ಸರ್ಕಾರವನ್ನ ಬಡಿದೆಬ್ಬಿಸಿದ ಉದ್ಯೋಗಾಕಾಂಕ್ಷಿಗಳು: 56 ಸಾವಿರ ಹುದ್ದೆ ನೇಮಕಕ್ಕೆ ಸಂಪುಟ ಒಪ್ಪಿಗೆ

ಸರ್ಕಾರವನ್ನ ಬಡಿದೆಬ್ಬಿಸಿದ ಉದ್ಯೋಗಾಕಾಂಕ್ಷಿಗಳು: 56 ಸಾವಿರ ಹುದ್ದೆ ನೇಮಕಕ್ಕೆ ಸಂಪುಟ ಒಪ್ಪಿಗೆ

ಬೆಂಗಳೂರು: ಧಾರವಾಡದಲ್ಲಿ ಮೊನ್ನೆ ನಡೆದ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ರಾಜ್ಯ ಸರ್ಕಾರವನ್ನ ಬಡಿದೆಬ್ಬಿಸಿದೆ. ಖಾಲಿ ಇರುವ ಎರಡೂವರೆ ಲಕ್ಷ ಖಾಲಿ ಹುದ್ದೆ ಭರ್ತಿಗೆ ಸರ್ಕಾರ ಹರಸಾಹಸ ಪಡುತ್ತಿದೆ. ಗ್ಯಾರಂಟಿ ಹೊರೆ ಮಾಡ್ಕೊಂಡಿರೋ ಸರ್ಕಾರಕ್ಕೆ ಹಣಕಾಸಿನ ಸವಾಲಾಗಿದೆ. ಇನ್ನೊಂದೆಡೆ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ಭಾರೀ ಸುದ್ದು ಮಾಡಿದೆ. ಇದೆಲ್ಲದರ ನಡುವೆ ಕೊನೆಗೂ ಸಿದ್ದರಾಮಯ್ಯ ಸರ್ಕಾರ 56 ಸಾವಿರ ಹುದ್ದೆ ನೇಮಕಕ್ಕೆ ಮುಂದಾಗಿದೆ. ನೇಮಕಾತಿಗೆ ಇರೋ ಸಾಧಕ ಭಾಧಕಗಳ ಬಗ್ಗೆ ಚರ್ಚಿಸಿದ್ದು, ಅಂತಿಮವಾಗಿ ಮೀಸಲಾತಿ ಮಿತಿ 50% ಮೀರದಂತೆ ಒಳಮೀಸಲಾತಿಯೊಂದಿಗೆ ನೇಮಕಾತಿಗೆ ತೀರ್ಮಾನಿಸಿದೆ. ಹೌದು…ಕರ್ನಾಟಕದ ವಿವಿಧ ಇಲಾಖೆಗಳ 56 ಸಾವಿರ ಖಾಲಿ ಹುದ್ದೆ ಭರ್ತಿಗೆ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಇದರಿಂದ ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಫಲಸಿಕ್ಕಂತಾಗಿದೆ.

ಹಲವು ಸವಾಲುಗಳ ನಡುವೆ ರಾಜ್ಯ ಸರ್ಕಾರ, ಮೀಸಲಾತಿ ಮಿತಿ 50% ಮೀರದಂತೆ ಒಳಮೀಸಲಾತಿಯೊಂದಿಗೆ ವಿವಿಧ ಇಲಾಖೆಗಳ 56 ಸಾವಿರ ಖಾಲಿ ಹುದ್ದೆ ನೇಮಕಕ್ಕೆ ತೀರ್ಮಾನಿಸಿದ್ದು, ನೇಮಕಾತಿಗಾಗಿ ತಾತ್ಕಲಿಕ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ. 15% ಎಸ್ಸಿ ಮೀಸಲಾತಿಗೆ ಒಳಮೀಸಲು ನೀಡಿ ನೇಮಕಾತಿಗೆ ತೀರ್ಮಾನಿಸಿದೆ. ಆದ್ರೆ, ಎಸ್‌ಸಿ ಒಳಮೀಸಲಾತಿ 17% ಇಟ್ಟು ತಕ್ಷಣ ನೇಮಕಾತಿ ಅಸಾಧ್ಯ. 17% ಎಸ್ಸಿ ಮೀಸಲಾತಿ ಜಾರಿಗೆ ಕಾನೂನು ಹೋರಾಟಕ್ಕೆ ಸರ್ಕಾರ ಮುಂದಾಗಬೇಕು. ರಾಜ್ಯಪಾಲರು ಒಳ ಮೀಸಲಾತಿ ಮಸೂದೆಗೆ ಒಪ್ಪಿಗೆ ಕೊಟ್ಟಿದ್ದರೂ ಕಾನೂನು ಸಂಘರ್ಷ ಮುಂದುವರಿಸಬೇಕಿದೆ. ಹೀಗಾಗಿ ಹಳೇ ಸೂತ್ರದ ಅನ್ವಯ  ಅಂದರೆ 15% ಎಸ್ಸಿ, 3% ಎಸ್ಟಿ ಮೀಸಲಾತಿಯೋಂದಿಗೆ ನೇಮಕಾತಿಗೆ ತೀರ್ಮಾನಿಸಲಾಗಿದೆ.

ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಖಾಲಿ ಇರುವ ಎರಡೂವರೆ ಲಕ್ಷ ಉದ್ಯೋಗ ಭರ್ತಿಗೆ ಸರ್ಕಾರ ಮೊದಲ ಹೆಜ್ಜೆ ಇಟ್ಟಿದೆ. ಒಳ ಮೀಸಲಾತಿ ಬಿಲ್‌ಗೂ ರಾಜ್ಯಪಾಲರಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈ ಬಗ್ಗೆಯೂ ಕ್ಯಾಬಿನೆಟ್‌ನಲ್ಲಿ ಚರ್ಚಿಸಲಾಗಿದೆ. ಈಗ ಹೊಸ ನೇಮಕಾತಿಗೆ ಅಧಿಸೂಚನೆ ಹೊರಡಿಸುವ ಕುರಿತು ತೀರ್ಮಾನಿಸಿದ್ದು, ಮೀಸಲಾತಿ ಗೊಂದಲದ ನಡುವೆ ನೇಮಕಾತಿ ಪ್ರಕ್ರಿಯೆ ಹೇಗೆ ನಡೆಯುತ್ತೆ ಎನ್ನುವ ಕುತೂಹಲ ಮೂಡಿಸಿದೆ.

Be the first to comment

Leave a Reply

Your email address will not be published. Required fields are marked *

ad image