Ind Vs Wi- ಟೀಂ ಇಂಡಿಯಾವನ್ನು ಸೆಮಿಫೈನಲ್ ತಲುಪಿಸಿದ ಸಂಜು ಸ್ಯಾಮ್ಸನ್! ಟೀಕೆಗಳಿಗೆ ಬ್ಯಾಟ್ ನಿಂದಲೇ ಉತ್ತರ

Avatar photo

India Vs West Indies- ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸಂಘಟಿತ ಪ್ರದರ್ಶನ ತೋರಿದ ಭಾರತ ತಂಡ ಇದೀಗ ಐಸಿಸಿ ಟಿ20 ವಿಶ್ವಕಪ್ ನ ಸೆಮಿಫೈನಲ್ ತಲುಪಿದೆ. ಆರಂಭಕಾರನಾಗಿ ಬಂದು ತಂಡವನ್ನು ಅಜೇಯ 97 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ ಸಂಜು ಸ್ಯಾಮ್ಸನ್ ಅವರ ಪಂದ್ಯದ ಹೈಲೈಟ್ ಆಯಿತು. ಇದೀಗ ಮಾರ್ಚ್ 5ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಸೆಮಿಫೈನಲ್ ನಲ್ಲಿ ಭಾರತ ತಂಡ ಇಂಗ್ಲೆಂಡ್ ಅನ್ನು ಎದುರಿಸಲಿದೆ.

ಈವೆರೆಗೂ ತನ್ನ ಫಾರ್ಮ್ ಬಗ್ಗೆ ಎದ್ದಿದ್ದ ಪ್ರಶ್ನೆಗಳಿಗೆ ಈಡನ್ ಗಾರ್ಡನ್ಸ್ ನಲ್ಲಿ ತನ್ನ ಬ್ಯಾಟ್ ಮೂಲಕವೇ ಉತ್ತರಿಸಿದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರು ಟೀಂ ಇಂಡಿಯಾವನ್ನು ಐಸಿಸಿ ಟಿ20 ವಿಶ್ವಕಪ್ ಸೆಮಿಫೈನಲ್ ಗೆ ತಲುಪಿಸಿದ್ದಾರೆ. ಅವರ ಮ್ಯಾಚ್ ವಿನ್ನಿಂಗ್ ಅರ್ಧಶತಕದ ಸಹಾಯದಿಂದ ಶಾಯ್ ಹೋಪ್ ಬಳಗವನ್ನು ಸೂರ್ಯಕುಮಾರ್ ಯಾದವ್ ಪಡೆ 5 ವಿಕೆಟ್ ಗಳಿಂದ ಸೋಲಿಸಿದೆ. ಇದೀಗ ಮಾರ್ಚ್ 5ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ಅನ್ನು ಎದುರಿಸಲಿದೆ.

ಕೋಲ್ಕತಾದ ಈಡನ್ ಗಾರ್ಡನ್ಸ್ ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 195 ರನ್ ಗಳಿಸಿತು. ಇದಕ್ಕುತ್ತರವಾಗಿ ಭಾರತ ತಂಡ 5 ವಿಕೆಟ್ ಕಳೆದಕೊಂಡು 4 ಎಸೆತಗಳು ಬಾಕಿ ಉಳಿದಿರುವಂತೆ ಜಯಭೇರಿ ಬಾರಿಸಿತು. ಕೇವಲ 3 ರನ್ ಗಳಿಂದ ಶತಕ ವಂಚಿತರಾದ ಸಂಜು ಸ್ಯಾಮ್ಸನ್ ಅವರು ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು

ಸಂಜು ತಾಳ್ಮೆ+ ಜಾಣ್ಮೆ

Watch the video link below 👇

https://x.com/StarSportsIndia/status/2028147074961944964?s=20

ಆರಂಭಕಾರನಾಗಿ ಬಂದ ಸಂಜು ಸ್ಯಾಮ್ಸನ್ ಅವರು 50 ಎಸೆತಗಳಲ್ಲಿ ಅಜೇಯ 97 ರನ್ ಗಳಿಸಿದರು. ಅವರ ಇನ್ನಿಂಗ್ಸ್ ನಲ್ಲಿ 12 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್ ಗಳಿದ್ದವು. ಭಾರತ ತಂಡ 41 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿತ್ತು. ಆಕ್ರಮಣಕಾರಿ ಶೈಲಿಯ ಬ್ಯಾಟರ್ ಅಭಿಷೇಕ್ ಶರ್ಮಾ(11 ಎಸೆತದಲ್ಲಿ 10) ಮತ್ತು ಫಾರ್ಮ್ ನಲ್ಲಿರುವ ಇಶಾನ್ ಕಿಶನ್(6 ಎಸೆತದಲ್ಲಿ 10) ಅವರ ವಿಕೆಟ್ ಪತನವಾಯಿತು. ಈ ಸಂದರ್ಭದಲ್ಲಿ ಸಂಜು ಅವರು ತಾಳ್ಮೆಯೊಂದಿಗೆ ಜಾಣ್ಮೆಯನ್ನು ತೋರಿಸಿ ಇನ್ನಿಂಗ್ಸ್ ಕಟ್ಟಿದರು. ನಾಯಕ ಸೂರ್ಯಕುಮಾರ್ ಯಾದವ್(16 ಎಸೆತದಲ್ಲಿ 18), ತಿಲಕ್ ವರ್ಮಾ(15 ಎಸೆತದಲ್ಲಿ 27) ಮತ್ತು ಹಾರ್ದಿಕ್ ಪಾಂಡ್ಯ (14 ಎಸೆತದಲ್ಲಿ 17) ಅವರ ಜೊತೆ ಉತ್ತಮ ಜೊತೆಯಾಟ ಕಟ್ಟಿದರು. ಅಂತಿಮವಾಗಿ ಶಿವಂ ದುಬೆ(4 ಎಸೆತದಲ್ಲಿ 8)

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ವೆಸ್ಚ್ ಇಂಡೀಸ್ ತಂಡಕ್ಕೆ ನಾಯಕ್ ಶಾಯ್ ಹೋಪ್(33 ಎಸೆತದಲ್ಲಿ 32) ಮತ್ತು ರೋಸ್ಟನ್ ಚೇಸ್ (25 ಎಸೆತದಲ್ಲಿ 40) ಅವರು ಉತ್ತಮ ಆರಂಭ ನೀಡಿದರು. ಪವರ್ ಪ್ಲೇನ 6 ಓವರ್ ಗಳಲ್ಲಿ 53 ರನ್ ಗಳಿಸಿದ ಅವರು ಮೊದಲ ವಿಕೆಟ್ ಗೆ 8.5 ಓವರ್ ಗಳಲ್ಲಿ 68 ರನ್ ಗಳಿಸುವಲ್ಲಿ ಯಶಸ್ವಿಯಾದರು.

3ನೇ ಕ್ರಮಾಂಕದಲ್ಲಿ ಕ್ರೀಸಿಗೆ ಆಗಮಿಸಿದ ಶಿಮ್ರಾನ್ ಹೆಟ್ಮೆಯರ್ ಅವರು 12 ಎಸೆತದಲ್ಲಿ ವೇಗದ 27 ರನ್ ಹೊಡೆದಿದ್ದರಿಂದ ತಂಡ 11 ಓವರ್ ಗಳಲ್ಲಿ 100ರ ಗಡಿ ದಾಟಿತು. ಅಂತಿಮ ಓವರ್ ಗಳಲ್ಲಿ ರೋಮನ್ ಪೋವೆಲ್(19 ಓವರ್ ಗಳಲ್ಲಿ ಅಜೇಯ 34) ಮತ್ತು ಜೇಸನ್ ಹೋಲ್ಡರ್ (22 ಎಸೆತಗಳಲ್ಲಿ ಅಜೇಯ 37)

ಸಂಕ್ಷಿಪ್ತ ಸ್ಕೋರ್

  • ವೆಸ್ಟ್ ಇಂಡೀಸ್ 20 ಓವರ್ ಗಳಲ್ಲಿ 195/4, ಶಾಯ್ ಹೋಪ್ 32(33), ರೋಸ್ಟನ್ ಚೇಸ್ 40(25), ಜೇಸನ್ ಹೋಲ್ಡರ್ 37(22), ರೋವ್ಮನ್ ಪೋವೆಲ್ 34(19), ಜಸ್ಪ್ರೀತ್ ಬುಮ್ರಾ 36ಕ್ಕೆ 2, ವರುಣ್ ಚಕ್ರವರ್ತಿ 40ಕ್ಕೆ 1, ಹಾರ್ದಿಕ್ ಪಾಂಡ್ಯ 40ಕ್ಕೆ1
  • ಸಂಜು ಸ್ಯಾಮ್ಸನ್ 97(50), ತಿಲಕ್ ವರ್ಮಾ 27(15), ಹಾರ್ದಿಕ್ ಪಾಂಡ್ಯ 17(14), ಸೂರ್ಯಕುಮಾರ್ ಯಾದವ್ 18(16), ಜೇಸನ್ ಹೋಲ್ಡರ್ 38ಕ್ಕೆ 2, ಶಮರ್ ಜೋಸೆಫ್ 42ಕ್ಕೆ 2.

Be the first to comment

Leave a Reply

Your email address will not be published. Required fields are marked *

ad image