ಹಾಸನ ನಿವೇಶನ ಒತ್ತುವರಿ ಪ್ರಕರಣ.. ನಿರ್ಮಾಪಕಿ ಪುಷ್ಪಾಗೆ ಮೊದಲ ಹಂತದ ಗೆಲುವು!

ಹಾಸನ ನಿವೇಶನ ಒತ್ತುವರಿ ಪ್ರಕರಣ.. ನಿರ್ಮಾಪಕಿ ಪುಷ್ಪಾಗೆ ಮೊದಲ ಹಂತದ ಗೆಲುವು!

ಹಾಸನ: ಹಾಸನದ ವಿದ್ಯಾನಗರ ಬಡಾವಣೆಯ ನಿವೇಶನ ಒತ್ತುವರಿ ಪ್ರಕರಣದಲ್ಲಿ, ಸ್ಯಾಂಡಲ್‌ವುಡ್ ನಿರ್ಮಾಪಕಿ ಪುಷ್ಪಾ ಅರುಣ್‌ಕುಮಾರ್‌ಗೆ ತಾತ್ಕಾಲಿಕ ಮುನ್ನಡೆ ಸಿಕ್ಕಿದೆ. ಪ್ರಕರಣ ಇತ್ಯರ್ಥವಾಗುವವರೆಗೆ ವಿವಾದಿತ ನಿವೇಶನದ ಸ್ವರೂಪ ಬದಲಾಯಿಸದಂತೆ ಎರಡೂ ಕಕ್ಷಿದಾರರಿಗೆ ನಿರ್ಬಂಧ ವಿಧಿಸಲಾಗಿದೆ. ಈ ಹಿಂದೆ ನೀಡಿದ್ದ ನ್ಯಾಯಾಲಯದ ಆದೇಶಕ್ಕೆ ತಡೆ ನೀಡುವಂತೆ ಪುಷ್ಪಾ ಅರುಣ್‌ಕುಮಾರ್ ಹಾಸನದ 4 ನೇ ಜೆಎಂಎಫ್‌ಸಿ ಮೊರೆ ಹೋಗಿದ್ದರು. ಕೋರ್ಟ್ ಮೂಲ ದಾವೆಯ ಆದೇಶ ಅನುಷ್ಠಾನಕ್ಕೆ ನ್ಯಾಯಾಲಯ ತಡೆ ನೀಡಿದೆ. ನಿವೇಶನದ ಮಾಲೀಕರು ಎಂದು ಹೇಳಲಾಗಿರುವ ಲಕ್ಷ್ಮಮ್ಮ ಅವರ ಜಿಪಿಎ ಹೋಲ್ಡರ್ ದೇವರಾಜು ಅವರು ಪುಷ್ಪಾ ಅರುಣ್ ಕುಮಾರ್ ಹಾಕಿದ್ದ ಕಾಂಪೌಂಡ್ ತೆರವುಗೊಳಿಸಿದ್ದರು. ಈ ಸಂಬಂಧ ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿತ್ತು.

ಹಾಸನ ನಿವೇಶನ ಒತ್ತುವರಿ ಪ್ರಕರಣ.. ನಿರ್ಮಾಪಕಿ ಪುಷ್ಪಾಗೆ ಮೊದಲ ಹಂತದ ಗೆಲುವು!

ಪುಷ್ಪಾ ಅರುಣ್‌ಕುಮಾರ್ ಮನವಿ ಏನು ಅಂತ ನೋಡೋದಾದ್ರೆ, ತಮ್ಮನ್ನ ಕಕ್ಷಿದಾರರಾಗಿ ಪರಿಗಣಿಸದೆ ಆದೇಶ ಮಾಡಲಾಗಿದೆ ಎಂದು ಹೇಳಿಕೊಂಡಿದ್ರು. ಕೋರ್ಟ್ ಆದೇಶ ಬಂದು 90 ದಿನದೊಳಗೆ ಮೇಲ್ಮನವಿ ಹಾಕದ ಬಗ್ಗೆ ಕೂಡ ಮಧ್ಯಂತರ ಅರ್ಜಿ ಹಾಕಿದ್ದರು. ವಿಳಂಬ ಅರ್ಜಿ ಮಾನ್ಯ ಮಾಡಿ ಪ್ರಕರಣದಲ್ಲಿ ಕಕ್ಷಿದಾರರಾಗಿ ಹಾಜರಾಗಲು ಅವಕಾಶ ನೀಡಲಾಗಿದೆ. ಈ ಪ್ರಕರಣ ಇತ್ಯರ್ಥ ಆಗೋವರೆಗೆ ವಿವಾದಿತ ಶೆಡ್ಯೂಲ್ ಪ್ರಾಪರ್ಟಿಯನ್ನ ಪರಬಾರೆ ಅಥವಾ ಮೂಲ ಸ್ವರೂಪ ಬದಲಾವಣೆ ಮಾಡದಂತೆ ಅರ್ಜಿದಾರರಿಗೂ ನಿರ್ಬಂಧ ವಿಧಿಸಲಾಗಿದೆ. ಅರ್ಜಿಯನ್ನು ಫೆಬ್ರವರಿ 18ಕ್ಕೆ ಮುಂದೂಡಲಾಗಿದೆ.

Tags :

Hassan

Be the first to comment

Leave a Reply

Your email address will not be published. Required fields are marked *

ad image