೆ ಹಾನಿ ಮಾಡುತ್ತಿದೆ.
ಗ್ರಾಮಸ್ಥರು ತಮ ದನಗಳನ್ನು ಪೋಷಿಸಲು ಹೊಸ ಹುಲ್ಲು ಬೆಳೆಯಲು ಹಳೆಯ ಹುಲ್ಲನ್ನು ಸುಡುವ ಸಂದರ್ಭದಲ್ಲಿ ಬೆಟ್ಟಕ್ಕೆ ಬೆಂಕಿ ಹತ್ತಿ ಉರಿದಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಬೆಟ್ಟದ ಮಧ್ಯ ಭಾಗದಲ್ಲಿ ಹೊತ್ತಿಕೊಂಡ ಬೆಂಕಿ ಕ್ಷಣಕ್ಷಣಕ್ಕೂ ವ್ಯಾಪಿಸಿ, ಸುಲ್ತಾನ್ ಪೇಟೆ ಭಾಗದ ಕಡೆಗೆ ಕೆನ್ನಾಲಿಗೆ ಚಾಚಿದ ದಶ್ಯಗಳು ದೂರದಿಂದಲೇ ಗೋಚರಿಸಿವೆ ಎಂಬುದು ದಾರಿಹೋಕರ ಮಾಹಿತಿಯಾಗಿದ್ದು ಬೆಂಕಿಯ ಜ್ವಾಲೆಗಳು ಎತ್ತರಕ್ಕೆ ಏರಿ ದಟ್ಟ ಹೊಗೆ ಆಕಾಶ ಮುಟ್ಟಿದಂತಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ.
ಬೆಂಕಿ ಕಾಣಿಸಿಕೊಂಡ ಪ್ರದೇಶ ಕಡು ಬಂಡೆಗಲ್ಲುಗಳಿಂದ ಕೂಡಿದ್ದು, ಅಗ್ನಿಶಾಮಕ ದಳದ ವಾಹನಗಳು ನೇರವಾಗಿ ತಲುಪಲು ಸಾಧ್ಯವಾಗದಂತಹ ಸ್ಥಳವಾಗಿರುವುದರಿಂದ ಬೆಂಕಿ ನಂದಿಸುವ ಕಾರ್ಯದಲ್ಲಿ ಅಡಚಣೆ ಎದುರಾಗಿದೆ.
ಸಿಬ್ಬಂದಿ ಪಾದಚಾರಿ ಮಾರ್ಗದಿಂದಲೇ ಮೇಲಕ್ಕೆ ತೆರಳಿ ಬೆಂಕಿ ನಿಯಂತ್ರಣಕ್ಕೆ ಪ್ರಯತ್ನಿಸುತಿದ್ದರಾದರೂ ಬೆಂಕಿಯ ತೀವ್ರತೆ ಹೆಚ್ಚಾಗಿ ಕಲ್ಲು ಬಂಡೆಗಳಲ್ಲಿ ತೆರಳಿ ಅಗ್ನಿಶಾಮಕ ಸಿಬ್ಬಂದಿ ಏನೂ ಮಾಡದ ಪರಿಸ್ಥಿತಿ ಉಂಟಾಗಿತ್ತು.
ಘಟನೆಯ ದಶ್ಯಗಳನ್ನು ಸುಲ್ತಾನ್ ಪೇಟೆ ಸ್ಥಳೀಯರೊಬ್ಬರು ತಮ ಮೊಬೈಲ್ ಫೋನ್ಗಳಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋಗಳು ಸಖತ್ ವೈರಲ್ ಆಗಿವೆ.ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ನಡೆಸಿರುವ ಬಗ್ಗೆ ಸ್ಥಳೀಯರಿಂದ ಮಾಹಿತಿ ಲಭ್ಯವಾಗಿದೆ.
ಬೆಂಕಿ ಅನಾಹುತದ ನಿಖರ ಕಾರಣ ಮತ್ತು ಹಾನಿ ಪ್ರಮಾಣ ಕುರಿತು ಅಧಿಕತ ಮಾಹಿತಿ ತಿಳಿದು ಬಂದಿಲ್ಲ. ಒಟ್ಟಾರೆಯಾಗಿ ಬೆಂಕಿಯ ಕೆನ್ನಾಲಿಗೆಗೆ ಅನೇಕ ಪ್ರಾಣಿ ಸಂಕುಲ ಅಹುತಿ ಆಗಿದ್ದಿರಬಹುದೆಂದು ಅಂದಾಜಿಸಲಾಗಿದೆ.
ಪ್ರಕತಿ ಸೌಂದರ್ಯದ ಸಂಕೇತವಾದ ನಂದಿ ಬೆಟ್ಟದಲ್ಲಿ ಬೇಸಿಗೆಯಲ್ಲಿ ಈ ರೀತಿಯ ಘಟನೆಗಳು ಆಗಿಂದಾಗ್ಗೆ ಸಂಭವಿಸುವುದು ಪರಿಸರ ಪ್ರೇಮಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ಜಿಲ್ಲಾಡಳಿತ ಅರಣ್ಯ ಇಲಾಖೆ ಇಂತಹ ಘಟನೆಗಳ ಬಗ್ಗೆ ಜಾಗತೆವಹಿಸಲಿ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.






Be the first to comment
Leave a Reply