
ಬೆಂಗಳೂರು: ಇತ್ತೀಚೆಗೆ ಕೆಲ ಅಭಿಮಾನಿಗಳು ತಮ್ಮ ನೆಚ್ಚಿನ ನಟರ ಸಿನಿಮಾ ಪ್ರಚಾರಕ್ಕಾಗಿ ಹೇಗೆಲ್ಲಾ ಕೀಳುಮಟ್ಟಕ್ಕಿಳಿಯುತ್ತಿದ್ದಾರೆ ಅನ್ನೋದಕ್ಕೆ ಅಮುಕು ಡುಮುಕು ಮಂಜು (Amuku Dumuku Manju) ಘಟನೆ ತಾಜಾ ಉದಾಹರಣೆಯಾಗಿದೆ. ಸೂರಿ ಅಣ್ಣ ಸಿನಿಮಾದ ಪ್ರಚಾರಕ್ಕಾಗಿ ನಕಲಿ ಪೆಟ್ರೋಲ್ ಸೇವಿಸಿದ್ದ ಸೋಷಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ ವಿರುದ್ಧ ಕೇಸ್ ದಾಖಲಾಗಿದೆ. ಸೂರಿ ಅಣ್ಣ ಸಿನಿಮಾಗಾಗಿ (Suri Anna Cinema) ಮಂಜು ʻಅಮುಕು ಡುಮುಕುʼ ಮಂಜು ಪೆಟ್ರೋಲ್ ಕುಡಿದಂತೆ ಡ್ರಾಮಾ ಮಾಡಿ ಅಂಧಾಭಿಮಾನ ಮೆರೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೆಜೆಸ್ಟಿಕ್‌ನ ಥಿಯೇಟರ್ ಒಂದರಲ್ಲಿ ಸೂರಿ ಅಣ್ಣ ಫಿಲ್ಮ್ ಹೀರೊ ಮುಂದೆ ನಕಲಿ ಪೆಟ್ರೋಲ್ ಕುಡಿದು ಮಂಜು ಆತ್ಮಹತ್ಯೆಗೆ ಯತ್ನಿಸಿದಂತೆ ನಾಟಕವಾಡಿದ್ದಾನೆ. ಈ ವಿಡಿಯೋ ವೈರಲ್ ಆಗ್ತಿದ್ದಂತೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಮಂಜು ವಿರುದ್ಧ ಕೇಸ್ ದಾಖಲಾಗಿದೆ. ಆತ್ಮಹತ್ಯೆಗೆ ಯತ್ನಿಸಿರುವ ಆರೋಪದ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಇನ್ನೂ ಮಂಜು ವಿರುದ್ಧ ಎಫ್‌ಐಆರ್ ದಾಖಲಾದ ಬೆನ್ನಲ್ಲೇ ತಾನು ಮಾಡಿದ್ದೆಲ್ಲವೂ ಡ್ರಾಮಾ ಎನ್ನುವ ಮತ್ತೊಂದು ವಿಡಿಯೋ ರಿಲೀಸ್ ಮಾಡಿದ್ದಾನೆ. ನಾನು ಪ್ರಾಂಕ್ ಮಾಡ್ತಿರೋದಾಗಿ ಮೊದಲೇ ಮಾಡಿದ್ದ ವಿಡಿಯೋ ಬಿಡುಗಡೆ ಮಾಡಿದ್ದಾನೆ. ಜೇನು ತುಪ್ಪ, ಜೀರಾ ಪಾನಿಯಾ ಮಿಕ್ಸ್ ಮಾಡಿ, ಪೆಟ್ರೋಲ್ ರೀತಿಯಲ್ಲಿ ಕಾಣುವಂತೆ ಪಾನೀಯ ತಯಾರಿಸಿದ್ದ ಅಮುಕು ಡುಮುಕು, ಕೇಸ್ ದಾಖಲಾಗ್ತಿದ್ದಂತೆ ವಿಡಿಯೋ ಹಂಚಿಕೊಂಡಿದ್ದಾನೆ.






Be the first to comment
Leave a Reply