ಭಾರತ-ಪಾಕಿಸ್ತಾನ ಪಂದ್ಯ ಪಕ್ಕಾ ಆಗಿದ್ದೇ ತಡ, ಕೊಲಂಬೋ ವಿಮಾನ ಟಿಕೆಟ್ ದರ ಏರಿಕೆ; ಐಸಿಸಿಗೂ ಭಾರೀ ಲಾಭ!
ಕ್ರಿಕೆಟ್ ಈಗ ಕೇವಲ ಆಟವಾಗಿ ಉಳಿದಿಲ್ಲ. ಅದು ಕೋಟ್ಯಂತರ ಜನರ ಭಾವನೆಗಳಾಗಿ ಮಾರ್ಪಟ್ಟಿದೆ. ಈ ಆಟ ಈಗ ಲಾಭ-ನಷ್ಟದ ಲೆಕ್ಕಾಚಾರವಾಗಿಯೂ ಬದಲಾಗಿದೆ. ಅದರಲ್ಲೂ ಭಾರತ-ಪಾಕಿಸ್ತಾನದಂತಹ ಸಾಂಪ್ರದಾಯಿಕ ಎದುರಾಳಿಗಳ ಪಂದ್ಯ ಕೋಟ್ಯಂತರ ರೂಪಾಯಿ ವ್ಯವಹಾರ ಮಾಡುತ್ತದೆ. ಇದಕ್ಕೆ ಪುಷ್ಠಿ ಎಂಬಂತೆ ಈ ಬಾರಿಯ ಐಸಿಸಿ ಟಿ-20 ಪಂದ್ಯಾವಳಿಯಲ್ಲಿ ಭಾರತದ ವಿರುದ್ಧ ಆಡದಿರುವ ತನ್ನ ನಿರ್ಧಾರದಿಂದ ಪಾಕಿಸ್ತಾನ ಹಿಂದೆ ಸರಿಯುತ್ತಿದ್ದಂತೇ, ಐಸಿಸಿ 174 ಮಿಲಿಯನ್ ಅಮೆರಿಕನ್ ಡಾಲರ್ ಹಣ ಉಳಿತಾಯ ಮಾಡಿದೆ. ಅದೇ ರೀತಿ ಮುಂಬೈ-ಕೊಲಂಬೋ ವಿಮಾನ ಟಿಕೆಟ್ ದರವೂ ಏಕಾಏಕಿ ಏರಿಕೆ ಕಂಡಿದೆ.

ಹೈಲೈಟ್ಸ್
- ಐಸಿಸಿ ಟಿ-20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಆಡಲು ಪಾಕಿಸ್ತಾನ ಒಪ್ಪಿಗೆ.
- ಭಾರತ-ಪಾಕಿಸ್ತಾನ ಪಂದ್ಯ ಆಯೋಜನೆಯಿಂದಾಗಿ 174 ಮಿಲಿಯನ್ ಡಾಲರ್ ಉಳಿಸಿದ ಐಸಿಸಿ.
- ಮುಂಬೈ-ಕೊಲಂಬೋ ವಿಮಾನ ಟಿಕೆಟ್ ದರದಲ್ಲಿ ದಿಢೀರ್ ಏರಿಕೆ.
ಇಸ್ಲಾಮಾಬಾದ್: ಟಿ-20 ವಿಶ್ವಕಪ್ 2026ರ ಪಂದ್ಯಾವಳಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನಾಟಕ, ಪುಕ್ಕಟೆ ಮನರಂಜನೆ ನೀಡುತ್ತಿದೆ. ಇಷ್ಟು ದಿನಗಳ ಕಾಲ ಭಾರತದ ಜೊತೆ ಟಿ-20 ಪಂದ್ಯ ಆಡದಿರುವ ತೀರ್ಮಾನ ಕೈಗೊಂಡಿದ್ದ ಪಾಕಿಸ್ತಾನ, ನಿನ್ನೆ (ಫೆ.9-ಸೋಮವಾರ) ತನ್ನ ನಿಲುವಿನಿಂದ ಯು-ಟರ್ನ್ ಹೊಡೆದಿದೆ.






Be the first to comment
Leave a Reply