ಇರಾನ್‌ ರಾಜಧಾನಿ ಮೇಲೆ ಅಪ್ಪಳಿಸಿದ ಇಸ್ರೇಲ್‌ ಕ್ಷಿಪಣಿಗಳು, ನಡುಗಿದ ಟೆಹ್ರಾನ್‌, ಭೀಕರ ಸಮರ ಶುರು

ಇರಾನ್‌ನ ಪ್ರಮುಖ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಈ ಕಾರ್ಯಾಚರಣೆ ನಡೆದಿದೆ ಎನ್ನಲಾಗಿದೆ. ಸದ್ಯ ಇಸ್ರೇಲ್ ಸರ್ಕಾರ ದೇಶಾದ್ಯಂತ ‘ಸ್ಟೇಟ್ ಆಫ್ ಎಮರ್ಜೆನ್ಸಿ’ (ತುರ್ತು ಪರಿಸ್ಥಿತಿ) ಘೋಷಿಸಿದೆ. ಇರಾನ್ ಯಾವುದೇ ಕ್ಷಣದಲ್ಲಿ ಇಸ್ರೇಲ್ ಮೇಲೆ ಡ್ರೋನ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮೂಲಕ ತಿರುಗೇಟು ನೀಡಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಈ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.

ಟೆಹ್ರಾನ್, ಫೆ.28: ಇಸ್ರೇಲ್ ಮತ್ತು ಇರಾನ್ (Iran- Israel War) ನಡುವಿನ ಉದ್ವಿಗ್ನತೆ ಮತ್ತೊಂದು ಹಂತಕ್ಕೆ ತಲುಪಿದ್ದು, ಶನಿವಾರ ಮುಂಜಾನೆ ಇಸ್ರೇಲ್ ಮಹತ್ವದ ಸೇನಾ ಕಾರ್ಯಾಚರಣೆ ನಡೆಸಿದೆ. ಶನಿವಾರ ಮುಂಜಾನೆ ಇಸ್ರೇಲ್ ರಕ್ಷಣಾ ಪಡೆಗಳು ಇರಾನ್ ವಿರುದ್ಧ “ಮುನ್ನೆಚ್ಚರಿಕಾ ದಾಳಿ” ನಡೆಸಿವೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಅಧಿಕೃತವಾಗಿ ಘೋಷಿಸಿದ್ದಾರೆ. ಇರಾನ್ ರಾಜಧಾನಿ ಟೆಹ್ರಾನ್‌ನಾದ್ಯಂತ ಸರಣಿ ಸ್ಫೋಟಗಳು (Serial blasts) ಸಂಭವಿಸಿದ್ದು, ಇಡೀ ನಗರವೇ ಕಂಪಿಸಿದೆ.

ಟೆಹ್ರಾನ್‌ನ ಯೂನಿವರ್ಸಿಟಿ ಸ್ಟ್ರೀಟ್ ಮತ್ತು ಜೊಮ್ಹೌರಿ ಪ್ರದೇಶಗಳಿಗೆ ಇಸ್ರೇಲ್‌ನ ಹಲವು ಕ್ಷಿಪಣಿಗಳು (missiles) ಅಪ್ಪಳಿಸಿವೆ. ಅಷ್ಟೇ ಅಲ್ಲದೆ, ನಗರದ ಹೃದಯಭಾಗದಲ್ಲಿರುವ ಪಾಸ್ಟರ್ ಸ್ಟ್ರೀಟ್ ಪರಿಸರದಲ್ಲಿ ಸ್ಫೋಟದ ನಂತರ ದಟ್ಟವಾದ ಹೊಗೆ ಆಕಾಶಕ್ಕೆ ಚಿಮ್ಮುತ್ತಿರುವುದು ಕಂಡುಬಂದಿದೆ. ಇರಾನ್ ತನ್ನ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದೆ ಎಂಬ ಗುಪ್ತಚರ ಮಾಹಿತಿ ಆಧರಿಸಿ, ಇಸ್ರೇಲ್ ಈ ಕ್ಷಿಪಣಿ ದಾಳಿ ನಡೆಸಿದೆ. ಇರಾನ್‌ನ ಪ್ರಮುಖ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಈ ಕಾರ್ಯಾಚರಣೆ ನಡೆದಿದೆ ಎನ್ನಲಾಗಿದೆ. ಸದ್ಯ ಇಸ್ರೇಲ್ ಸರ್ಕಾರ ದೇಶಾದ್ಯಂತ ‘ಸ್ಟೇಟ್ ಆಫ್ ಎಮರ್ಜೆನ್ಸಿ’ (ತುರ್ತು ಪರಿಸ್ಥಿತಿ) ಘೋಷಿಸಿದೆ. ಇರಾನ್ ಯಾವುದೇ ಕ್ಷಣದಲ್ಲಿ ಇಸ್ರೇಲ್ ಮೇಲೆ ಡ್ರೋನ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮೂಲಕ ತಿರುಗೇಟು ನೀಡಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಈ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.

ದಾಳಿಯ ಬೆನ್ನಲ್ಲೇ, ಇಸ್ರೇಲ್ ತನ್ನ ದೇಶದ ಎಲ್ಲಾ ನಾಗರಿಕರಿಗೆ ಸುರಕ್ಷಿತ ಸ್ಥಳಗಳ ಸಮೀಪವೇ ಇರುವಂತೆ ರಾಷ್ಟ್ರೀಯ ಎಚ್ಚರಿಕೆಯನ್ನು ರವಾನಿಸಿದೆ. ಇರಾನ್‌ನಿಂದ ಕ್ಷಿಪಣಿ ದಾಳಿ ನಡೆಯುವ ಸಾಧ್ಯತೆಯನ್ನು ಮನಗಂಡು ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. “ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಯುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರನ್ನು ಸನ್ನದ್ಧಗೊಳಿಸಲು ಈ ಪ್ರೊಆಕ್ಟಿವ್ ಅಲರ್ಟ್ ನೀಡಲಾಗಿದೆ” ಎಂದು ಐಡಿಎಫ್ (IDF) ತಿಳಿಸಿದೆ. ಸದ್ಯದ ವರದಿಗಳ ಪ್ರಕಾರ, ಇರಾನ್‌ನಿಂದ ಇಸ್ರೇಲ್ ಮೇಲೆ ಯಾವುದೇ ಕ್ಷಿಪಣಿ ದಾಳಿ ನಡೆದಿಲ್ಲ.

ದೇಶದಲ್ಲಿ ಹೈ ಅಲರ್ಟ್‌

ಇರಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯ ಬೆನ್ನಲ್ಲೇ, ಇಡೀ ಇಸ್ರೇಲ್ ದೇಶಾದ್ಯಂತ ಹೈ-ಅಲರ್ಟ್ ಘೋಷಿಸಲಾಗಿದೆ. ಇರಾನ್ ರಾಜಧಾನಿ ಟೆಹ್ರಾನ್‌ನ ಪಶ್ಚಿಮ ಭಾಗದಲ್ಲಿ ಭೀಕರ ಬಾಂಬ್ ಸ್ಫೋಟದ ಸದ್ದುಗಳು ಕೇಳಿಬಂದಿವೆ. ಇಸ್ರೇಲ್ ಮಿಲಿಟರಿ ತನ್ನ ಟೆಲಿಗ್ರಾಂ ಸಂದೇಶದಲ್ಲಿ ದೇಶಾದ್ಯಂತ ಸೈರನ್‌ಗಳನ್ನು ಮೊಳಗಿಸಿದೆ. “ಇರಾನ್‌ನಿಂದ ಕ್ಷಿಪಣಿ ದಾಳಿ ನಡೆಯುವ ಸಾಧ್ಯತೆಯಿರುವುದರಿಂದ ಸಾರ್ವಜನಿಕರು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ತೆರಳಲು ಸಿದ್ಧರಾಗಿರಬೇಕು” ಎಂದು ಎಚ್ಚರಿಸಿದೆ.

ಇಡೀ ದೇಶವನ್ನು ‘ಪೂರ್ಣ ಚಟುವಟಿಕೆ’ಯಿಂದ ‘ಅಗತ್ಯ ಚಟುವಟಿಕೆ’ ಹಂತಕ್ಕೆ ಬದಲಾಯಿಸಲಾಗಿದೆ. ಶಾಲೆಗಳನ್ನು ಮುಚ್ಚಲಾಗಿದ್ದು, ಸಾರ್ವಜನಿಕ ಸಭೆ-ಸಮಾರಂಭಗಳನ್ನು ನಿಷೇಧಿಸಲಾಗಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕೆಲಸದ ಸ್ಥಳಗಳನ್ನು ಬಂದ್ ಮಾಡಲು ಆದೇಶಿಸಲಾಗಿದೆ.

ಇರಾನ್‌ನ ಫಾರ್ಸ್ (Fars) ಸುದ್ದಿಸಂಸ್ಥೆಯ ವರದಿಯ ಪ್ರಕಾರ, ಟೆಹ್ರಾನ್‌ನ ಯೂನಿವರ್ಸಿಟಿ ಸ್ಟ್ರೀಟ್ ಮತ್ತು ಜೊಮ್ಹೌರಿ ಪ್ರದೇಶಗಳಿಗೆ ಹಲವು ಕ್ಷಿಪಣಿಗಳು ಅಪ್ಪಳಿಸಿವೆ. ಪಶ್ಚಿಮ ಟೆಹ್ರಾನ್‌ನಲ್ಲಿರುವ ಪತ್ರಕರ್ತರು ಎರಡು ಭೀಕರ ಬಾಂಬ್ ಸ್ಫೋಟದ ಸದ್ದುಗಳನ್ನು ಕೇಳಿರುವುದಾಗಿ ವರದಿ ಮಾಡಿದ್ದಾರೆ.

Be the first to comment

Leave a Reply

Your email address will not be published. Required fields are marked *

ad image