ಅಬುಧಾಬಿ: ತನ್ನ ಮೇಲೆ ಅಮೆರಿಕ (USA) ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಇರಾನ್ (Iran) ಈಗ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಕಂಪನಿಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಆರಂಭಿಸಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿರುವ ಅಮೆಜಾನ್ ವೆಬ್ ಸರ್ವೀಸಸ್ (AWS) ಡೇಟಾ ಸೆಂಟರ್‌ಗಳಲ್ಲಿ ಒಂದಕ್ಕೆ ಡ್ರೋನ್ ದಾಳಿ ನಡೆದಿದೆ. ಡ್ರೋನ್ ದಾಳಿಯಿಂದ ಬೆಂಕಿ ಹೊತ್ತಿಕೊಂಡು ಡೇಟಾ ಸೆಂಟರ್‌ಗೆ ಅಡಚಣೆ ಉಂಟಾಗಿದೆ.
ಭಾನುವಾರ ದುಬೈ ಕಾಲಮಾನ ಜೆ 4:30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ಕಂಪನಿ ತಿಳಿಸಿದೆ. ಬೆಂಕಿ ಹೊತ್ತಿಕೊಂಡ ಕೂಡಲೇ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ ಎಂದು AWS ಹೆಲ್ತ್ ಡ್ಯಾಶ್‌ಬೋರ್ಡ್‌ನಲ್ಲಿರುವ ಪೋಸ್ಟ್‌ನಲ್ಲಿ ತಿಳಿಸಲಾಗಿದೆ.
ಪ್ರಪಂಚದಾದ್ಯಂತ 39 ಪ್ರದೇಶಗಳಲ್ಲಿ ಅಮೆಜಾನ್ 123 ಕ್ಲಸ್ಟರ್‌ಗಳನ್ನು ನಿರ್ವಹಿಸುತ್ತದೆ. ಮತ್ತೆ ಯಾವಾಗ ಡೇಟಾ ಸೆಂಟರ್ ಕಾರ್ಯಾರಂಭ ಮಾಡುತ್ತದೆ ಎನ್ನುವುದನ್ನು ಕಂಪನಿ ತಿಳಿಸಿಲ್ಲ ಎಂದು ವರದಿಯಾಗಿದೆ.
ಯುಎಇ ಡೇಟಾ ಸೆಂಟರ್ ಸ್ಥಗಿತಗೊಂಡ ಬೆನ್ನಲ್ಲೇ ಬಹರೇನ್‌ನಲ್ಲಿರುವ ಅಮೆಜಾನ್‌ನ() ಕ್ಲೌಡ್ ಯೂನಿಟ್ AWS ಡೇಟಾ ಸೆಂಟರ್ ಸಹ ವಿದ್ಯುತ್ ಮತ್ತು ಸಂಪರ್ಕ ಸಮಸ್ಯೆಗಳನ್ನು ವರದಿ ಮಾಡಿದೆ. ಸಮಸ್ಯೆಗೆ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ
ಈಗಾಗಲೇ ಸೌದಿ ಅರೇಬಿಯಾ, ಕುವೈತ್, ಕತಾರ್, ಮೇಲೆ ಇರಾನ್ ದಾಳಿ ನಡೆಸಿದೆ. ಇರಾನ್ ಮತ್ತಷ್ಟು ದಾಳಿ ನಡೆಸಿದರೆ ಮಧ್ಯಪ್ರಾಚ್ಯದಲ್ಲಿರುವ ದೇಶಗಳು ಪ್ರತಿ ದಾಳಿ ನಡೆಸಿದರೆ ದೊಡ್ಡ ಮಟ್ಟದಲ್ಲಿ ಯುದ್ಧ ಸಂಭವಿಸುವ ಸಾಧ್ಯತೆಯಿದೆ.






Be the first to comment
Leave a Reply