ಕಲಬುರಗಿ: ಆಳಂದ ಲಾಡ್ಲೆ ಮಶಾಕ್ ದರ್ಗಾ ಹಾಗೂ ರಾಘವ ಚೈತನ್ಯ ಶಿವಲಿಂಗಕ್ಕೆ ಶಿವರಾತ್ರಿಯಂದು 15ಜನರಿಗೆ ಪೂಜೆಗೆ ಅನುಮತಿ ನೀಡುವಂತೆ ಹಿಂದೂ ಸಂಘಟನೆ ಮುಖಂಡರು ಕಲಬುರಗಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಫೆ.11 ರಂದು ಅರ್ಜಿದಾರರೊಬ್ಬರಿಗೆ ಪೂಜೆಗೆ ಅನುಮತಿ ನೀಡಿ ಕಲಬುರಗಿ ಹೈಕೋರ್ಟ್ ಪೀಠ ಆದೇಶ ಹೊರಡಿಸಿತ್ತು. ಇನ್ನೂ ಕಳೆದ ವರ್ಷ 15ಜನರಿಗೆ ಅವಕಾಶ ನೀಡಲಾಗಿತ್ತು, ಈ ಬಾರಿಯೂ 15ಜನರಿಗೆ ಅನುಮತಿ ನೀಡಿ ಎಂದು ಹಿಂದೂ ಮುಖಂಡರು ಮನವಿ ಮಾಡಿದ್ದಾರೆ

ಅವಶ್ಯಕತೆ ಇದ್ದರೆ ಜಿಲ್ಲಾಡಳಿತ ಹೆಚ್ಚಿನ ಜನರಿಗೆ ಅನುಮತಿ ನೀಡಬಹುದು ಎಂದು ಹೈಕೋರ್ಟ್ ಸೂಚಿಸಿದೆ. ಹೈಕೋರ್ಟ್ ಆದೇಶದಂತೆ ನಮ್ಮ ಮನವಿಯನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ. ಅನುಮತಿ ನೀಡದಿದ್ದರೆ ಪುನಃ ಕೋರ್ಟ್ ಮೊರೆ ಹೋಗುವುದಾಗಿ ಹಿಂದೂ ಸಂಘಟನೆ ಮುಖಂಡರು ಎಚ್ಚರಿಕೆ ನೀಡಿದ್ದಾರೆ






Be the first to comment
Leave a Reply