
ಸದ್ಯದಲ್ಲೇ ನಟಿ ಮೀನಾ ಎರಡನೇ ಮದುವೆ ಆಗುತ್ತಿದ್ದಾರೆ ಎಂಬ ಹೇಳಿಕೆ ಹರಿದಾಡುತ್ತಿದ್ದ ಈ ವೇಳೆಯಲ್ಲಿ ನಟಿ ಮೀನಾ ಇದೀಗ ಎಲ್ಲವುದಕ್ಕೆ ಉತ್ತರ ನೀಡಿದ್ದಾರೆ. ಒಂದು ಕಾಲದ ಮೋಸ್ಟ್ ಬ್ಯುಟಿಫುಲ್ ನಟಿಯಾಗಿದ್ದ ಮೀನಾ, ತನ್ನ ನೈಜ ನಟನೆಯ ಮೂಲಕ ಅದೆಷ್ಟೋ ಪಡ್ಡೆ ಹುಡುಗರ ಮನಸ್ಸನ್ನು ಕದ್ದಿದ್ದರು. ಅದರಲ್ಲೂ ನಟಿ ಮೀನಾ ಅವರು ನಟಿಸಿದ್ದ ಪುಟ್ನಂಜ, ಸ್ವಾತಿ ಮುತ್ತು, ಶ್ರೀ ಮಂಜುನಾಥ, ಮೈ ಆಟೋಗ್ರಾಫ್ ಸಿನಿಮಾಗಳನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಕನ್ನಡ ಮಾತ್ರವಲ್ಲ ತಮಿಳು, ತೆಲುಗು, ಬಾಲಿವುಡ್ ನಲ್ಲೂ ತನ್ನ ಛಾಪನ್ನು ಮೂಡಿಸಿದ್ದಾರೆ.
ಸಿನಿಮಾ ರಂಗದಲ್ಲಿ ನಟಿ ಮೀನಾ ಜೀವನ ಬಹಳನೇ ಚೆನ್ನಾಗಿತ್ತು. ಆದ್ರೆ ತನ್ನ ವೈಯಕ್ತಿಕ ಜೀವನದಲ್ಲಿ ಹೆಚ್ಚು ನೋವನ್ನೇ ಕಂಡವರು ಮೀನಾ. ಯಾಕಂದ್ರೆ 2009ರಲ್ಲಿ ನಟಿ ವಿದ್ಯಾ ಸಾಗರ್ ಎಂಬುವವರ ಜೊತೆಗೆ ವಿವಾಹವಾಗುತ್ತಾರೆ. ಮೊದಲಿಗೆ ಎಲ್ಲವೂ ಚೆನ್ನಾಗಿತ್ತು ಸುಂದರ ಕುಟುಂಬ, ಪುಟ್ಟ ಮಗು ಎಲ್ಲವು ಸುಗಮವಾಗಿ ಸಾಗುತಿದ್ದ ವೇಳೆ 2022ರಲ್ಲಿ ತಮ್ಮ ಪತಿಯನ್ನು ಕಳೆದುಕೊಳ್ಳುತ್ತಾರೆ ಮೀನಾ.

ಇದಾದ ಬಳಿಕ ತನ್ನ ಮುದ್ದಾದ ಮಗಳ ಜೊತೆ ಒಂಟಿ ಜೀವನ ನಡೆಸುತ್ತಿದ್ದ ಮೀನಾ ಬಗ್ಗೆ ಕಳೆದ ಎರಡು ವರ್ಷಗಳಿಂದ ಗಾಸಿಪ್ ಒಂದು ಕೇಳಿಬಂದಿತ್ತು.ಅದೇನೆಂದರೆ ಮೀನಾ ಎರಡನೇ ಮದುವೆ ಬಗ್ಗೆ. ಸದ್ಯದಲ್ಲೇ ನಟಿ ಎರಡನೇ ಮದುವೆ ಆಗುತ್ತಿದ್ದಾರೆ ಎಂಬ ಹೇಳಿಕೆ ಹರಿದಾಡುತ್ತಿದ್ದ ಈ ವೇಳೆಯಲ್ಲಿ ನಟಿ ಮೀನಾ ಇದೀಗ ಎಲ್ಲವುದಕ್ಕೆ ಉತ್ತರ ನೀಡಿದ್ದಾರೆ. ನಟಿ ಮೀನಾ ಹೇಳಿದ್ದೇನು ಅಂದ್ರೆ, ತನ್ನ ಎರಡನೇ ಮದುವೆಯ ಬಗ್ಗೆ ಕೇಳಿಬರುತ್ತಿರುವ ಮಾತುಗಳು ಸಂಪೂರ್ಣ ಸುಳ್ಳು. ಯಾವುದೇ ಪುರಾವೆಗಳಿಲ್ಲದೆ ಜನರು ಈ ರೀತಿ ಮಾತನಾಡುತ್ತಿರುವುದು ನನಗೆ ಬಹಳಷ್ಟು ನೋವು ತಂದಿದೆ. ಜೊತೆಗೆ ಯಾರೇ ಆಗಲಿ ಈ ರೀತಿಯ ಸುಳ್ಳು ಸುದ್ದಿಗಳನ್ನು ಹರಡುವುದು ಒಳ್ಳೇದಲ್ಲ. ಜೊತೆಗೆ ತನಗೆ ಒಬ್ಬಳು ಮಗಳಿದ್ದಾಳೆ ಎಂಬುದನ್ನು ನೆನಪಿಟ್ಟು ಕೊಂಡು ಮಾತನಾಡಿ ಎಂದು ನಟಿ ಮೀನಾ ಬೇಸರ ವ್ಯಕ್ತಪಡಿಸಿದ್ದಾರೆ.
ಹಾಗೆಯೇ ಇಂತಹ ಸುಳ್ಳು ಸುದ್ದಿಗಳು ತಮ್ಮ ಖ್ಯಾತಿಗೆ ಧಕ್ಕೆ ತರುವುದಲ್ಲದೆ, ತಮ್ಮ ಕುಟುಂಬಕ್ಕೆ ಮಾನಸಿಕ ಒತ್ತಡವನ್ನುಂಟು ಮಾಡುತ್ತಿವೆ ಎಂದು ನಟಿ ಹೇಳಿದ್ದಾರೆ. ಸದ್ಯಕ್ಕೆ ಈ ಎಲ್ಲಾ ಮಾತುಗಳನ್ನು ನಾನು ನಿರ್ಲಕ್ಷಿಸಲು ನಿರ್ಧರಿಸಿದ್ದೇನೆ, ಆದರೆ ಪ್ರತಿಯೊಬ್ಬರಿಗೂ ಅವರ ತಾಳ್ಮೆಗೆ ಮಿತಿ ಇರುತ್ತದೆ ಎಂದು ಮೀನಾ ಸಿಟ್ಟಿನಿಂದ ಉತ್ತರ ನೀಡಿದ್ದಾರೆ. ಮನರಂಜನಾ ಉದ್ಯಮದಲ್ಲಿ ಮಹಿಳೆಯರ ವೈಯಕ್ತಿಕ ಜೀವನದ ಬಗ್ಗೆ ಯಾರು ಕೂಡಾ ಏನು ಬೇಕಾದರೂ ಬರೆಯಬಹುದು ಎಂಬ ಮನಸ್ಥಿತಿಯ ಬಗ್ಗೆ ಮೀನಾ ಬೇಸರ ವ್ಯಕ್ತಪಡಿಸಿದ್ದಾರೆ. ತಾನು ನಟಿ ಎಂಬ ಕಾರಣಕ್ಕೆ ತನ್ನ ಬಗ್ಗೆ ಬೇಕಾಬಿಟ್ಟಿಯಾದ ಕಥೆಗಳನ್ನು ಸೃಷ್ಟಿಸುವ ಹಕ್ಕು ಯಾರಿಗೂ ಇಲ್ಲ ಎಂದು ನಟಿ ತಿಳಿಸಿದ್ದಾರೆ. ಪರಿಸ್ಥಿತಿ ತನಗೆ ನೋವುಂಟು ಮಾಡಿದ್ದರೂ, ತಾನು ಮಾತ್ರ ಯಾವಾಗಲೂ ಪಾಸಿಟಿವ್ ಆಗಿರಲು ಬಯಸುತ್ತೇನೆ ಎಂದು ಮೀನಾ ಹೇಳಿದರು. ಜೊತೆಗೆ ಈ ಅನಗತ್ಯ ಮಾತುಗಳು ಕೇಳಿಸಿಕೊಂಡು ನನ್ನ ಮನಸ್ಸನ್ನು ಹಾಳುಮಾಡಿಕೊಳ್ಳಲು ನನಗೆ ಇಷ್ಟವಿಲ್ಲ ಎಂದು ಮೀನಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ಸುಳ್ಳುಗಳನ್ನು ಹರಡುವವರು ಅದರ ಪರಿಣಾಮಗಳನ್ನು ಅನುಭವಿಸುತ್ತಾರೆ ಎಂದು ನಟಿ ಎಚ್ಚರಿಕೆ ನೀಡಿದ್ದಾರೆ. ಹಾಗೆಯೇ ಉದ್ದೇಶಪೂರ್ವಕವಾಗಿ ಇತರರನ್ನು ನೋಯಿಸುವವರನ್ನು ಕರ್ಮವು ಯಾವತ್ತೂ ಬಿಡುವುದಿಲ್ಲ ಎಂದು ಮೀನಾ ಹೇಳಿದ್ದಾರೆ






Be the first to comment
Leave a Reply