ಬೆಂಗಳೂರಿನ ಅಂಜನಾಪುರದಲ್ಲಿ ತಪ್ಪದ ಚಿರತೆ ಭೀತಿ – ಮನೆಯಿಂದ ಹೊರ ಬರಲು ಭಯ ಪಡ್ತಿರೋ ಜನ!

ಬೆಂಗಳೂರು: ದಕ್ಷಣಿದಲ್ಲಿರೋ ಅಂಜನಾಪುರದ ಜನರು ಅಂಜಿಕೆ ಅನ್ನೋದೇ ಇಲ್ಲದೇ ನೆಮ್ಮದಿಯಾಗಿ ಇದ್ರು. ಆದ್ರೇ ಕಳೆದ ಎರಡುವಾರದಿಂದ ಅಂಜಿಕೆ ಅಂದ್ರೇನು ಅನ್ನೋದನ್ನ ಚಿರತೆ (Leopard) ತೋರಿಸಿದೆ. ಪದೇ ಪದೇ ಕಾಣಿಸ್ತಿರೋ ಚಿರತೆಯೊಂದು ಅಂಜನಾಪುರದ ಜನರ ನಿದ್ದೆಗೆಡಿಸಿದೆ.

ಅದೊಂದು ಚಿರತೆ, ಅಂಜಾನಪುರದ (Anjanapura) ನಿವಾಸಿಗಳ ಎದೆ ಬಡಿತ ಜೋರಾಗಿಸಿದೆ. ಚಿರತೆ ಕಂಡ ಜನ ಭಯಭೀತರಾಗಿದ್ದಾರೆ. ಒಂದ್ಕಡೆ ನಿವಾಸಿಗಳು ಭಯ ಪಡುತ್ತಿದ್ದರೆ, ಮತ್ತೊಂದ್ಕಡೆ ಆ ಏರಿಯ ಹೆಸರು ಹೇಳಿದ್ರೆ ಸಾಕು ಆಟೋ ಹಾಗೂ ಡೆಲಿವರಿ ಬಾಯ್‌ಗಳು ಬರೋದಕ್ಕೆ ಹಿಂದೇಟು ಹಾಕ್ತಿದ್ದಾರೆ. ಬೆಳಗಿನ ಸಮಯದಲ್ಲೇ ಇಡೀ ಏರಿಯಾದ ಜನ ಮನೆಯಿಂದ ಹೊರ ಬರೋದಕ್ಕೆ ಭಯ ಪಡ್ತಿದ್ದಾರೆ.

ಆದರೆ ಕಳೆದ 2 ವಾರಗಳ ಹಿಂದೆ ಅಂಜನಾಪುರದ ಬಿಡಿಎ ಬಡಾವಣೆಯಲ್ಲಿ ಕಾಣಿಸಿಕೊಂಡ ಚಿರತೆ ನಾನು ಎಲ್ಲೂ ಹೋಗಿಲ್ಲ ಇಲ್ಲೇ ಓಡಾಡ್ತಿದ್ದೀನಿ ಅಂತಾ ಆಗಾಗ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿದೆ. ಪದೇ ಪದೇ ನಾಯಿಗಳ ಮೇಲೆ ಅಟ್ಯಾಕ್ ಮಾಡಿದ್ದು, ಜನರ ಮುಂದೆ ಪ್ರತ್ಯಕ್ಷವಾಗಿ ಜನರನ್ನ ಭಯ ಬೀಳಿಸಿದೆ.

ಅಂಜನಾಪುರದಲ್ಲಿ ಚಿರತೆ ಕಾಣಿಸಿಕೊಂಡಿರುವ ವಿಚಾರ ಹಬ್ಬುತಿದಂತೆ ಆಟೋ ಚಾಲಕರು ಸಂಜೆ ಬಳಿಕ ಅಂಜನಾಪುರದ ಕಡೆಗೆ ಬರೋದನ್ನೇ ನಿಲ್ಲಿಸಿದ್ದಾರೆ. ಡೆಲಿವರಿ ಬಾಯ್ಸ್ ಅಂತೂ ಆ ಕಡೆ ಮುಖ ಮಾಡುತ್ತಿಲ್ಲ. ಬಂದ್ರೂ 3-4 ಜನ ಒಟ್ಟಿಗೆ ಬರ್ತಿದ್ದಾರಂತೆ, ಜೊತೆಗೆ ಅಲ್ಲಿನ ನಿವಾಸಿಗಳು ಸಂಜೆಯಾದ್ರೆ ಮನೆಯಿಂದ ಹೊರ ಬರುತ್ತಿಲ್ಲ. ಮಹಿಳೆಯರಂತೂ ಒಬ್ಬೋಬರೇ ಓಡಾಡೋದನ್ನೇ ನಿಲ್ಲಿಸಿದ್ದಾರೆ. ಹೀಗಾಗಿ ಭಯದ ವಾತಾವರಣದಲ್ಲಿರುವ ಜನ ಅದಷ್ಟೂ ಬೇಗ ಚಿರತೆ ಹಿಡಿಯಿರಿ ಅಂತಾ ಮನವಿ ಮಾಡಿದ್ದಾರೆ.
ಚಿರತೆ ಭಯ ಜನರನ್ನ ಬೆಂಬಿಡದೇ ಕಾಡುತಿದ್ರೆ ಇತ್ತ ಅರಣ್ಯ ಇಲಾಖೆ ಚಿರತೆ ಹಿಡಿಯಲು ಬೋನ್ ವ್ಯವಸ್ಥೆ ಮಾಡಿದೆ. ಅದ್ರೆ ನಾಲ್ಕು ವರ್ಷ ಪಳಗಿರುವ ಚಿರತೆ ಮಾತ್ರ ಬೋನ್‌ಗೆ ಬೀಳದೆ ಎಸ್ಕೇಪ್ ಆಗುತ್ತಿದೆ.

Be the first to comment

Leave a Reply

Your email address will not be published. Required fields are marked *

ad image