ಶಾಸಕ ಬೈರತಿ ಬಸವರಾಜ್​ಗೆ ಲುಕ್​​​ಔಟ್ ನೋಟಿಸ್!

ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬೈರತಿ ಬಸವರಾಜ್​​ಗೆ ಮತ್ತೆ ಬಂಧನದ ಭೀತಿ ಎದುರಾಗಿದೆ. ಬೈರತಿ ಬಸವರಾಜ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು‌ ಅರ್ಜಿಯನ್ನ ಹೈಕೋರ್ಟ್​​ ವಜಾ‌ಗೊಳಿಸಿ ಆದೇಶ ಹೊರಡಿಸಿದ್ದು, ಬಿಜೆಪಿ ಶಾಸಕನಿಗೆ ಸಿಐಡಿ ಟೀಂ ಲುಕ್​ ಔಟ್​ ನೋಟಿಸ್ ಜಾರಿ ಮಾಡಿದೆ. ಶಾಸಕ ಬೈರತಿ ಬಸವರಾಜ್ ಅವರನ್ನು ಬಂಧಿಸಲು ಸಿಐಡಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಬೇಲ್ ಅರ್ಜಿ 2 ಬಾರಿ ರದ್ದಾದ ಬೆನ್ನಲ್ಲೇ ಬೈರತಿ ಬಸವರಾಜ್ ವಿದೇಶಕ್ಕೆ ತೆರಳುವುದನ್ನು ತಡೆಯುವ ನಿಟ್ಟಿನಲ್ಲಿ ಲುಕ್ ಔಟ್ ನೋಟಿಸ್ ಕೂಡ ಜಾರಿ ಮಾಡಲಾಗಿದೆ.

ಶಾಸಕ ಬೈರತಿ ಬಸವರಾಜ್​​​​ಗೆ ಲುಕ್ ಔಟ್ ನೋಟಿಸ್!

ಶಾಸಕರಿಗಾಗಿ ಶೋಧ

ಶಾಸಕ ಬೈರತಿ ಬಸವರಾಜ್​ಗಾಗಿ ಹಲವು ರಾಜ್ಯಗಳಲ್ಲಿ ಸಿಐಡಿ ಟೀಮ್​ ಹುಡುಕಾಟ ನಡೆಸಿದೆ. ಕರ್ನಾಟಕ, ಗೋವಾ, ಕೇರಳ ಮಹಾರಾಷ್ಟ್ರ, ತಮಿಳುನಾಡು, ಆಂಧ್ರ, ತೆಲಂಗಾಣದಲ್ಲಿ ಸಿಐಡಿಯ ವಿಶೇಷ ತಂಡಗಳಿಂದ ಸರ್ಚಿಂಗ್ ಮುಂದುವರಿಸಿದೆ ಎಂದು ತಿಳಿದು ಬಂದಿದೆ. ಶಾಸಕ ಬೈರತಿ ಬಸವರಾಜ್ ಅವರು ಮೊಬೈಲ್​​ಗಳನ್ನ ಆನ್​ ಮಾಡದೆ ಸ್ವಿಚ್​ ಆಫ್​ ಮಾಡಿಕೊಂಡು ತಲೆಮರೆಸಿಕೊಂಡಿದ್ದಾರೆ.  ಆಪ್ತರ ಮೂಲಕ ಕುಟುಂಬಸ್ಥರ ಜೊತೆ ಸಂಪರ್ಕದಲ್ಲಿರೋ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಬೈರತಿ ಆಪ್ತರ ಮೇಲೂ ಸಿಐಡಿ ತಂಡ ಕಣ್ಣಿಟ್ಟಿದೆ.

ಟ್ರಾವೆಲ್​ ಹಿಸ್ಟರಿ ಜಾಲಾಟ

ಬೆಂಗಳೂರಿನಲ್ಲಿಯೇ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದಾರೆ. ಬರ್ತ್ ಡೇ ಮತ್ತು ಜಾತ್ರೆಯಲ್ಲಿ ಭಾಗಿಯಾದ ನಂತರ ಬೈರತಿ ಫೋನ್​ಗಳು ಸ್ವಿಚ್ಡ್ ಆಫ್ ಆಗಿದೆ. ಇದೀಗ ಬೈರತಿ ಬಸವರಾಜ್ ಟ್ರಾವೆಲ್ ಹಿಸ್ಟರಿಯನ್ನ ಸಿಐಡಿ ಟೀಮ್ ಕೆದಕುತ್ತಿದೆ. ಹೊರ ರಾಜ್ಯಗಳಲ್ಲಿ ತಲೆಮರೆಸಿಕೊಂಡ ಶಂಕೆ ಹಿನ್ನೆಲೆ ವಿವಿಧ ತಂಡಗಳಾಗಿ ಸಿಐಡಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ.

Be the first to comment

Leave a Reply

Your email address will not be published. Required fields are marked *

ad image